Advertisement
ಚಿನಕುರಳಿ ಗ್ರಾಪಂ ಪಿಡಿಒ ಆರತಿಕುಮಾರಿ, ಹೊನಗಾನಹಳ್ಳಿ ಗ್ರಾಪಂ ಪಿಡಿಒ ಎಂ.ಪಿ.ರಾಜು,ಗುಮ್ಮನಹಳ್ಳಿ ಗ್ರಾಪಂ ಪಿಡಿಒ ಕೆ.ಎನ್.ಸ್ವಾಮಿಗೌಡ,ಹೊನಗಾನಹಳ್ಳಿ ಗ್ರಾಪಂ ಪಿಡಿಒ ಆಗಿದ್ದ ಹಾಲಿ ಶ್ರೀರಂಗಪಟ್ಟಣ ತಾಲೂಕಿನ ಹೊಸಹಳ್ಳಿ ಗ್ರಾಪಂ·ಪಿಡಿಒ ಕೆ.ಮಹೇಶ, ಚಿನಕುರಳಿ ಗ್ರಾಪಂ ಪಿಡಿಒ ಆಗಿ ಕಾರ್ಯನಿರ್ವಹಿಸಿ ಈಗ ಶ್ರೀರಂಗಪಟ್ಟಣ ತಾಲೂಕು ಕೆ.ಶೆಟ್ಟಹಳ್ಳಿ ಗ್ರಾಪಂ ಪಿಡಿಒಪಿ.ಶಿವಣ್ಣ, ಹೊನಗಾನಹಳ್ಳಿ ಗ್ರಾಪಂ ಪ್ರಭಾರ ಪಿಡಿಒ ಆಗಿದ್ದ ಈಗ ಲಕ್ಷ್ಮೀಸಾಗರ ಗ್ರಾಪಂ ಪಿಡಿಒ ಆಗಿರುವ ಕೆ.ಎಸ್.ನಾಗರಾಜು ಕ್ರಿಮಿನಲ್ ಪ್ರಕರಣ ತೂಗುಗತ್ತಿ ಎದುರಿಸುತ್ತಿರುವವರು.
Related Articles
Advertisement
ಸಂಸದರ ಸಂಬಂಧಿ ವಿರುದ್ಧವೂ ಕ್ರಿಮಿನಲ್ ಕೇಸ್ ಚಿನಕುರಳಿ ಗ್ರಾಪಂ ಮಾಜಿ ಅಧ್ಯಕ್ಷ ಹಾಗೂ ಸಂಸದ ಸಿ.ಎಸ್.ಪುಟ್ಟರಾಜು ಸಹೋದರನ ಮಗ ಸಿ.ಅಶೋಕ್ ವಿರುದಟಛಿವೂ ಕ್ರಿಮಿನಲ್ ಪ್ರಕರಣದ ತೂಗುಗತ್ತಿ ಬಿದ್ದಿದೆ. ಅಕ್ರಮ ಕಲ್ಲುಗಣಿಗಾರಿಕೆ ನಡೆಸಲು ಜಿಲ್ಲಾಡಳಿತವನ್ನು ದುರುಪಯೋಗ ಪಡಿಸಿಕೊಂಡಿರುವ ಆರೋಪದ ಮೇಲೆ ಸಂಸದ ಸಿ.ಎಸ್.ಪುಟ್ಟರಾಜು ಇದೀಗ ಕಾನೂನು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಅವರ ನಂತರ ಅಕ್ರಮಕ್ಕೆ ಕುಮ್ಮಕ್ಕು ನೀಡಿದವರೂ ಈಗ ಕಾನೂನು ಸಂಕಷ್ಟ ಎದುರಿಸುವುದು ಅನಿವಾರ್ಯವಾಗಿದೆ.
3.30 ಕೋಟಿ ರೂ. ತೆರಿಗೆ ಹಣ ವಸೂಲಿ ಪಾಂಡವಪುರ ತಾಲೂಕಿನ ಚಿನಕುರಳಿ, ಹೊನಗಾನಹಳ್ಳಿ ಹಾಗೂ ಗುಮ್ಮನಹಳ್ಳಿ ಪಂಚಾಯಿತಿಗಳ 1764 ಆಸ್ತಿಗಳಲ್ಲಿ 3.30 ಕೋಟಿ ರೂ. ಮೊತ್ತದ ಆಸ್ತಿ ತೆರಿಗೆ ಸಂಗ್ರಹಿಸಿ ದುರುಪಯೋಗ ಮಾಡಿಕೊಂಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಈ ಪಂಚಾಯಿತಿಗಳು 2009-10ರಿಂದ 2015-16ರವರೆಗೆ ನಿಯಮ ಬಾಹಿರವಾಗಿ ತೆರಿಗೆ, ಶುಲ್ಕ ವಸೂಲಿ ಮಾಡಿ ಹಣ ದುರುಪಯೋಗ ಪಡಿಸಿಕೊಂಡಿರುವ ಪ್ರಕರಣದ ಬಗ್ಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಡಾ.ಎನ್. ನಾಗಲಾಂಬಿಕಾ ದೇವಿ ಜಿಪಂ ಲೆಕ್ಕಪತ್ರ ವಿಭಾಗದಿಂದ ತನಿಖೆ ನಡೆಸುವಂತೆ ಜಿಪಂ ಸಿಇಒ ಬಿ.ಶರತ್‌ಗೆ ಸೂಚಿಸಿದ್ದರು. ಕಾನೂನು ಬಾಹಿರವಾಗಿ ಸಂಗ್ರಹಿಸಿದ್ದ ತೆರಿಗೆ, ದರ ಮತ್ತು ಶುಲ್ಕವನ್ನು ನಿಯಮಾನುಸಾರ ವೆಚ್ಚ ಮಾಡದೆನಿಯಮಾವಳಿಗೆ ವಿರುದ್ಧವಾಗಿ ವೆಚ್ಚ ಮಾಡಿರುವುದು ತನಿಖೆಯಿಂದ ದೃಢಪಟ್ಟಲ್ಲಿ ಸಂಬಂಧಿಸಿದ ಗ್ರಾಪಂ ಅಧ್ಯಕ್ಷರು, ಪಿಡಿಒ, ಗ್ರಾಪಂ ಕಾರ್ಯದರ್ಶಿಗಳ ವಿರುದ್ಧ ಕ್ರಮ ಜರುಗಿಸುವಂತೆ ಆದೇಶದಲ್ಲಿ ತಿಳಿಸಿದ್ದರು.