Advertisement
ಗುರುವಾರ ನಡೆಯುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮಹಿಳಾ ಸ್ನೇಹಿ ಸಖಿ ಮತದಾನ ಕೇಂದ್ರಗಳಿಗೆ “ಉದಯವಾಣಿ ಸುದಿನ’ವು ಚುನಾವಣೆಯ ಮುನ್ನಾ ದಿನವಾದ ಬುಧವಾರ ಭೇಟಿ ನೀಡಿದಾಗ ಕಂಡು ಬಂದ ಚಿತ್ರಣವಿದು.
ಸಖಿ ಮತಗಟ್ಟೆಗಳೆಂದು ಆಯ್ಕೆ ಮಾಡಿರುವ ಮತಗಟ್ಟೆ ಹೊರಭಾಗದಲ್ಲಿ ಇಬ್ಬರು ಮಹಿಳೆಯರು ಬಣ್ಣದ ಸೀರೆ ಯುಟ್ಟು ಮತದಾರರನ್ನು ಸ್ವಾಗತಿಸುವ ದೊಡ್ಡ ಪ್ರವೇಶದ್ವಾರ ರಚಿಸಲಾಗಿದೆ. ಮತದಾನದ ಹಕ್ಕಿನ ಬಗ್ಗೆ ಮಹಿಳೆಯರು ಅರಿವು ಮೂಡಿಸುತ್ತಿರುವ ಚಿತ್ರಣವನ್ನು ಈ ದ್ವಾರದಲ್ಲಿ ಬಿಂಬಿಸಲಾಗಿದೆ. ರಸ್ತೆ ಬದಿಯಲ್ಲಿ ದೊಡ್ಡದಾಗಿ ಪ್ರವೇಶದ್ವಾರವನ್ನು ಅಲಂಕರಿಸಲಾಗಿದ್ದು, ನೋಡುಗರನ್ನು ಆಕರ್ಷಿಸುತ್ತಿವೆ.
Related Articles
ಮಹಿಳಾಸ್ನೇಹಿ ಮತಗಟ್ಟೆಯ ಒಳಗಡೆ ಸುತ್ತಲೂ ವಿವಿಧ ಬಣ್ಣದ ಅಲಂಕಾರಿಕ ಬಟ್ಟೆ ಮತ್ತು ಹಲವು ಬಣ್ಣದ ಬಲೂನಿನಿಂದ ಅಲಂಕರಿಸಲಾಗಿದೆ. ಇವಿಎಂ ಮೆಶಿನ್ ಇಟ್ಟಿರುವ ಟೇಬಲ್, ಅಧಿಕಾರಿಗಳು ಕುಳಿತುಕೊಳ್ಳುವ ಚಯರ್ ಮತ್ತು ಟೇಬಲ್‌ಗಳನ್ನೂ ನೀಲಿ ಸೇರಿದಂತೆ ಹಲವು ಬಣ್ಣದಿಂದ ಅಲಂಕರಿಸಲಾಗಿದೆ.
Advertisement
ಪಿಂಕ್ ಮತಗಟ್ಟೆ ಬದಲಾಗಿ ಸಖಿಮಹಿಳಾ ಮತದಾರರಿಗೆ ಅನುಕೂಲ ವಾಗುವ ನಿಟ್ಟಿನಲ್ಲಿ ಕಳೆದ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಪಿಂಕ್ ಮತಗಟ್ಟೆಗಳನ್ನು ಮಾಡಲಾಗಿತ್ತು. ಆದರೆ ಈ ಬಾರಿ ಪಿಂಕ್ ಬಣ್ಣ ವನ್ನು ಎಲ್ಲಿಯೂ ಬಳಸದಂತೆ ಚುನಾವಣೆ ಆಯೋಗ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಪಿಂಕ್ ಮತಗಟ್ಟೆಗಳನ್ನು ಸಖೀ ಮತಗಟ್ಟೆಗಳಾಗಿ ಬದಲಾಯಿಸಲಾಗಿದೆ. ಈ ಮತಗಟ್ಟೆಯಲ್ಲಿ ಭದ್ರತಾ ಸಿಬಂದಿ, ಪೊಲೀಸರು ಸಹಿತ ಎಲ್ಲ ಸಿಬಂದಿ ಮಹಿಳೆಯರೇ ಆಗಿರುತ್ತಾರೆ. ಈ ನೆಲೆಯಲ್ಲಿ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಲಿ ಎಂಬುದು ಆಯೋಗದ ಇರಾದೆ. ಸೆಲ್ಫಿ ಕಾರ್ನರ್
ಪ್ರಸ್ತುತ ಎಲ್ಲರೂ ಸಾಮಾಜಿಕ ಜಾಲತಾ ಣಗಳಲ್ಲಿ ಹೆಚ್ಚು ಕ್ರೀಯಾಶೀಲರಾಗಿದ್ದು, ತಮ್ಮ ದೈನಂದಿನ ಚಟುವಟಿಕೆಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಅಪ್‌ಡೇಟ್ ಮಾಡುತ್ತಿರುತ್ತಾರೆ. ಅದರಲ್ಲೂ ಸೆಲ್ಫಿ ತೆಗೆದು ಅಪ್‌ಲೋಡ್ ಮಾಡುವುದು ಸಾಮಾನ್ಯವಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಸಖೀ ಮತಗಟ್ಟೆಗಳ ಹೊರಭಾಗದಲ್ಲಿ ಸೆಲ್ಫಿ ಕಾರ್ನರ್ ಮಾಡಲಾಗಿದೆ. ಮತದಾನ ಮಾಡಿದ ಬಳಿಕ ಅಲ್ಲಿ ಸೆಲೀ ತೆಗೆದು ಸಂಭ್ರಮಿಸಬಹುದು. ಬಣ್ಣ ಬಣ್ಣದ ಬಟ್ಟೆ ಧರಿಸಲಿದ್ದಾರೆ
ಮಹಿಳಾ ಅಧಿಕಾರಿಗಳು
ಸಖಿ ಮತಗಟ್ಟೆಗಳಲ್ಲಿ ಮತಗಟ್ಟೆ ಅಧಿಕಾರಿ ಸಹಿತ ಅಧಿಕಾರಿಗಳೂ ಮಹಿಳೆಯರೇ ಆಗಿರುತ್ತಾರೆ. ಈ ಎಲ್ಲ ಅಧಿಕಾರಿಗಳು ಮತದಾನದ ದಿನದಂದು ಬಣ್ಣ ಬಣ್ಣದ ಬಟ್ಟೆ ಧರಿಸಿ ಮತದಾನ ಕೇಂದ್ರಕ್ಕೆ ಬಂದು ಚುನಾವಣೆ ಕರ್ತವ್ಯ ನಿರ್ವಹಿಸಲಿದ್ದಾರೆ. ಸಖೀ ಮತಗಟ್ಟೆಗಳನ್ನು ಕಲರ್‌ಫುಲ್ ಮಾಡ ಲಾಗಿದೆ. ಮಹಿಳಾ ಸಬಲೀಕರಣ ಮತ್ತು ಮಹಿಳೆಯರನ್ನು ಹೆಚ್ಚಿನ ಸಂಖ್ಯೆ ಯಲ್ಲಿ ಮತದಾನ ಕೇಂದ್ರಗಳತ್ತ ಸೆಳೆಯಲು ಇದೊಂದು ಅತ್ಯುತ್ತಮ ವಿಧಾನ. ಇಲ್ಲಿ ಕರ್ತವ್ಯ ನಿರ್ವಹಿಸಲು ನಮಗೂ ಖುಷಿ ಯಾಗುತ್ತದೆ. ಇಲ್ಲಿ ಮತದಾನಕ್ಕೆ ಪುರುಷರೂ ಬರುತ್ತಾರಾದರೂ, ಮಹಿಳೆಯರಿಗೆ ಹೆಚ್ಚು ಪ್ರಾಧಾನ್ಯತೆ ನೀಡಲಾಗುತ್ತದೆ ಎಂದು ಹೇಳುತ್ತಾರೆ ಲೇಡಿಹಿಲ್ ಸಖಿ ಮತಗಟ್ಟೆ ಅಧಿಕಾರಿ ಡಾ.ರಾಜಲಕ್ಷ್ಮೀ ಎನ್‌ಕೆ.