Advertisement

ಮೋದಿ ಟೀ ಶರ್ಟ್ ಧರಿಸಿದ್ದ ಸಂತ್ರಸ್ತ ರೈತನನ್ನು ಹೊರ ಹಾಕಿದ ಕೈ ಕಾರ್ಯಕರ್ತರು

10:43 AM Aug 23, 2019 | sudhir |

ಬೆಳಗಾವಿ: ನೆರೆ ಪರಿಹಾರ ಪಡೆದುಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರವುಳ್ಳ ಟೀ ಶರ್ಟ್ ಧರಿಸಿಕೊಂಡು ಬಂದಿದ್ದ ನೆರೆ ಪೀಡಿತ ಸಂತ್ರಸ್ತ ರೈತನನ್ನು ಗ್ರಾಮ ಪಂಚಾಯಿತಿ ಆವರಣದಿಂದ ಹೊರಗೆ ಹಾಕಿ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

Advertisement

ಬೆಳಗಾವಿ ತಾಲೂಕಿನ ಅಂಬೇವಾಡಿ ಗ್ರಾಪಂ.ನಲ್ಲಿ ಬುಧವಾರ ಪ್ರವಾಹ ಸಂತ್ರಸ್ತರಿಗೆ ಜೀವನಾಂಶಕ ವಸ್ತುಗಳನ್ನು ಹಂಚಲು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರ ಪುತ್ರ ಮೃಣಾಲ್ ಹೆಬ್ಬಾಳಕರ ಆಗಮಿಸಿದ್ದರು. ಅಗತ್ಯ ವಸ್ತುಗಳನ್ನು ಪಡೆದುಕೊಳ್ಳಲು ಸಂತ್ರಸ್ತರ ಸಾಲಿನಲ್ಲಿ ಸುಜಯ್ ಯಳಗೂರಕರ ಎಂಬ ರೈತ ಮೋದಿ ಭಾವಚಿತ್ರವುಳ್ಳ ಕುಳಿತುಕೊಂಡಿದ್ದನು. ಇದನ್ನು ನೋಡಿದ ಕಾಂಗ್ರೆಸ್ ಕಾರ್ಯರ್ತರು ಆ ರೈತನನ್ನು ಹೊರಗೆ ಹಾಕಿದ್ದಾರೆ.

ಲೋಕಸಭೆ ಚುನಾವಣೆ ವೇಳೆ ಬಿಜೆಪಿಯ ಸುರೇಶ ಅಂಗಡಿ ಹಾಗೂ ಪ್ರಧಾನಿ ಮೋದಿ ಬಾವಚಿತ್ರವುಳ್ಳ ಟೀ ಶರ್ಟ್ಗಳನ್ನು ಹಂಚಲಾಗಿತ್ತು. ಇದೇ ಟೀ ಶರ್ಟ್ ಈ ರೈತ ಧರಿಸಿಕೊಂಡು ಬಂದಿದ್ದನು. ಮೋದಿ ಟೀ ಶರ್ಟ್ ಹಾಕಿಕೊಂಡು ಇಲ್ಲಿ ಬರಬಾರದು. ಇದು ಯಾವುದೇ ರಾಜಕೀಯ ಕಾರ್ಯಕ್ರಮವಲ್ಲ ಎಂದು ರೈತ ಸುಜಯ್ ನೊಂದಿಗೆ ಕಾಂಗ್ರೆಸ್‌ನವರು ವಾಗ್ವಾದ ನಡೆಸಿದ್ದಾರೆ. ಮಾತಿನ ಚಕಮಕಿಯಾಗಿ ಕೈ ಕೈ ಮಿಲಾಯಿಸುವಷ್ಟು ಗಲಾಟೆ ಆಗ ರೈತ ಸುಜಯ್ ಯಳಗೂರನನ್ನು ಹೊರಗೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಕಾಂಗ್ರೆಸ್ ಶಾಸಕಿಯ ಪುತ್ರ ಹಾಗೂ ಇತರೆ ಕಾರ್ಯಕರ್ತರ ದುಂಡಾವರ್ತನೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ಗುರುವಾರ ಅಂಬೇವಾಡಿ ಗ್ರಾಪಂ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಬಿಜೆಪಿ ಮುಖಂಡ ವಿನಯ ಕದಮ್ ನೇತೃತ್ವದಲ್ಲಿ ಗ್ರಾಪಂ ಕಚೇರಿಯೊಳಗೆ ಪಿಡಿಒ ಅವರನ್ನು ಒಳಗೆ ಹಾಕಿ ಕಾಂಗ್ರೆಸ್ಸಿಗರ ವಿರುದ್ಧ ಘೋಷಣೆ ಕೂಗಿದರು.

Advertisement

Udayavani is now on Telegram. Click here to join our channel and stay updated with the latest news.

Next