Advertisement

ವಾಯುಪಡೆಗೆ ಸದ್ಯದಲ್ಲೇ ಸಿಗಲಿದೆ ಎಚ್‌ಎಎಲ್‌ ತರಬೇತಿ ವಿಮಾನ

12:49 AM Sep 19, 2019 | Team Udayavani |

ನವದೆಹಲಿ: ವಾಯುಪಡೆಯ ಯುವ ಪೈಲಟ್‌ಗಳ ತರಬೇತಿಗಾಗಿ ಬಳಸುವ ಸಾಮಾನ್ಯ ಮಾದರಿಯ ಸುಮಾರು 70 ವಿಮಾನಗಳನ್ನು ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ನಿಂದ (ಎಚ್‌ಎಎಲ್‌) ಪಡೆಯಲು ಭಾರತೀಯ ವಾಯುಪಡೆ ತೀರ್ಮಾನಿಸಿದ್ದು, ಅದಕ್ಕೆ ಪೂರಕವಾದ ಪ್ರಸ್ತಾವನೆಯನ್ನು ಇನ್ನು ಮೂರು ತಿಂಗಳಲ್ಲಿ ಸಲ್ಲಿಸಲು ಐಎಎಫ್ ಆಲೋಚಿಸಿದೆ ಎಂದು ವಾಯುಪಡೆಯ ಮೂವರು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಸ್ವದೇಶಿ ತಂತ್ರಜ್ಞಾನದಲ್ಲಿ ಉತ್ಪಾದನೆಗೊಂಡಿರುವ “ಹಿಂದೂಸ್ತಾನ್‌ ಟಬೋ ಟ್ರೈನರ್ಸ್‌-40′ (ಎಚ್‌ಟಿಟಿ-40) ಎಂಬ ಹೆಸರಿನ 70 ವಿಮಾನಗಳನ್ನು ಪಡೆಯಲು, ಎಚ್‌ಎಎಲ್‌ಗೆ ಪ್ರಸ್ತಾವನೆ ಸಂಬಂಧಿತ ಮನವಿಯನ್ನು (ಆರ್‌ಎಫ್ಪಿ) ಸಲ್ಲಿಸಲು ಐಎಎಫ್ ನಿರ್ಧರಿಸಿದೆ ಎಂದು ಅವರು ತಿಳಿಸಿದ್ದಾರೆ ಎಂದು “ಹಿಂದೂಸ್ತಾನ್‌ ಟೈಮ್ಸ್‌’ ವರದಿ ಮಾಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next