Advertisement

ಗುರುನಾನಕ್‌ ಅರಮನೆ ಧ್ವಂಸ

10:49 PM May 27, 2019 | Team Udayavani |

ಲಾಹೋರ್‌: ಪಾಕಿಸ್ಥಾನದ ಪಂಜಾಬ್‌ ಪ್ರಾಂತ್ಯದಲ್ಲಿರುವ ಐತಿಹಾಸಿಕ ಗುರುನಾನಕ್‌ ಅರಮನೆಯನ್ನು ಧ್ವಂಸಗೊಳಿ ಸಲಾಗಿದೆ. ಕರ್ತಾರ್ಪುರ ಕಾರಿಡಾರ್‌ ನಿರ್ಮಾಣ ಮಾಡಿ ಗುರುನಾನಕ್‌ ಪ್ರಾರ್ಥನಾ ಮಂದಿರಕ್ಕೆ ತೆರಳಲು ಅವಕಾಶ ಮಾಡಿಕೊಡುತ್ತಿರುವ ಪಾಕಿಸ್ಥಾನದ ನಿಜ ಬಣ್ಣ ಈ ಘಟನೆಯಿಂದ ಬಹಿರಂಗವಾಗಿದೆ.

Advertisement

4 ಮಹಡಿಯ ಈ ಕಟ್ಟಡದ ಗೋಡೆಗಳನ್ನು ಧ್ವಂಸಗೊಳಿಸಿ, ಇದರ ಅಮೂಲ್ಯವಾದ ಕಿಟಕಿ ಹಾಗೂ ಬಾಗಿಲುಗಳನ್ನು ಮಾರಾಟ ಮಾಡಲಾಗಿದೆ. ಈ ಅರಮನೆ ಸುಮಾರು 16 ಕೋಣೆಗಳನ್ನು ಹೊಂದಿತ್ತು. ಛಾವಣಿಗಳಿಗೆ ಅತ್ಯಂತ ಅಮೂಲ್ಯವಾದ ಮರದ ತುಂಡುಗಳನ್ನು ಬಳಸಲಾಗಿತ್ತು. ಈ ಅರಮನೆ ವೀಕ್ಷಣೆಗೆ ದೇಶ ವಿದೇಶಗಳಿಂದಲೂ ಜನರು ಬರುತ್ತಿದ್ದರು.

ಮೂಲಗಳ ಪ್ರಕಾರ ಪಾಕಿಸ್ಥಾನದ ಪ್ರಾಚ್ಯ ವಸ್ತುಗಳನ್ನು ನಿರ್ವಹಿಸುವ ಔಖಾಫ್ ಇಲಾ ಖೆಯ ನೆರವಿನಿಂದಲೇ ಕೆಲವು ಪ್ರಭಾವಶಾಲಿ ವ್ಯಕ್ತಿಗಳು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಅಲ್ಲದೆ, ಇದರ ಗೋಡೆಗಳನ್ನು ಧ್ವಂಸಗೊಳಿಸಿ ಇಲ್ಲಿ ಕಟ್ಟಡಗಳನ್ನೂ ನಿರ್ಮಿಸಲಾಗಿದೆ. ಅಷ್ಟೇ ಅಲ್ಲ, ಈ ಅರಮನೆಯ ದಾಖಲೆಗಳನ್ನೂ ಔಖಾಫ್ ಇಲಾಖೆ ನಾಪತ್ತೆ ಮಾಡಿದೆ ಎಂದು ಪಾಕಿಸ್ಥಾನದ ಡಾನ್‌ ಪತ್ರಿಕೆ ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next