Advertisement
149 ವರ್ಷಗಳ ಬಳಿಕಗುರುವಾರ ಗುರು ಪೂರ್ಣಿಮೆ ದಿನ. ಈ ವರ್ಷ ಚಂದ್ರಗ್ರಹಣ ಮತ್ತು ಗುರು ಪೂರ್ಣಿಮೆ ಒಂದೇ ದಿನ ನಡೆಯುತ್ತಿದೆ. ಈ ಹಿಂದೆ 1870ರ ಜು.12ರಂದು ಅಪರೂಪದ ಚಂದ್ರ ಗ್ರಹಣ ಮತ್ತು ಗುರು ಪೂರ್ಣಿಮೆ ಒಂದೇ ದಿನ ನಡೆದಿತ್ತು. ಅಂದರೆ ಇದು ಮರಳಿ ಘಟಿಸುತ್ತಿರುವುದು 149 ವರ್ಷಗಳ ಬಳಿಕ. ಈ ಕಾರಣಕ್ಕೆ ಇದನ್ನು ಐತಿಹಾಸಿಕ ಚಂದ್ರ ಗ್ರಹಣ ಎನ್ನಲಾಗುತ್ತಿದೆ. ಇದಲ್ಲದೆ, ಇದು ಈ ವರ್ಷದ ಕೊನೆಯ ಚಂದ್ರಗ್ರಹಣ. ನಮ್ಮಲ್ಲಿ ಅರುಣಾಚಲ ಪ್ರದೇಶ ಹೊರತು ಪಡಿಸಿ ಉಳಿದ ಕಡೆಗಳಲ್ಲಿ ಈ ಗ್ರಹಣ ಗೋಚರಿಸಲಿದೆ.