Advertisement

ಬಿಜೆಪಿಯಲ್ಲಿನ ಬೆಳವಣಿಗೆ ನೋವು ತಂದಿದೆ

01:18 PM Oct 07, 2017 | |

ಪಿರಿಯಾಪಟ್ಟಣ: ಕಳೆದ 3 ವರ್ಷಗಳಿಂದ ಪಿರಿಯಾಪಟ್ಟಣದಲ್ಲಿ ಕೆಲಸ ಮಾಡುವುದಾಗಿ ಪಕ್ಷದ ಹಿಂದಿನ ಪಕ್ಷದ ರಾಜಾಧ್ಯಕ್ಷರು ಮತ್ತು ಯಡಿಯೂರಪ್ಪನವರಿಗೆ ತಿಳಿಸಿ ಜವಾಬ್ದಾರಿ ಪಡೆದು ಕೆಲಸ ಮಾಡುತ್ತಿದ್ದೇನೆ. ಆದರೆ, ಪಕ್ಷದಲ್ಲಿ ಅನಗತ್ಯ ಬೆಳವಣಿಗೆಗಳು ನಡೆಯುತ್ತಿರುವುದು ಅಸಮಾಧಾನ ತಂದಿದೆ ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಸಿ.ಎಚ್‌.ವಿಜಯಶಂಕರ್‌ ಅಸಮಾಧಾನ ಹೊರಹಾಕಿದರು.

Advertisement

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ತಾಲೂಕಿನಲ್ಲಿ ರಾಜ್ಯದಲ್ಲಿ ಎಲ್ಲಿಯೂ ಇಲ್ಲದ 2 ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹೆಸರು ಹೇಳದೆ ಬಿಜೆಪಿ ರಾಜ್ಯಕಾರ್ಯಕಾರಿಣಿ ಸದಸ್ಯ ಎಸ್‌.ಮಂಜುನಾಥ್‌ ಕಚೇರಿ ಮಾಡಿಕೊಂಡಿರುವುದನ್ನು ಟೀಕಿಸಿದರು.

ತಾಲೂಕು ಅಧ್ಯಕ್ಷರ ಗಮನಕ್ಕೆ ತರದೆ ತಾಲೂಕಿನಲ್ಲಿ ಬಿಜೆಪಿ ಬಾವುಟ ಕಟ್ಟಿ ಪ್ರವಾಸ ಮಾಡಲಾಗುತ್ತಿದೆ. ಆರೋಗ್ಯ ಪೂರ್ಣ ಸ್ಪರ್ಧೆ ಇರದೆ ಹಣದಿಂದ ಎಲ್ಲವನ್ನೂ ಕೊಂಡುಕೊಳ್ಳಬಹುದು ಎಂಬ ಮನೋಪ್ರವೃತ್ತಿಯುಳ್ಳವರು ಪಕ್ಷದ ಚಟುವಟಿಕೆಗೆ ಧಕ್ಕೆ ತರುತ್ತಿದ್ದಾರೆಂದರು. 

 ಶೀಘ್ರ ಸಮಸ್ಯೆಯನ್ನು ಸರಿಪಡಿಸಬೇಕು. ಇಲ್ಲವಾದಲ್ಲಿ ನಮ್ಮ ಬೆಂಬಲಿಗರೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನಕ್ಕೆ ಬರುತ್ತೇನೆ. ಚುನಾವಣೆ ಕೊನೆಯ ಕ್ಷಣದಲ್ಲಿ ತೀರ್ಮಾನ ನೀಡುವುದನ್ನು ತಾನು ಒಪ್ಪುವುದಿಲ್ಲ. ಮೊದಲನೆ ಅಭ್ಯರ್ಥಿ ತಾನೇ ಎಂದು ಘೋಷಿಸಬೇಕೆಂದು ಒತ್ತಾಯಿಸಿದರು.

ತಾಲೂಕು ಅಧ್ಯಕ್ಷ ಪಿ.ಜೆ.ರವಿ, ಸಿ.ಎಚ್‌.ವಿಜಯಶಂಕರ್‌ ಅಭ್ಯರ್ಥಿ ಎಂದು ಘೋಷಣೆಯಾದ ಮೇಲೆ ತಾಲೂಕಿನ ಚಿತ್ರಣ ಬದಲಾಗಿದೆ. ಬಿಜೆಪಿಯಲ್ಲಿ ಅತಿಹೆಚ್ಚು ಸಂಘಟನೆಯಾಗುತ್ತಿದೆ. ಇದರಿಂದ ಭಯಗೊಂಡ ಜೆಡಿಎಸ್‌-ಕಾಂಗ್ರೆಸ್‌ ಕೆಲವರನ್ನು ಎತ್ತಿಕಟ್ಟಿ ಪಕ್ಷದ ಸಂಘಟನೆ ಒಡೆಯುವ ಕೆಲಸಕ್ಕೆ ಮುಂದಾಗಿವೆ ಎಂದು ತಿಳಿಸಿದರು.

Advertisement

ನಾಯಕತ್ವ ಬಿಟ್ಟುಕೊಡಲು ಸಿದ್ಧ: ಈ ಬಗ್ಗೆ ಈಗಾಗಲೇ ಅನೇಕ ಬಾರಿ ರಾಜ್ಯದ ಮುಖಂಡರ ಗಮನಕ್ಕೆ ತರಲಾಗಿದೆ. ಆದರೂ ಈ ಬಗ್ಗೆ ಯಾರು ಯಾವುದೇ ಕ್ರಮಕೈಗೊಂಡಿಲ್ಲ. ಇದು ತನಗೆ ತೀವ್ರ ಅಸಮಾಧಾನ ತಂದಿದೆ. ತಾಲೂಕು ಹಂತದ ನಾಯಕರು ತನ್ನ ನಾಯಕತ್ವ ಬೇಡವೆಂದರೆ ತಾನು ಬಿಟ್ಟುಕೊಡಲು ಸಿದ್ಧನಿದ್ದೇನೆ. ಆದರೆ ತಾಲೂಕು ಘಟಕ ತನ್ನೊಂದಿಗೆ ಪಕ್ಷಸಂಘಟನೆಯಲ್ಲಿ ತೊಡಗಿದ್ದರೆ ಕೆಲವರು ಗೊಂದಲ ಹುಟ್ಟುಹಾಕುತ್ತಿದ್ದಾರೆಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಸಿ.ಎಚ್‌.ವಿಜಯಶಂಕರ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next