Advertisement

ಅಮ್ಮುಂಜೆಯ ಬೆಳೆಗಾರನ ಸೌತೆಗೂ ಬೇಡಿಕೆ ಬಂತು

12:55 PM Apr 09, 2020 | Sriram |

ಕೋಟ: ಲಾಕ್‌ಡೌನ್‌ನಿಂದ ರೈತರು ಬೆಳೆದ ಬೆಳೆಗೆ ಮಾರುಕಟ್ಟೆ ಇಲ್ಲದ ಸಮಯದಲ್ಲಿ ಬೆಳೆಗಾರರು ಹಾಗೂ ಗ್ರಾಹಕರ ನಡುವೆ ಸಂಪರ್ಕ ಕಲ್ಪಿಸಲು ಉದಯವಾಣಿ ಆರಂಭಿಸಿದ ರೈತಸೇತು ಅಂಕಣಕ್ಕೆ ದಿನೇದಿನೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

Advertisement

ರಾಜ್ಯಾದ್ಯಂತ ವಿವಿಧ ಭಾಗಗಳಿಂದು ರೈತರು ವಿವರಗಳನ್ನು ಕಳುಹಿಸುತ್ತಿದ್ದ ಕಾರಣ ಇಂದಿನಿಂದ ಈ ಅಂಕಣವನ್ನು ರಾಜ್ಯದ ಬೇರೆ ಭಾಗಗಳಿಗೂ ಆಯಾ ಭಾಗದ ಅಗತ್ಯಕ್ಕೆ ಅನುಸಾರವಾಗಿ ಪ್ರಕಟಿಸಲಾಗುತ್ತಿದೆ.

ರೈತರು ತಮ್ಮ ಬೆಳೆ ಮತ್ತಿತರ ವಿವರಗಳನ್ನು ಕಳಿಸುತ್ತಿದ್ದು, ಗ್ರಾಹಕರು ಅವರನ್ನು ಸಂಪರ್ಕಿಸುತ್ತಿದ್ದಾರೆ. ಕೆಲವರು ಬೆಳೆಗಳ ಕುರಿತು ವಿಚಾರಣೆ ನಡೆಸಿದರೆ, ಮತ್ತೆ ಕೆಲವರು ಖರೀದಿಗೆ ಮುಂದಾಗಿದ್ದಾರೆ.

ಮೊದಲ ದಿನ ವಡ್ಡರ್ಸೆಯ ರೈತ ಸದಾನಂದ ಪೂಜಾರಿಯವರ ಕಲ್ಲಂಗಡಿಗೆ (ಮೊ: 99020 20426)ಬೇಡಿಕೆ ಬಂದಂತೆ, ಹಲವು ರೈತರ ಬೆಳೆಗಳಿಗೆ (ಕಲ್ಲಂಗಡಿ,ಬೂದು ಕುಂಬಳಕಾಯಿ,ಸೌತೆಕಾಯಿ ಇತ್ಯಾದಿ) ವಿವರಕೇಳಿ ಕರೆಗಳು ಬಂದಿವೆ. ಹಣ್ಣುಗಳ ಪೈಕಿ ಅನಾನಸಿಗೂವಿಚಾರಣೆಗಳು ಬಂದಿವೆ.

ಉಪ್ಪೂರು ಅಮ್ಮುಂಜೆಯ ಬೆಳೆಗಾರ ರಾಕಿ ಡಿ’ಸೋಜಾರ ಬೆಳೆ ಬಗ್ಗೆಯೂ ಪ್ರಸ್ತಾಪಿಸಲಾಗಿತ್ತು. ಸುಮಾರು 60 ಕ್ವಿಂಟಾಲ್‌ ಸಾಂಬಾರ್‌ ಸೌತೆಕಾಯಿ ಬೆಳೆ ದಿದ್ದ ಅವರಿಗೂ, ಹಲವು ಫೋನ್‌ ಕರೆಗಳು ಬಂದಿವೆ. ಜತೆಗೆ ಸುಮಾರು ಐದು ಕ್ವಿಂಟಾಲ್‌ ನಷ್ಟು ಸೌತೆಕಾಯಿ ಮಾರಾಟವಾಗಿದೆ.

Advertisement

ಡಿ’ಸೋಜ ಅವರು ಪ್ರತಿ ವರ್ಷ ತನ್ನ ಜಮೀನಿನಲ್ಲಿ ವಿವಿಧ ತರಕಾರಿ ಗಳನ್ನು ಬೆಳೆಯುತ್ತಿದ್ದರು. ಈ ಬಾರಿ ಸೌತೆ ಬೆಳೆದಿದ್ದಾರೆ. ಮದುವೆ, ಧಾರ್ಮಿಕ,ಸಾಮಾಜಿಕ ಕಾರ್ಯಕ್ರಮಗಳು ಹಾಗೂ ವಾರದ ಸಂತೆ ಇದ್ದರೆ ಸೌತೆಗೆಉತ್ತಮ ಬೇಡಿಕೆ ಇರುತಿತ್ತು. ಆದರೆ ಲಾಕ್‌ಡೌನ್‌ನ ಕಾರಣದಿಂದಎಲ್ಲ ಕಾರ್ಯಕ್ರಮಗಳೂ ಸ್ಥಗಿತಗೊಂಡು ಸರಿಯಾದ ಮಾರುಕಟ್ಟೆ ಸಿಗಲಿಲ್ಲ.ಹೀಗಾಗಿ ಅವರು ಉದಯವಾಣಿಯ ರೈತ ಸೇತುವಿನಲ್ಲಿ ತಮ್ಮ ಬೆಳೆಯ ವಿವರ ನೀಡಿದ್ದರು.

ಒಳ್ಳೆ ಅಂಕಣ
ನಾನು ಬೆಳೆದ ಸೌತೆಗೆ ಲಾಕ್‌ಡೌನ್‌ನ ಅನಂತರ ಮಾರುಕಟ್ಟೆ ಸಿಕ್ಕಿರಲಿಲ್ಲ. ಹೀಗಾಗಿ ಬೆಳೆದ ಬೆಳೆಯ ಕುರಿತು ಚಿಂತೆ ಇತ್ತು.
ಉದಯವಾಣಿಯ ರೈತಸೇತುವಿನಲ್ಲಿ ವಿವರ ಪ್ರಕಟವಾದ ಮೇಲೆ 5 ಕ್ವಿಂಟಾಲ್‌ ಮಾರಾಟವಾಗಿದೆ. ರೈತರಿಗೆ ಕಷ್ಟಕಾಲದಲ್ಲಿ ಇಂಥ ಅಂಕಣ ಆರಂಭಿಸಿದ್ದರಿಂದ ಅನುಕೂಲವಾಗಿದೆ.
– ರಾಕಿ ಡಿ’ಸೋಜ, ಅಮ್ಮುಂಜೆ ಉಪ್ಪೂರು

ನಿಮ್ಮ ಬೆಳೆ ಮಾಹಿತಿ ನೀಡಿ
ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸಾವಿರಾರು ರೈತರು ತಾವು ಬೆಳೆದ ತರಕಾರಿ, ಹಣ್ಣು ಹಾಗೂ ಆಹಾರ ಬೆಳೆಗಳನ್ನು ಮಾರಲಾಗದೇ ಸಂಕಷ್ಟದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಉದಯವಾಣಿಯು ಗ್ರಾಹಕರೊಂದಿಗೆ ಸಂಪರ್ಕ ಕಲ್ಪಿಸಲು ಮುಂದಾಗಿದೆ. ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲೆಯ ರೈತರು, ತರಕಾರಿ ಬೆಳೆಗಾರರು ಈ ಅಂಕಣದ ಪ್ರಯೋಜನ ಪಡೆಯಬಹುದು. ತಮ್ಮ ಬೆಳೆ ಹಾಗೂ ಸಂಪರ್ಕ ಸಂಖ್ಯೆಯನ್ನು ನಮ್ಮ ವಾಟ್ಸಾಪ್‌ಗೆ ಕಳಿಸಿದರೆ ಪ್ರಕಟಿಸಲಾಗುವುದು. ನೀಡಬೇಕಾದ ಮಾಹಿತಿ:ಹೆಸರು, ಉತ್ಪನ್ನದ ಹೆಸರು, ಲಭ್ಯವಿರುವ ಬೆಳೆ ಪ್ರಮಾಣ, ಊರಿನ ಹೆಸರು,ಸಂಪರ್ಕ ಸಂಖ್ಯೆ, ಉತ್ಪನ್ನದ ಬೆಲೆ.

Advertisement

Udayavani is now on Telegram. Click here to join our channel and stay updated with the latest news.

Next