Advertisement

ಹಸಿರು ಸಂತೆಯಲ್ಲಿ ತಾಜಾ ತರಕಾರಿ, ಸಾವಯವ ಉತ್ಪನ್ನ

08:26 PM Oct 05, 2019 | Lakshmi GovindaRaju |

ಮೈಸೂರು: ರೈತರು ನಮ್ಮ ಬೆನ್ನೆಲುಬು ಅವರು ಸಾವಯವ ಕೃಷಿ ಪದ್ಧತಿಗೆ ಮರಳಬೇಕು. ಇದರಿಂದ ಆರೋಗ್ಯಯುತ ಹಾಗೂ ಸಾವಯವ ಬೆಳೆಗಳನ್ನು ಬೆಳೆಯಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದರು.

Advertisement

ನಗರದ ಬುಲೇವಾರ್ಡ್‌ ರಸ್ತೆಯಲ್ಲಿ ಪ್ರವಾಸೋದ್ಯಮ ಉಪಸಮಿತಿ ವತಿಯಿಂದ ಆಯೋಜಿಸಿದ್ದ ಹಸಿರು ಸಂತೆ ಹಾಗೂ ಚಿತ್ರಸಂತೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತ ಬೆಳೆದ ಬೆಳೆಗಳನ್ನು ಗ್ರಾಹಕರಿಗೆ ಪರಿಚಯಿಸುವ ಸದಾವಕಾಶವನ್ನು ದಸರಾ ಮಹೋತ್ಸವ ಸಂದರ್ಭದಲ್ಲಿ ನೀಡಿರುವುದು ರೈತರಿಗೆ ಅನುಕೂಲವಾಗಲಿದೆ ಎಂದರು.

ಸರ್ಕಾರವು ರೈತರ ಪರ ಹಲವಾರು ಯೋಜನೆ ಜಾರಿಗೆ ತಂದಿದ್ದು, ಕಿಸಾನ್‌ ಸಮ್ಮಾನ್‌ ಯೋಜನೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ವಾರ್ಷಿಕ ಒಟ್ಟು 10 ಸಾವಿರ ರೂ. ಪ್ರತಿ ರೈತ ಕುಟುಂಬಕ್ಕೆ ನೀಡಲಾಗುತ್ತಿದೆ. ರೈತರಿಗಾಗಿ ಇನ್ನೂ ಉತ್ತಮ ಯೋಜನೆ ರೂಪಿಸಲಿದ್ದೇವೆ. ಎಲ್ಲಿಯ ತನಕ ರೈತ ಬೆಳೆದ ಬೆಳೆಗಳನ್ನು ಕೊಂಡುಕೊಳ್ಳುವ ಗ್ರಾಹಕರಿರುತ್ತಾರೋ ಅಲ್ಲಿಯವರೆಗೆ ರೈತನೂ ಉತ್ಸುಕನಾಗಿರುತ್ತಾನೆ.

ಯಾವಾಗ ಕೊಂಡುಕೊಳ್ಳವವರು ಇಲ್ಲವಾದಾಗ ರೈತ ನಿರಾಸೆಯಾಗುತ್ತಾನೆ. ಹಾಗಾಗಿ ರೈತ ಮತ್ತು ಗ್ರಾಹಕ ಒಂದೇ ನಾಣ್ಯದ ಎರಡು ಮುಖವಿದ್ದಂತೆ ಎಂದು ಹೇಳಿದರು. ಚಿತ್ರಸಂತೆಯನ್ನು ವೀಕ್ಷಿಸಿದ ಅವರು ಕಲೆ ಎಂಬುದು ಯಾರ ಸ್ವತ್ತು ಅಲ್ಲ ಹಾಗೂ ಕಲೆಗೆ ಬೆಲೆಯೇ ಇಲ್ಲ. ಕೈಗಳಿಂದ ಎಂತಹ ಚಿತ್ರಗಳನ್ನು ರಚಿಸಬಹುದು ಎಂಬುದನ್ನು ಕಲಾವಿದರು ತೋರಿಸಿದ್ದಾರೆ. ಅವರ ಚಿತ್ರಗಳನ್ನು ಮೈಸೂರಿಗರು ಕಣ್ತುಂಬಿಕೊಳ್ಳಲಿ, ಇದರಿಂದ ಕಲಾವಿದರಿಗು ತಮ್ಮ ಕಲೆಯ ಮೇಲೆ ಇನ್ನೂ ಪ್ರೀತಿ ಹೆಚ್ಚಾಗಲಿದೆ ಎಂದರು.

ಹಸಿರು ಸಂತೆಯಲ್ಲಿ 45ಕ್ಕೂ ಹೆಚ್ಚು ಮಳಿಗೆಗಳಿದ್ದು ವಿವಿಧ ರೀತಿಯ ಸಾವಯವ ಕೃಷಿ ಉತ್ಪನ್ನಗಳು, ಸೊಪ್ಪು, ತರಕಾರಿ, ನಾಟಿ ಕೋಳಿ ಮೊಟ್ಟೆ, ವಿಶೇಷ ತಳಿಗಳ ಅಕ್ಕಿ, ಭತ್ತ, ಬಿತ್ತನೆಬೀಜಗಳ ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತಿದ್ದು, ಚಿತ್ರ ಸಂತೆಯಲ್ಲೂ 56 ಮಳಿಗೆಗಳಿದ್ದು ಹಲವಾರು ಛಾಯಾಚಿತ್ರಗಳು, ಪೇಂಟಿಂಗ್‌, ಕೈ ಬರಹ ಚಿತ್ರಗಳು, ತ್ರೀಡಿ ಚಿತ್ರಗಳ ಪ್ರದರ್ಶನ ಗಮನ ಸೆಳೆದವು.

Advertisement

ಈ ಸಂದರ್ಭದಲ್ಲಿ ಶಾಸಕ ಎಲ್‌. ನಾಗೇಂದ್ರ, ಪ್ರವಾಸೋದ್ಯಮ ಉಪಸಮಿತಿ ಅಧ್ಯಕ್ಷ ಕೆ.ಜೆ ರಮೇಶ್‌, ಜಂಟಿ ಕೃಷಿ ನಿರ್ದೇಶಕ ಮಹಾಂತೇಶಪ್ಪ ಹಾಗೂ ಪ್ರವಾಸೋದ್ಯಮ ಉಪಸಮಿತಿಯ ಸದಸ್ಯರು ಇದ್ದರು. ಹಸಿರು ಸಂತೆಯಲ್ಲಿ 45ಕ್ಕೂ ಹೆಚ್ಚು ಮಳಿಗೆ ತೆರೆದಿದ್ದು, ಅದರಲ್ಲಿ ಅರ್ಧದಷ್ಟು ಮಳಿಗೆಗಳು ಖಾಲಿಯಾಗಿದ್ದವು. ಆರಂಭದಲ್ಲಿ ಜನದಟ್ಟಣೆ ಕಡಿಮೆ ಇತ್ತು. ಮಧ್ಯಾಹ್ನದ ನಂತರ ಸಾವಿರಾರು ಮಂದಿ ಚಿತ್ರಸಂತೆ ಹಾಗೂ ಹಸಿರು ಸಂತೆಗೆ ಭೇಟಿ ನೀಡಿದರು.

26 ಸಾವಿರ ಮಂದಿಗೆ ಮಾತ್ರ ಆಸನ: ದಾಸರ ಪಾಸ್‌ ವಿತರಣೆ ಸಂಬಂಧ, ಮೊದಲಿನಿಂದ ಏನು ನಡೆಯುತ್ತಿದೆ, ಅದನ್ನೆ ನಡೆಸಿಕೊಂಡು ಹೊಗುತ್ತೇವೆ. ಸಾಧ್ಯವಷ್ಟು ಎಲ್ಲವನ್ನು ಸರಿಮಾಡಲಾಗಿದೆ. ಅರಮನೆ ಆವರಣದಲ್ಲಿ 26 ಸಾವಿರ ಮಾತ್ರ ಆಸನ ವ್ಯವಸ್ಥೆ ಇರುವುದು. ಇದನ್ನು ಜನರೇ ಅರ್ಥ ಮಾಡಿಕೊಳ್ಳಬೇಕು. ಅರಮನೆಯವರು, ಅರಮನೆ ಆಡಳಿ, ಸುಪ್ರೀಂ, ಹೈಕೋರ್ಟ್‌ನಿಂದ ಎಲ್ಲಾ ತರಹದ ಜನರು ಬರುತ್ತಾರೆ. ಎಲ್ಲರಿಗೂ ಪಾಸ್‌ ವ್ಯವಸ್ಥೆ ಕಷ್ಟ ಎಂದು ಸಚಿವ ವಿ. ಸೋಮಣ್ಣ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next