Advertisement
ಹಿಂದೆಲ್ಲ ಉದ್ದ ಲಂಗದ ಜೊತೆಗೆ ರವಿಕೆ ಅಥವಾ ಜಾಕೆಟ್‌ನಂಥ ಟಾಪ್ ತೊಡಲಾಗುತಿತ್ತು. ಆದರೀಗ ಉದ್ದನೆಯ ಲಂಗದ ಜೊತೆ ಉದ್ದನೆಯ ಅಂಗಿ ಧರಿಸುವುದೇ ಫ್ಯಾಷನ್. ಇಂಥ ಟಾಪ್‌ಗ್ಳಿಗೆ “ಮ್ಯಾಕ್ಸಿ ಟ್ಯೂನಿಕ್’ ಎಂದು ಕರೆಯಲಾಗುತ್ತದೆ.
ಈ ಟ್ಯೂನಿಕ್ ಜೊತೆ ಉದ್ದ ಲಂಗವಷ್ಟೇ ಅಲ್ಲ, ಲೆಗ್ಗಿಂಗ್ಸ್, ಪಲಾಝೊ, ಹ್ಯಾರೆಮ್ ಅಥವಾ ಜೀನ್ಸ್ ಪ್ಯಾಂಟ್ ಜೊತೆಗೂ ಧರಿಸಬಹುದಾಗಿದೆ. ಆದರೆ, ಸದ್ಯಕ್ಕೆ ಫ್ಯಾಷನ್‌ಪ್ರಿಯರ ಹಾಟ್ ಫೇವರಿಟ್ ಅಂದರೆ ಮ್ಯಾಕ್ಸಿ ಟ್ಯೂನಿಕ್ ಮತ್ತು ಉದ್ದ ಲಂಗ. ಸೀರೆಯ ಲಂಗದ (ಪೆಟಿಕೋಟ್) ಮೇಲೆ ಚೂಡಿದಾರದ ಟಾಪ್ ತೊಟ್ಟಂತೆ ಕಾಣುವ ಈ ದಿರಿಸು ವಿಭಿನ್ನವಾಗಿದ್ದರೂ ವಿಶಿಷ್ಟವಾಗಿದೆ. ಇತಿಹಾಸದಲ್ಲೂ ಟ್ಯೂನಿಕ್
ಸಡಿಲವಾಗಿರುವ ಈ ಉಡುಪು ಪ್ರಾಚೀನ ಗ್ರೀಸ್, ರೋಮ್‌ನಲ್ಲಿ ಬಳಕೆಯಲ್ಲಿತ್ತು. ಗ್ರೀಸ್ ದೇವತೆ ಅಥೆನ್ನಾಳ ವಿಗ್ರಹ ಇಲ್ಲವೇ ಕಲಾಕೃತಿ ನೋಡಿದರೆ, ಟ್ಯೂನಿಕ್ ಇನ್ನಷ್ಟು ಆಪ್ತವಾಗಿ ತೋರುತ್ತದೆ. ಆ ಕಾಲದಲ್ಲಿ ಈ ಉಡುಪಿಗೆ ತೋಳುಗಳು ಇರುತ್ತಿರಲಿಲ್ಲ (ಸ್ಲಿವ್‌ಲೆಸ್). ಮೊಣಕಾಲಿನವರೆಗೆ ಬರುತ್ತಿದ್ದ ಈ ಟ್ಯೂನಿಕ್ ಜೊತೆಗೆ ಆಗ ಪ್ಯಾಂಟ್ ಅಥವಾ ಲಂಗವನ್ನು ಯಾರೂ ಧರಿಸುತ್ತಿರಲಿಲ್ಲ. ಹೆಚ್ಚಾಗಿ ಉಣ್ಣೆ ಅಥವಾ ಲಿನಿನ್‌ನಿಂದ ಈ ಉಡುಪನ್ನು ಮಾಡಲಾಗುತ್ತಿತ್ತು. ಒಂದು ವೇಳೆ ತೋಳುಗಳು ಇರುತ್ತಿದ್ದರೂ, ಅವು ಸಡಿಲವಾಗಿದ್ದು, ಮೊಣಕೈ ಉದ್ದವಾಗಿರುತ್ತಿದ್ದವು. ಈ ಟ್ಯೂನಿಕ್‌ಗಳಲ್ಲಿ ಸೊಂಟದವರೆಗೆ ಸೈಡ್ ಸ್ಲಿಟ್‌ಗಳೂ ಇರುತ್ತಿದ್ದವು. ಗಾಳಿ ಓಡಾಡಲು ಮತ್ತು ನಡೆದಾಡುವಾಗ ಕೈ ಕಾಲಿಗೆ ಆರಾಮವಾಗಲು ಈ ಟ್ಯೂನಿಕ್‌ಗಳು ಸಡಿಲವಾಗಿ ರೂಪಿಸಲಾಗುತ್ತಿತ್ತು.
Related Articles
ಈ ಮ್ಯಾಕ್ಸಿ ಟ್ಯೂನಿಕ್ ಅದೆಷ್ಟು ವರ್ಸಟೈಲ್ ಎಂದರೆ ಇದನ್ನು ವೆಸ್ಟರ್ನ್ (ಪಾಶ್ಚಾತ್ಯ) ಉಡುಪಿನಂತೆಯೂ ತೊಡಬಹುದು. ಇಲ್ಲವೇ ಸಾಂಪ್ರದಾಯಿಕ (ಇಂಡಿಯನ್) ದಿರಿಸಿನಂತೆಯೂ ಧರಿಸಬಹುದು. ಹಾಗಾಗಿ, ಈ ಉಡುಗೆ, ಪಾರ್ಟಿಗೂ ಸೈ, ಪೂಜೆಗೂ ಜೈ! ಕ್ಯಾಶುವಲ… ಉಡುಪಿನಂತೆ ಶಾಪಿಂಗ್, ಔಟಿಂಗ್, ಸಿನಿಮಾ, ಕಾಲೇಜು ಅಥವಾ ಆಫೀಸ್‌ಗೆ ಹೋಗುವಾಗಲೂ ಧರಿಸಬಹುದು. ಇಲ್ಲವೇ ಚೂಡಿದಾರ ಅಥವಾ ಕುರ್ತಾದಂತೆಯೂ ಉಟ್ಟುಕೊಂಡು ಹಬ್ಬ, ಹರಿದಿನ, ಮದುವೆಯಂಥ ಕಾರ್ಯಕ್ರಮಗಳಿಗೆ ಹೋಗಬಹುದು.
Advertisement
ಸರಳ, ಸುಂದರ ದಿರಿಸುಈ ದಿರಿಸಿನ ಜೊತೆ ದುಪ್ಪಟ್ಟಾ, ಶಾಲು, ಬೆಲ್ಟ್, ಜಾಕೆಟ್, ಸ್ಕಾಫ್ì ಅಥವಾ ಇನ್ಯಾವುದೋ ಮೇಲುಡುಪು ಹಾಕಿಕೊಳ್ಳಬೇಕಾಗಿಲ್ಲ. ಟ್ಯೂನಿಕ್‌ಗೆ ಒಳ್ಳೆ ಫಿಟ್ಟಿಂಗ್ ಇದ್ದರೂ, ನೋಡಲು ಸಡಿಲ ಇರುವಂತೆ ಕಾಣುತ್ತದೆ. ಮೊಣಕಾಲಿಗಿಂತಲೂ ಉದ್ದ ಇರುವುದೇ ಇದಕ್ಕೆ ಕಾರಣ. ಮ್ಯಾಕ್ಸಿ ಟ್ಯೂನಿಕ್‌ನಲ್ಲಿ ಫ್ರಂಟ್ ಮತ್ತು ಸೈಡ್ ಸ್ಲಿಟ್ (ಸೀಳಿಕೆ) ಗಳಿದ್ದರೆ ಬಟ್ಟೆಗೆ ಹಲವು ಆಯಾಮ ಇದ್ದಂತೆ ಕಾಣುತ್ತದೆ! ಇನ್ನು ಟ್ಯೂನಿಕ್ ಕೂಡ ಸಡಿಲ, ಲಂಗವೂ ಸಡಿಲ. ಆದ್ದರಿಂದ ಓಡಾಡಲು ಆರಾಮದಾಯಕ. ಸ್ಲಿಟ್ ಮೂಲಕ ಕೆಳಗಿನ ಲಂಗದ ಬಣ್ಣ ಎದ್ದು ಕಾಣುವ ಕಾರಣ, ಟ್ಯೂನಿಕ್ ಮೇಲೆ ಅದೂ ಒಂದು ವಿಭಿನ್ನ ಪ್ರಕಾರದ ವಿನ್ಯಾಸದಂತೆ ಕಾಣುತ್ತದೆ. ಅತ್ಯಂತ ಆರಾಮದಾಯಕ ಮತ್ತು ಸರಳ ಶೈಲಿಯ ಉಡುಪು ಇದಾಗಿರುವುದರಿಂದ ಬಹಳಷ್ಟು ಮಹಿಳೆಯರು ಇದನ್ನು ಇಷ್ಟಪಡುತ್ತಿ¨ªಾರೆ. ಕಲರ್, ಕಾಲರ್ ಗ್ರ್ಯಾಂಡಾಗಿರಲಿ…
ಟ್ಯೂನಿಕ್ ಮತ್ತು ಲಂಗ ಒಂದೇ ಬಣ್ಣದ್ದಾಗಿದ್ದರೆ (ಸಾಲಿಡ್ ಕಲರ್) ಕೇವಲ ತೋಳುಗಳಲ್ಲಿ ಕಸೂತಿ ಕೆಲಸ ಮಾಡಿಸಬಹುದು. ಆಗ ಡ್ರೆಸ್ ಇನ್ನಷ್ಟು ಅದ್ಧೂರಿಯಾಗಿ ಕಾಣುತ್ತದೆ. ಈ ದಿರಿಸಿನ ಕಾಲರ್ ಅಥವಾ ನೆಕ್‌ಲೈನ್ ವಿಶಿಷ್ಟವಾಗಿದ್ದರೆ, ಬೇರೊಂದು ಮೆರುಗು ನೀಡುತ್ತದೆ. ಚೈನೀಸ್ ಕಾಲರ್, ಬೋಟ್ ಶೇಪ್, ಕಿಮೋನೋ ಶೈಲಿ, ಸೈಡ್ ಕಾಲರ್, ರೆಟ್ರೋ ಶೈಲಿ, ಡೀಪ್ ನೆಕ್- ಹೀಗೆ ಅನೇಕ ಪ್ರಕಾರದ ನೆಕ್ ಡಿಸೈನ್‌ಗಳಲ್ಲಿ ಬೇಕಾದುದನ್ನು ಆಯ್ದು ಪ್ರಯೋಗ ಮಾಡಿ ನೋಡಿ, ಮ್ಯಾಕ್ಸಿ ಟ್ಯೂನಿಕ್‌ನಲ್ಲಿ ಮಿಂಚಿ! ಅದಿತಿಮಾನಸ ಟಿ.ಎಸ್