Advertisement
ಸಿದ್ದಾಪುರ: ಸ್ಥಳೀಯರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡುವ ಉದ್ದೇಶದಿಂದ ಆರಂಭಗೊಂಡ ಉಳ್ಳೂರು-74 ಹಾಲು ಉತ್ಪಾದಕರ ಸಹಕಾರಿ ಸಂಘವು ಹೈನುಗಾರರ ಪಾಲಿನ ಆಶಾಕಿರಣವಾಗಿದೆ. ಸಮಾಜಮುಖೀ ಸಂಘವಾಗಿ ಗುರುತಿಸಿಕೊಂಡಿರುವ ಉಳ್ಳೂರು-74 ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ 37 ವರ್ಷಗಳ ಇತಿಹಾಸ ಇದೆ.
ಉಳ್ಳೂರು ಗ್ರಾಮದ ಸಮಾನ ಮನಸ್ಕರು ಸೇರಿಕೊಂಡು 1983ರಲ್ಲಿ ಹಾಡಿದೇವಸ್ಥಾನದ ಶ್ರೀಧರ ಹೆಬ್ಟಾರ್ ಮನೆಯಲ್ಲಿ ಸಂಘ ಪ್ರಾರಂಭಗೊಂಡಿತು. ಸಂಘವು ಪ್ರಾರಂಭದಲ್ಲಿ 50 ಲೀ. ಹಾಲು ಸಂಗ್ರಹಿಸುತ್ತಿತ್ತು. ಈಗ 1 ಸಾವಿರ ಲೀ.ಹಾಲು ಸಂಗ್ರಹವಾಗುತ್ತಿದೆ. 290 ಸದಸ್ಯರಿದ್ದು, 135 ಸದಸ್ಯರು ಸಂಘಕ್ಕೆ ಹಾಲು ಹಾಕುತ್ತಿದ್ದಾರೆ. ಕೆನರಾ ಮಿಲ್ಕ್
ಯೂನಿಯನ್‌ಗೆ ಸರಬರಾಜು ಸಂಘವು 1983ರಲ್ಲಿ ಕುಂದಾಪುರ ಸಹಕಾರಿ ಸಂಘಗಳ ಸಹಾಯಕ ಕಚೇರಿಯಲ್ಲಿ ನೋಂದಾಯಿ ಸಿಕೊಂಡಿತ್ತು. ಕೆನರಾ ಮಿಲ್ಕ್ ಯೂನಿಯನ ಸಹಯೋಗ ದೊಂದಿಗೆ ತನ್ನ ಕಾರ್ಯ ವಟುವಟಿಕೆ ಆರಂಭಿಸಿತ್ತು.
Related Articles
ಸಂಘವು ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟ ಮತ್ತು ಸರಕಾರದ ಎಲ್ಲ ಯೋಜನೆಗಳನ್ನು ಕಾರ್ಯಗತಗೊಳಿಸಲು ಶ್ರಮಿಸುತ್ತಿದ್ದು ಯಶಸ್ವಿನಿ ರೈತರ ಆರೋಗ್ಯ ವಿಮೆ, ಮಹಿಳಾ ಹೈನು ಗಾರರಿಗೆ ಪ್ರೋತ್ಸಾಹ ಜಾನು ವಾರುಗಳಿಗೆ ಬೇಕಾದ ಪಶು ಆಹಾರ, ಹಸಿರು ಮೇವಿನ ಬೀಜ, ರೋಗ ನಿರೋಧಕ ಚುಚ್ಚು ಮದ್ದು, ಕೃತಕ ಗರ್ಭಧಾರಣೆ, ಲವಣ ಮಿಶ್ರಿತ ಆಹಾರವನ್ನು ಸಕಾಲದಲ್ಲಿ ಒದಗಿಸಲು ಶ್ರಮಿಸುತ್ತಿದೆ.
ವೈಜ್ಞಾನಿಕ ಹೈನುಗಾರಿಕೆ ಬಗ್ಗೆ ಮಾಹಿತಿ, ರಾಸುಗಳು ಮರಣ ಹೊಂದಿದಾಗ ಸಂಘದಿಂದ ಪರಿಹಾರ, ಹಾಲು ಉತ್ಪಾದಕರಿಗೆ ಬೋನಸ್, ಪಶು ಇಲಾಖೆಯ ಸಹಾಯದಿಂದ ಕಾಲು ಬಾಯಿ ಲಸಿಕೆ ಹಾಕುವುದನ್ನೂ ಮಾಡುತ್ತಿದೆ.
Advertisement
ಸಂಘವು ತಳಿ ಅಭಿವೃದ್ಧಿಗಾಗಿ ಸುಮಾರು 35 ಸಾವಿರಕ್ಕೂ ಹೆಚ್ಚು ಕೃತಕ ಗರ್ಭಧಾರಣೆ ಮಾಡಿದೆ. ಜತೆಯಲ್ಲಿ ಬೇರೆ ಬೇರೆ ತಳಿಗಳ ಸುಧಾರಣೆಗಾಗಿ ಪ್ರಥಮ ಚಿಕಿತ್ಸಾ ಸೌಲಭ್ಯ ನೀಡುತ್ತ ಬರುತ್ತಿದೆ. ಉತ್ತಮ ಕೃತಕ ಗರ್ಭಧಾರಣೆ ಕೇಂದ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
2019ರಲ್ಲಿ ಸ್ವಂತ ಕಟ್ಟಡಉಳ್ಳೂರು ಪೇಟೆಯಲ್ಲಿ 1994ರಲ್ಲಿ 13 ಸೆಂಟ್ಸ್ ಜಾಗ ಮಂಜೂರಾಗಿತ್ತು. ಅದೇ ಸ್ಥಳದಲ್ಲಿ 2019ರಲ್ಲಿ 15 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತವಾದ ಆಧುನಿಕ ಶೈಲಿಯ ಕಟ್ಟಡ ನಿರ್ಮಿಸಿ ಅದರಲ್ಲಿ ಕಾರ್ಯಾಚರಿಸುತ್ತಿದೆ. ಸಂಘವು 15 ಲಕ್ಷ ರೂ. ವೆಚ್ಚದ ಆತ್ಯಾಧುನಿಕ ಕಟ್ಟಡ ಹೊಂದಿದೆ. ಇಂಟರ್‌ಲಾಕ್, ಕಾಂಪೌಂಡ್ ಹಾಕಲಿದ್ದೇವೆ. ಹೈನುಗಾರರ ಅನುಕೂಲಕ್ಕಾಗಿ ಬಂಟಕೋಡು ಎಂಬಲ್ಲಿ ಶಾಖೆ ಮಾಡುವ ಉದ್ದೇಶ ಇದೆ.
ವಿ. ದಿವಾಕರ ಶೆಟ್ಟಿ,
ಅಧ್ಯಕ್ಷರು ಅಧ್ಯಕ್ಷರು:
ಶ್ರೀಧರ್ ಹೆಬ್ಟಾರ್, ರಾಮಕೃಷ್ಣ ಕರ್ಣಿಕ್, ಕೆ. ಬಚ್ಚಯ್ಯ ಶೆಟ್ಟಿ, ಬಿ. ಶಂಕರ ಶೆಟ್ಟಿ, ಎಸ್. ಸಂಜೀವ ಶೆಟ್ಟಿ ಸಂಪಿಗೇಡಿ, ದಿವಾಕರ ಶೆಟ್ಟಿ ವಾರನಪಾಲು (ಹಾಲಿ)
ಕಾರ್ಯದರ್ಶಿಗಳು:
ಶೇಖರ ಶೆಟ್ಟಿ, ಉದಯ ಶೆಟ್ಟಿ, ಭುಜಂಗ ದೇವಾಡಿಗ, ಯು. ರತ್ನಾಕರ ಶೆಟ್ಟಿ (ಹಾಲಿ) -ಸತೀಶ ಆಚಾರ್ ಉಳ್ಳೂರು