ಮುಂಡರಗಿ: ನಾಡು ಕಂಡ ಮಹಾನ್ ಚೇತನ ಕನಕದಾಸರು ತ್ರಿಪದಿ ಸಾಹಿತ್ಯದ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಕೂಡಾ ಮುಖ್ಯ ವಾಹಿನಿಗೆ ಬರಲು ಅವಕಾಶ ಕಲ್ಪಿಸಿದ್ದಾರೆ. ವಿಶ್ವ ಮಾನವ ಕಲ್ಪನೆಯೊಂದಿಗೆ ಮಾನವೀಯ ಗುಣಗಳನ್ನು ಪ್ರತಿಪಾದಿಸಿದ ಕೀರ್ತಿ ಕನಕದಾಸರಿಗೆ ಸಲ್ಲುತ್ತದೆ ಎಂದು ಮಾಜಿ ಶಾಸಕ ಜಿ.ಎಸ್.ಪಾಟೀಲ್ ಹೇಳಿದರು.
ತಾಲೂಕಿನ ಹಿರೇವಡ್ಡಟ್ಟಿ ಗ್ರಾಮದಲ್ಲಿ ಭಕ್ತ ಕನಕದಾಸರ 534ನೇ ಜಯಂತ್ಯುತ್ಸವ ಹಾಗೂ 25ನೇ ವರ್ಷದಲ್ಲಿ 9 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಉಚಿತ ಸಾಮೂಹಿಕ ವಿವಾಹ ಉತ್ತಮ ಧರ್ಮ ಕಾರ್ಯವಾಗಿದೆ. ಸಾಲಬಾಧೆಯಿಲ್ಲದೆ ಜೀವನ ನಡೆಸಲು ಇಂತಹ ಸಾಮೂಹಿಕ ವಿವಾಹಗಳು ಸಹಕಾರಿಯಾಗಲಿವೆ ಎಂದು ಹೇಳಿದರು.
ಡಾ| ಬಸವರಾಜ ದೇವರು ಮಹಾಸ್ವಾಮಿಗಳು, ವೀರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಸಿದ್ದರಾಮದೇವರು ಮಾತನಾಡಿ, ಸಮಾಜದಲ್ಲಿ ಜನರ ಆಡಂಬರ ಕಡಿಮೆಯಾಗಬೇಕು. ಪರಸ್ಪರ ಸಹಕಾರ ತತ್ವ ಪಾಲಿಸಬೇಕು. ಸಾಮೂಹಿಕ ವಿವಾಹ ಮಾಡಿಕೊಳ್ಳುವುದರಿಂದ ಉದಾತ್ತ ಭಾವನೆಗಳು ಬೆಳೆಯುತ್ತವೆ. ದಾಂಪತ್ಯದಲ್ಲಿ ಸರಳ ಜೀವನ, ಉದಾತ್ತ ವಿಚಾರಗಳ ಹಾದಿಯಲ್ಲಿ ಸಾಗಬೇಕು ಎಂದು ಹೇಳಿದರು.
ಕುರಿ ಹಾಗೂ ಉಣ್ಣೆ ನಿಗಮದ ಮಾಜಿ ಅಧ್ಯಕ್ಷ ವೈ.ಎನ್. ಗೌಡರ್, ಕರಿಯಪ್ಪ ಕೊಡವಳ್ಳಿ ಮಾತನಾಡಿದರು. ಸಾಮೂಹಿಕ ಮದುವೆಯಾದ ಜೋಡಿಗಳಿಗೆ ಸಹಾಯರ್ಥ ಮಾಜಿ ಶಾಸಕ ಜಿ.ಎಸ್. ಪಾಟೀಲ 10 ಸಾವಿರ ರೂ.ಗಳನ್ನು ವಿತರಿಸಿದರು.
ಜಿ.ಪಂ ಮಾಜಿ ಅಧ್ಯಕ್ಷ ವಾಸಣ್ಣ ಕುರಡಗಿ, ವಿ.ಆರ್. ಗುಡಿಸಾಗರ, ತಾಲೂಕು ಕುರಬರ ಸಂಘದ ಅಧ್ಯಕ್ಷ ಮಂಜುನಾಥ ಮುಂಡವಾಡ, ದೊಡ್ಡಯ್ಯ ಆನೆಕಲ್, ಮರಳಸಿದ್ದಪ್ಪ ದೊಡ್ಡಮನಿ, ವೆಂಕಪ್ಪ ಬಳ್ಳಾರಿ, ಅಂದಪ್ಪ ಸಜ್ಜನ, ಲೋಕಪ್ಪ ನಂದಿಕೋಲ, ಮಾಬುಸಾಬ ಮುಂಡರಗಿ, ಹನಮರಡ್ಡಿ ಮೇಟಿ, ಅಬ್ದುಲ್‌ಸಾಬ್ ಕಲಕೇರಿ, ಡಾ| ವಿನಾಯಕ ಕಲ್ಲಕುಟಿ ಗರ, ರಾಘವೇಂದ್ರ ಕುರಿ, ವೆಂಕಣ್ಣ ಎಕ್ಲಾಸಪೂರ, ಎಸ್.ಬಿ. ರಾಮೇನಳ್ಳಿ, ಮಲ್ಲಪ್ಪ ಗುಡಿಗೇರಿ, ಸಣ್ಣ ಕರಿಯಪ್ಪ ಸೊರಟೂರ, ಮಾರುತೇಪ್ಪ ಸ್ವಾಗಿ, ಮಹಾಲಿಂಗಪ್ಪ ಮೇವುಂಡಿ, ಮಂಜುನಾಥ ನಿಟ್ಟಾಲಿ, ಸಣ್ಣ ಕರಿಯಪ್ಪ ಸೊರಟೂರ, ಸುರೇಶ ಮುಪ್ನೆಣ್ಣಿ ಗ್ರಾಮದ ಹಿರಿಯರು ಯುವಕರು ಮಹಿಳೆಯರು ಇದ್ದರು. ಮಳ್ಳಪ್ಪ ಬಂಡಿ ನಿರೂಪಿಸಿದರು.