Advertisement

ಶತಮಾನದ ಮಹಾನ್‌ ಚೇತನ

05:28 AM Jan 24, 2019 | |

ದಾವಣಗೆರೆ: ನಗರದ ಜಿಲ್ಲಾ ವಕೀಲರ ಸಂಘದ ಸಭಾಂಗಣದಲ್ಲಿ ಬುಧವಾರ ವಕೀಲರಿಂದ ಸಿದ್ಧಗಂಗಾ ಶ್ರೀಕ್ಷೇತ್ರದ ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರಿಗೆ ಭಕ್ತಿಪೂರ್ವ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಅಂಬಾದಾಸ್‌ ಕುಲಕರ್ಣಿ ಜಿ., ಭಿಕ್ಷೆ ಬೇಡಿ, ಮಕ್ಕಳಿಗೆ ತ್ರಿವಿಧ ದಾಸೋಹ ಕಲ್ಪಿಸಿದ ಸಿದ್ದಗಂಗಾ ಶ್ರೀಗಳು ಈ ಶತಮಾನದ ಮಹಾನ್‌ ಪುರುಷ. ಮಕ್ಕಳಿಗೆ ಭಾತೃತ್ವದ ಅರಿವು ಮೂಡಿಸಿದ ಶ್ರೀಗಳು, ಶ್ರೀಮಠವನ್ನು ಇಡೀ ವಿಶ್ವವೇ ಗುರುತಿಸುವಂತೆ ಮಾಡಿದ ಚೇತನ ಎಂದು ಬಣ್ಣಿಸಿದರು.

ಒಂದನೇ ಹೆಚ್ಚುವರಿ ಸಿವಿಲ್‌ (ಹಿರಿಯ ವಿಭಾಗ) ನ್ಯಾಯಾಲಯದ ನ್ಯಾಯಾಧೀಶ ಸೋಮಶೇಖರ್‌, ಸಿದ್ಧಗಂಗಾ ಶ್ರೀಗಳಂತೆ ಹಲವು ದಶಕಗಳಿಂದ ತ್ರಿವಿಧ ದಾಸೋಹ ಕೈಂಕರ್ಯದಲ್ಲಿ ತೊಡಗಿಕೊಂಡವರು ವಿಶ್ವದಲ್ಲೇ ಇಲ್ಲ. ಶ್ರೀಗಳು ಶತಮಾನದ ಮಹಾನ್‌ ಚೇತನ ಎಂದರು.

ಜಿಲ್ಲಾ ಅಭಿಯೊಜಕ ಎಸ್‌.ವಿ.ಪಾಟೀಲ್‌, ವಕೀಲರ ಸಂಘದ ಅಧ್ಯಕ್ಷ ಎನ್‌.ಟಿ. ಮಂಜುನಾಥ್‌, ಶ್ರೀಗಳ ಕಾಯಕವನ್ನು ಸ್ಮರಿಸಿದರು.

ಸಂಘದ ಉಪಾಧ್ಯಕ್ಷ ಎಚ್.ದಿವಾಕರ್‌, ಸಹ ಕಾರ್ಯದರ್ಶಿ ಎಸ್‌.ಬಸವರಾಜ್‌, ಇತರೆ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Advertisement

ಸಂಘದ ಕಾರ್ಯದರ್ಶಿ ಬಿ.ಎಸ್‌.ಲಿಂಗರಾಜ್‌ ನಿರೂಪಿಸಿದರು.

ಸ್ಕೇಲ್‌ ಡ್ರಾಯಿಂಗ್‌ನಲ್ಲಿ ತ್ರಿವಿಧ ದಾಸೋಹಿ
ದಾವಣಗೆರೆ:
ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಮಕ್ಕಳು ಬುಧವಾರ ಸ್ಕೇಲ್‌ ಡ್ರಾಯಿಂಗ್‌ನಲ್ಲಿ ಕರ್ನಾಟಕ ರತ್ನ, ತ್ರಿವಿಧ ದಾಸೋಹಿ ಡಾ| ಶಿವಕುಮಾರ ಸ್ವಾಮೀಜಿಯವರ ವಿಶೇಷ ಭಾವಚಿತ್ರ ರಚಿಸುವ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.

ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ ಆವರಣಲ್ಲಿ 50 ರಿಂದ 100 ವಿದ್ಯಾರ್ಥಿಗಳು 80 ಅಡಿ ಅಗಲ ಮತ್ತು ಉದ್ದದ ಚೌಕಾಕಾರದಲ್ಲಿ ಶ್ರೀ ಡಾ| ಶಿವಕುಮಾರ ಸ್ವಾಮೀಜಿಯವರ ವಿಶೇಷ ಭಾವಚಿತ್ರ ರಚಿಸುವ ಮೂಲಕ ನಡೆದಾಡುವ ದೇವರಿಗೆ ತಮ್ಮದೇ ಆದ ರೀತಿಯಲ್ಲಿ ಗುರುನಮನ ಸಲ್ಲಿಸಿದರು. ಮಧ್ಯಾಹ್ನ 12ಕ್ಕೆ ಪ್ರಾರಂಭವಾದ ಸ್ಕೇಲ್‌ ಡ್ರಾಯಿಂಗ್‌ನ ಒಂದೊಂದು ಹಂತದಲ್ಲಿ ಸಿದ್ದಗಂಗೆಯ ಪರಮಗುರುವಿನ ಒಂದೊಂದೇ ಅಂಶ ರಚನೆ ಆಗುತ್ತಿರುವಂತೆ ನೆರೆದಿದ್ದ ಮಕ್ಕಳಿಂದ ಹರ್ಷೋದ್ಘಾರದ ಜೊತೆಗೆ ಭಕ್ತಿಯ ಭಾವನೆ ಹೊರ ಹೊಮ್ಮುತ್ತಿತ್ತು. ಅಂತಿಮವಾಗಿ ಡಾ| ಶಿವಕುಮಾರ ಸ್ವಾಮೀಜಿಯವರ ವಿಶೇಷ ಭಾವಚಿತ್ರ ಪೂರ್ಣಗೊಳ್ಳುತ್ತಿದ್ದಂತೆ ಮಕ್ಕಳು ಕಲಿಯುಗದ ಮಹಾನ್‌ ಸಂತನಿಗೆ ಭಕ್ತಿಪೂರ್ವ ನಮನ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next