Advertisement
ಮಾಹಿತಿ ನೀಡಿದ್ದ ಆ ಇಬ್ಬರು!: “ದುಷ್ಮನ್ ಕಹಾ ಹೇ’ ಅಂದ್ರೆ “ಬಗಲ್ ಮೇ ಹೇ’ ಎಂಬ ಮಾತೊಂದಿದೆ. ಬಾಗ್ಧಾದಿ ವಿಚಾರದಲ್ಲಿ ಆ ದುಷ್ಮನ್ ಕೇವಲ “ಬಗಲ್’ನಲ್ಲಿ (ಪಕ್ಕದಲ್ಲಿ) ಇರಲಿಲ್ಲ, “ಬಾಹೋ ಮೆ’ (ಬಾಹು ಬಂಧನದಲ್ಲಿ) ಇದ್ದರು! ಅಂದರೆ, ಬಾಗ್ಧಾದಿಯ ಇತ್ತೀಚಿನ ರಹಸ್ಯ ಅಡಗುದಾಣದ ಸುಳಿವನ್ನು ಆತನ ಆಪ್ತ ಮಿತ್ರ ಇಸ್ಮಾಯಿಲ್ ಎಲ್-ಇಥಾವಿ ಹಾಗೂ ಆತನ ಪತ್ನಿಯಲ್ಲೊಬ್ಟಾಕೆ ಬಾಯಿಬಿಟ್ಟಿದ್ದರು.
Related Articles
Advertisement
ಸಂಜೆ ಹೊತ್ತಿಗೆ ಕಾರ್ಯಾಚರಣೆ ಆರಂಭ: ವಾಷಿಂಗ್ಟನ್‌ನ ಸ್ಥಳೀಯ ಕಾಲಮಾನದ ಪ್ರಕಾರ, ಸಂಜೆ 5 ಗಂಟೆ ಸುಮಾರಿಗೆ ಅಬು ಬಾಗ್ಧಾದಿ ನೆಲೆಸಿದ್ದ ಬಂಗಲೆಯನ್ನು ಸುತ್ತುವರಿದ ಅಮೆರಿಕ ಸೇನಾ ಪಡೆ, ಆತನ ಬಂಗಲೆಗಿದ್ದ ಬೃಹತ್ ಕಾಂಪೌಂಡ್ ಗೋಡೆಗೆ ವಿಶೇಷ ಸ್ಫೋಟಕಗಳ ಮೂಲಕ ತೂತು ಕೊರೆದು ಒಳ ನುಗ್ಗಿದರು. ಬಂಗಲೆಯನ್ನು ಸುತ್ತುವರಿದು ಮೊದಲು ಆತನಿಗೆ ಶರಣಾಗುವಂತೆ ಸೂಚಿಸಲಾಯಿತು. ಆದರೆ, ಅದಕ್ಕೆ ಆತ ಹಾಗೂ ಆತನ ಸಹಚರರು ಸಹಕರಿಸಲಿಲ್ಲ. ಹಾಗಾಗಿ, ಅನಿವಾರ್ಯವಾಗಿ ಕಾರ್ಯಾಚರಣೆ ಶುರು ಮಾಡಲಾಯಿತು. ಹಂತಹಂತವಾಗಿ ಕಾರ್ಯಾಚರಣೆ ನಡೆಸುತ್ತಾ ಬಾಗ್ಧಾದಿಯ ಅಂತಃಪುರಕ್ಕೆ ಲಗ್ಗೆಯಿಡುವ ಹೊತ್ತಿಗೆ ಆತ ತನ್ನ ಖಾಸಗಿ ಕೋಣೆಯ ಮಗ್ಗುಲಲ್ಲೇ ಇದ್ದ ಸುರಂಗ ಮಾರ್ಗದೊಳಗೆ ತನ್ನ ಮೂವರು ಮಕ್ಕಳೊಂದಿಗೆ ಇಳಿದು ಹೋಗಿದ್ದ. ಅದನ್ನು ಅಂದಾಜಿಸಿ, ಸುರಂಗದೊಳಗೆ ಹೋದ ಅಮೆರಿಕದ ಸೈನಿಕರು ಹಾಗೂ ಕೆ9 ಶ್ವಾನಗಳು, ಬಾಗ್ಧಾದಿಯನ್ನು ಹಿಂಬಾಲಿಸಿಕೊಂಡು ಹೋದರು. ಆದರೆ, ಆ ಸುರಂಗದ ಮತ್ತೂಂದು ತುದಿ ಮುಚ್ಚಲ್ಪಟ್ಟಿತ್ತು. ಆ ತುಟ್ಟ ತುದಿ ತಲುಪಿದ ಕೂಡಲೇ ಬಾಗ್ಧಾದಿಗೆ ದಿಕ್ಕೇ ತೋಚದಂತಾಯಿತು. ಇನ್ನೇನು ಸೈನಿಕರು ತನ್ನನ್ನು ಸುತ್ತುವರಿಯುವ ಸಂದರ್ಭ ಬಂದೇಬಿಟ್ಟಿತು ಎನ್ನು ಹೊತ್ತಿನಲ್ಲೇ ಆತ ತನ್ನ ಮೂವರು ಮಕ್ಕಳೊಂದಿಗೆ ತನ್ನನ್ನು ತಾನು ಸ್ಫೋಟಿಸಿಕೊಂಡು ಅಸುನೀಗಿದ.
ವಾಷಿಂಗ್ಟನ್ ಪೋಸ್ಟ್ ಎಡವಟ್ಟುಅಲ್ ಬಾಗ್ಧಾದಿಯ ಹತ್ಯೆ ಸುದ್ದಿಯನ್ನು ಪ್ರಕಟಿಸಿದ ವಾಷಿಂಗ್ಟನ್ ಪೋಸ್ಟ್‌ನ ಅಂತರ್ಜಾಲ ಆವೃತ್ತಿಯಲ್ಲಿ, ಆ ಸುದ್ದಿಯ ತಲೆಬರಹದಲ್ಲಿ ಬಾಗ್ಧಾದಿಗೆ ಶ್ರದ್ಧಾಂಜಲಿ ಎಂಬ ಪದ ಬಳಸಿದ್ದು ವ್ಯಾಪಕ ಟೀಕೆಗೆ ಕಾರಣವಾಯಿತು. ಟ್ವಿಟರ್ ಸೇರಿದಂತೆ ಹಲವಾರು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆಗಳು ಕೇಳಿಬಂದ ಹಿನ್ನೆಲೆಯಲ್ಲಿ, ಸುದ್ದಿಯ ತಲೆಬರಹ ಬದಲಾಯಿಸಿದ ಪತ್ರಿಕೆ, ಆ ಕುರಿತಂತೆ ಕ್ಷಮೆಯನ್ನೂ ಯಾಚಿಸಿತು. ಇದೊಂದು ಶ್ರದ್ಧಾಂಜಲಿಯೂ ಹೌದು
ಬಾಗ್ಧಾದಿ ನಾಶದ ಕಾರ್ಯಾಚರಣೆಗೆ “ಕಾಯಾÉ ಮುಲ್ಲರ್’ ಎಂದು ಹೆಸರಿಡಲಾಗಿತ್ತು. ಕಾಯಾÉ ಮುಲ್ಲರ್ ಅಮೆರಿಕದ ಸಮಾಜ ಸೇವಕಿ. ಸಿರಿಯಾದಲ್ಲಿ ಸೇವೆಯಲ್ಲಿ ನಿರತರಾಗಿದ್ದ ಇವರನ್ನು ಅಪಹರಿಸಿದ್ದ ಬಾಗ್ಧಾದಿ, ಆಕೆಯ ಮೇಲೆ ಹಲವಾರು ಬಾರಿ ಅತ್ಯಾಚಾರ ಎಸಗಿ, ಆನಂತರ ಹತ್ಯೆಗೈದಿದ್ದ. ಹಾಗಾಗಿ, ಬಾಗ್ಧಾದಿ ಮಾರಣಹೋಮವನ್ನು ಕಾಯಾÉ ಮುಲ್ಲರ್ ಅವರಿಗೆ ಸಮರ್ಪಿಸುವ ಉದ್ದೇಶದಿಂದ ಈ ಕಾರ್ಯಾಚರಣೆಗೆ ಅವರ ಹೆಸರನ್ನೇ ಇಡಲಾಗಿತ್ತು. ಮುಲ್ಲರ್ ಹೆಸರನ್ನು ಕಾರ್ಯಾಚರಣೆಗೆ ಇಟ್ಟಿದ್ದನ್ನು ಆಕೆಯ ಹೆತ್ತವರು ಸ್ವಾಗತಿಸಿದ್ದು, ಅಮೆರಿಕಕ್ಕೆ ಧನ್ಯವಾದ ಅರ್ಪಿಸಿದ್ದಾರೆ.