Advertisement
ನಗರಸಭೆ ಪೌರಾಯುಕ್ತರಾಗಿ ಅಧಿಕಾರ ಸ್ಪೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳಿಗೆ ತುರ್ತಾಗಿ ತೇಪೆ ಹಚ್ಚುವುದು, ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಹಾಗೂ ಸ್ವತ್ಛತಾ ಕಾರ್ಯಗಳಿಗೆ ಆದ್ಯತೆ ನೀಡಲಾಗುವುದು ಎಂದು ವಿವರಿಸಿದರು.
Related Articles
Advertisement
ಕಸ ವಿಲೇವಾರಿ: ಕೋಲಾರ ನಗರದಲ್ಲಿ ಪ್ರತಿ ನಿತ್ಯವೂ 60 ರಿಂದ 70 ಟನ್ ಕಸ ಉತ್ಪತ್ತಿಯಾಗುತ್ತಿದ್ದು, ಒಣ ಹಾಗೂ ಹಸಿ ಕಸವೆಂಬುದಾಗಿಯೇ ಸಂಗ್ರಹಿಸಲು ಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿ ಕೆಲವು ವಾರ್ಡ್ ಗಳಲ್ಲಿ ಮನೆ ಮನೆ ಪ್ರಚಾರ ನಡೆಸಲಾಗುತ್ತಿದೆ. ಹೀಗೆ ಸಂಗ್ರಹಿಸುವ ಹಸಿ ಕಸವನ್ನು ಮಣಿಘಟ್ಟ ರಸ್ತೆಯ ಸಂಗ್ರಹಿಸಿ ಗೊಬ್ಬರವಾಗಿ ಪರಿವರ್ತಿಸಲಾಗುವುದು ಎಂದು ಹೇಳಿದರು.
ಒಣ ಕಸವನ್ನು ಮುಳಬಾಗಿಲು ರಸ್ತೆಯಲ್ಲಿರುವ ಪೊಂಬರಹಳ್ಳಿಯಲ್ಲಿ ಜಿಲ್ಲಾಧಿಕಾರಿ ಮಂಜೂರು ಮಾಡಿರುವ ಏಳೆಂಟು ಎಕರೆ ಜಾಗಕ್ಕೆ ಕಾಂಪೌಂಡ್ ಹಾಕಿಸಿ, ಅಲ್ಲಿ ಸಂಗ್ರಹಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ತೀರ್ಮಾನಿಸಲಾಗಿದೆ ಎಂದು ಪೌರಾಯುಕ್ತರು ವಿವರಿಸಿದರು. ಕಸ ವಿಲೇವಾರಿಗಾಗಿ 17 ಮಿನಿ ಟ್ರಕ್ ಖರೀದಿಸಲಾಗುತ್ತಿದೆ. ಈಗಾಗಲೇ 11 ವಾಹನಗಳು ಆಗಮಿಸಿವೆ. ಸದ್ಯಕ್ಕೆ ಕಸ ವಿಲೇವಾರಿಗಾಗಿ 5 ಟ್ರ್ಯಾಕ್ಟರ್, 3 ಟಿಪ್ಪರ್ ಹಾಗೂ 6 ಸರಕು ಸಾಗಣೆ ಆಟೋ ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಆದಾಯ ಸಂಗ್ರಹ: ನಗರಸಭೆಯ ಆದಾಯವನ್ನು ಕ್ರೂಢೀಕರಿಸುವ ಸಲುವಾಗಿ ಪ್ರತಿ ನಿತ್ಯವೂ ಬೆಳಿಗ್ಗೆ 8 ರಿಂದ ಮಧ್ಯಾಹ್ನ 2 ರವರೆಗೂ ತೆರಿಗೆ ಸಂಗ್ರಹಿಸುವ ಕಾರ್ಯದಲ್ಲಿ ಮಗ್ನವಾಗುವಂತೆ ನಗರಸಭೆ ಅಧಿಕಾರಿ ಸಿಬ್ಬಂದಿಗೆ ಸೂಚಿಸಲಾಗಿದೆ. ಇದರಿಂದ ತೆರಿಗೆ ಸಂಗ್ರಹಣೆ ಹೆಚ್ಚಾಗಿ ನಗರಸಭೆ ಆದಾಯ ಹೆಚ್ಚಿ ಅಭಿವೃದ್ಧಿ ಕಾರ್ಯಗಳನ್ನು ಸುಗಮವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕಚೇರಿ ಕೆಲಸ: ನಗರಸಭೆ ಕೆಲಸ ಕಾರ್ಯಗಳು ಮಧ್ಯವರ್ತಿಗಳಿಲ್ಲದೆ ನಡೆಯುವುದಿಲ್ಲವೆಂಬ ಆರೋಪ ಸಾರ್ವಜನಿಕ ವಲಯದಲ್ಲಿತ್ತು. ಈ ವ್ಯವಸ್ಥೆ ತಡೆಯುವ ಸಲುವಾಗಿ ಸಾರ್ವಜನಿಕರು ಇನ್ನು ಮುಂದೆ ಮಧ್ಯಾಹ್ನ 3 ರಿಂದ ಸಂಜೆಯವರೆಗೂ ನಗರಸಭೆಗೆ ಖುದ್ದು ಭೇಟಿ ನೀಡಿ, ತಮ್ಮ ಕಚೇರಿ ಕೆಲಸ ಕಾರ್ಯಗಳಾದ ಖಾತೆ ಬದಲಾವಣೆ, ಜನನ, ಮರಣ ಪ್ರಮಾಣ ಪತ್ರ ಪಡೆಯುವುದು ಇತ್ಯಾದಿ ಕೆಲಸ ಮಾಡಿಸಿ ಕೊಳ್ಳಬಹುದು. ಈ ಅವಧಿಯಲ್ಲಿ ನಾವೂ ಸೇರಿದಂತೆ ಕಚೇರಿಯ ಅಧಿಕಾರಿ, ಸಿಬ್ಬಂದಿ ನಗರಸಭೆ ಯಲ್ಲಿ ಇರುವು ದಾಗಿವಿವರಿಸಿ, ಸಾರ್ವಜನಿಕರು ತಮ್ಮ ಕೆಲಸಗಳು ಆಗದಿದ್ರೆ ನೇರವಾಗಿ ಭೇಟಿಯಾಗಿ ಮಧ್ಯಾಹ್ನದ ವೇಳೆ ಚರ್ಚಿಸಬಹುದು ಎಂದು ಹೇಳಿದರು.
-ಕೆ.ಎಸ್.ಗಣೇಶ್