Advertisement
ಬುಧವಾರ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಅನಂತರ ಪೇಜಾವರ ಶ್ರೀಗಳೊಂದಿಗೆ ಮಾತುಕತೆ ನಡೆಸಿದ ಬಳಿಕ ಅವರು ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.
ಎರಡು ಸಮುದಾಯಗಳ ಮೈತ್ರಿಯ ಪ್ರತೀಕವಾಗಿ ಮಂದಿರ ನಿರ್ಮಾಣವಾಗಲಿದೆ. ಸಂಧಾನಕಾರರಾಗಿ ನಾನು ಮುಸ್ಲಿಂ ಬಾಂಧವರು ಸೇರಿದಂತೆ ಯಾರೊಂದಿಗೆಲ್ಲ ಮಾತುಕತೆ ನಡೆಸಿದ್ದೇನೆಯೋ ಅವರೆಲ್ಲರೂ ಸಹಮತ ವ್ಯಕ್ತ ಪಡಿಸಿದ್ದಾರೆ. ಯಾರೂ ವಿರೋಧ ಸೂಚಿಸಿಲ್ಲ. ಸೌಹಾರ್ದಯುತವಾಗಿಯೇ ಮಂದಿರ ನಿರ್ಮಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ ಎಂದು ಅವರು ತಿಳಿಸಿದರು. “ಧರ್ಮಸಂಸದ್’ ನಿರ್ಣಯದ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ರವಿಶಂಕರ್ ಗುರೂಜಿ ಅವರು, “ಸಂತರು ಮತ್ತು ಆರ್‌ಎಸ್‌ಎಸ್‌ನವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಸ್ವತಂತ್ರರು. ಪೇಜಾವರ ಶ್ರೀಗಳು ಕೂಡ ಸೌಹಾರ್ದದ ಮಾತುಗಳನ್ನೇ ಆಡಿದ್ದಾರೆ’ ಎಂದು ಹೇಳಿದರು.
Related Articles
ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಮಾತನಾಡಿ, “ರಾಮ ಮಂದಿರ ನಿರ್ಮಾಣ ಕುರಿತಾಗಿ ಭಿನ್ನಾಭಿ ಪ್ರಾಯವಿಲ್ಲ. ನಂಬಿಕೆಯನ್ನು ಅಲುಗಾಡಿಸುವ ಪ್ರಯತ್ನ ಫಲ ನೀಡುವುದಿಲ್ಲ. 1992ರಲ್ಲಿ ಬಾಬರಿ ಮಸೀದಿ ಕಟ್ಟಡದ ಮೇಲೆ ಹಾನಿ ಮಾಡುವ ಕುರಿತು ಸರ್ವೋಚ್ಚ ಸಮಿತಿ ಸಭೆಯಲ್ಲಿ ತೀರ್ಮಾನ ವಾಗಿರಲಿಲ್ಲ. ಶಾಂತಿ ಯುತ ವಾಗಿ, ಸಾಂಕೇತಿಕವಾಗಿ ರಾಮ ಮಂದಿರ ಸ್ಥಳದಲ್ಲಿ ಕರಸೇವೆ ಮಾಡಲು ತೀರ್ಮಾನ ವಾಗಿತ್ತು. ಆದರೆ ಅಲ್ಲಿ ಕಲ್ಲು ತೂರಾಟ ನಡೆಯಿತು. ನಾವು ಪ್ರಚೋ ದನೆ ನೀಡಿರಲಿಲ್ಲ. ಬದಲಾಗಿ ಕಲ್ಲು ತೂರಾಟ ಮಾಡು ವವರನ್ನು ತಡೆ ಯಲು ಪ್ರಾಮಾಣಿಕವಾಗಿ ಪ್ರಯತ್ನಿ ಸಿದ್ದೆವು’ ಎಂದು ನುಡಿದರು.
Advertisement