Advertisement

ತುರ್ತುಪರಿಸ್ಥಿತಿ ಸಂತ್ರಸ್ತರ ನೆರವಿಗೆ ಸರಕಾರ ಮುಂದಾಗಲಿ

03:33 PM Jul 16, 2019 | sudhir |

ಕುಂಬಳೆ : ಕಳೆದ 1975ರಲ್ಲಿ ದೇಶಾದಾದ್ಯಂತ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಘೋಷಿಸಿದ ತುರ್ತುಪರಿಸ್ಥಿತಿಯ ವಿರುದ್ಧ ಲೋಕನಾಯಕ ಜಯಪ್ರಕಾಶ್‌ ನಾರಾಯಣ ಅವರ ಲೋಕಸಂಘರ್ಷ ಸಮಿತಿ ಸಂಘಟನೆಯ ಮೂಲಕ ಹೋರಾಟ ನಡೆಸಿ ಮಡಿದವರ, ಹಲ್ಲೆಗೊಳಗಾಗಿ ಅಶಕ್ತರಾಗಿ ಹಾಸಿಗೆ ಹಿಡಿದಿರುವ ಮತ್ತು ಭೂಗತರಾಗಿ ಕಾರ್ಯಾಚರಿಸಿದವರಿಗೆ, ಸೊತ್ತುಗಳನ್ನು ಕಳಕೊಂಡ ಸಂಘ ಪರಿವಾರದ ಎಲ್ಲರಿಗೂ ರಾಜ್ಯ ಸರಕಾರ ಚಿಕಿತ್ಸಾ ನೆರವು, ಸಹಾಯಧನ ಮತ್ತು ಪಿಂಚಣಿ ನೀಡಬೇಕೆಂಬುದಾಗಿ ತುರ್ತುಪರಿಸ್ಥಿತಿ ವಿರುದ್ಧ ಹೋರಾಟ ಸಮಿತಿಯ ಸಂಘಟನೆಯ ಕಾಸರಗೋಡು ಜಿಲ್ಲಾಧ್ಯಕ್ಷ ವಿ.ರವೀಂದ್ರನ್‌ ಸರಕಾರವನ್ನು ಒತ್ತಾಯಿಸಿದರು.

Advertisement

ಕಾಸರಗೋಡಿನ ಟೌನ್‌ ಬ್ಯಾಂಕ್‌ಹಾಲ್‌ನಲ್ಲಿ ನಡೆದ ಸಂಘಟನೆಯ ಸಭೆಯಲ್ಲಿ ಮಾತನಾಡಿದ ಅವರು ತುರ್ತುಪರಿಸ್ಥಿತಿ ವಿರುದ್ಧ ಹೋರಾಟವನ್ನು ದ್ವಿತೀಯ ಸ್ವಾತಂತ್ರÂ ಹೋರಾಟವಾಗಿ ಪರಿಗಣಿಸಬೆಕು. ಹೋರಾಟಗಾರರಿಗೆ ಸರಕಾರ ಮಾನ್ಯತೆ ನೀಡಬೇಕು.

ಹೋರಾಟದಲ್ಲಿ ಮಡಿದವರ ಮನೆಯವರಿಗೆ ಸರಕಾರದ ಎಲ್ಲ ಸವಲತ್ತುಗಳನ್ನು ನೀಡಬೇ ಕೆಂಬುದಾಗಿ ಸಭೆಯಲ್ಲಿ ಒತ್ತಾಯಿ ಸಲಾಯಿತು.
ಈ ಕುರಿತು ರಾಜ್ಯ ಸರಕಾರದ ಅಡಿಶನಲ್‌ ಚೀಫ್‌ ಸೆಕ್ರೆಟರಿಯವರು ಕಳೆದ     18-2-2019 ರಂದು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಯವರಿಗೆ ವರದಿ ಸಲ್ಲಿಸಲು ಸುತ್ತೋಲೆ ಹೊರಡಿಸಿರುವರು.ಇದರಂತೆ ಆಯಾ ಗ್ರಾಮ ಕಚೇರಿ ಗ್ರಾಮಾಧಿಕಾರಿಗಳಿಂದ ಜಿಲ್ಲಾಡಳಿತ ವರದಿ ಕೇಳಿದ್ದರೂ ಹೆಚ್ಚಿನ ಗ್ರಾಮಾಧಿಕಾರಿಗಳು ಲೋಕಸಭಾ ಚುನಾವಣೆಯ ನೆಪ ಒಡ್ಡಿ ಸಕಾಲದಲ್ಲಿ ವರದಿ ಸಲ್ಲಿಸದೆ ಕರ್ತವ್ಯದಲ್ಲಿ ವಿಮುಖತೆ ತೋರಿರುವುದಾಗಿಯೂ ಇನ್ನು° ಕೆಲವು ಆಡಳಿತ ಪಕ್ಷದ ಅಧಿಕಾರಿಗಳು ಇದನ್ನು ನಿರ್ಲಕ್ಷ್ಯಗೊಳಿಸಿರುವುದಾಗಿ ಸಭೆಯಲ್ಲಿ ಆರೋಪಿಸಲಾಯಿತು.

ದೇಶಾದಾದ್ಯಂತ ಕೇಂದ್ರ ಸರಕಾರದ ಆದೇಶದಂತೆ ಬಿ.ಜೆ.ಪಿ.ಆಡಳಿತ ನಡೆಸುವ ಎಲ್ಲ ಸರಕಾರಗಳು ತುರ್ತುಪರಿಸ್ಥಿತಿ ಸಂತ್ರಸ್ತರಿಗೆ ನೆರವು ಮತ್ತು ಪಿಂಚಣಿ ನೀಡುತ್ತಿದ್ದರೂ ರಾಜ್ಯ ಸರಕಾರ ಬಹಳಷ್ಟು ವಿಳಂಬವಾಗಿ ಇದಕ್ಕೆ ಮುಂದಾಗಿದೆ. ಅದರಲ್ಲೂ ತುರ್ತುಪರಿಸ್ಥಿತಿ ಕಾಲದಲ್ಲಿ ಯಾವುದೇ ಪ್ರತಿಭಟನೆ ನಡೆಸದೆ ಅವಿತಿದ್ದ ಸಿ.ಪಿ.ಎಂ.ಪಕ್ಷ ಇಂದು ಆಡಳಿತದ ನೆಪದಲ್ಲಿ ಪಕ್ಷದ ಕಾರ್ಯಕರ್ತರನ್ನು ಹೋರಾಟಗಾರರೆಂಬುದಾಗಿ ಬಿಂಬಿಸಿ ನೆರವಿಗೆ ಮುಂದಾಗಿದೆ ಎಂಬುದಾಗಿ ಸಭೆಯಲ್ಲಿ ಆರೋಪಿಸಲಾಯಿತು.

ತುರ್ತುಪರಿಸ್ಥಿತಿ ವಿರುದ್ಧ ಹೋರಾಟ ನಡೆಸಿ ಮಿಸ ಕಾಯಿದೆಯಡಿ ಬಂಧನಕ್ಕೊಳಗಾಗಿ ಜೈಲು ವಾಸ ಅನುಭವಿಸಿದ ನ್ಯಾಯವಾದಿ ಕೆ.ಸುಂದರ ರಾವ್‌ ಸಭೆಯ ಅಧ್ಯಕ್ಷತೆ ವಹಿಸಿದರು.

Advertisement

ಸಂಘಟನೆಯ ರಾಜ್ಯ ಸಮಿತಿ ಸದಸ್ಯ ತಂಬಾನ್‌ ಪಿ ಮತ್ತು ಜಿಲ್ಲಾ ಸಮಿತಿ ಪದಾಧಿಕಾರಿಗಳು, ಸದಸ್ಯರು ಹೋರಾಟಗಾರರು ಮತ್ತು ಭೂಗತರಾಗಿ ಕಾರ್ಯಾಚರಿಸಿದ ಕಾರ್ಯಕರ್ತರು ಭಾಗವಹಿಸಿದರು.

ಸಂಘಟನೆಯ ಕೋಶಾಧಿಕಾರಿ ಎಂ.ಮಹಾಬಲ ರೈ ಅವರು ಸ್ವಾಗತಿಸಿದರು. ಕಾರ್ಯದರ್ಶಿ ವಂದಿಸಿದರು.

ಕೃಷಿಯಂತ್ರಗಳಿಗೆ ಹಾನಿ
ತುರ್ತುಪರಿಸ್ಥಿತಿ ವಿರುದ್ಧ ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು 15 ತಂಡಗಳು ಹೋರಾಟ ನಡೆಸಿ ಸಹಸ್ರಾರು ಕಾರ್ಯಕರ್ತರು ಬಂಧನ ಕ್ಕೊಳಗಾಗಿ ಜೈಲುವಾಸ ಅನುಭವಿಸಿರುವರು.ಹಲವು ಹೋರಾಟಗಾರರಿಗೆ ಹಿಂಸೆ ನೀಡಿ ರಾತ್ರಿಕಾಲದಲ್ಲಿ ದೂರದ ಕಾಡಿನಲ್ಲಿ ನಿರ್ಜನ ಪ್ರದೇಶದಲ್ಲಿ ಬಿಡಲಾಗಿದೆ. ಪೈವಳಿಕೆ ಪಂಚಾಯತ್‌ ವ್ಯಾಪ್ತಿಯ ಹಲವಾರು ಸಂಘಪರಿವಾರದ ಮನೆಗಳಿಗೆ ಪೊಲೀಸರ ತಂಡ ದಾಳಿ ನಡೆಸಿರುವುದಲ್ಲದೆ ಕಂಗು ಬಾಳೆ ಕೃಷಿಗಳನ್ನು ಮತ್ತು ಕೃಷಿಯಂತ್ರಗಳಿಗೆ ಹಾನಿ ಎಸಗಿದೆ. ಆದರೆ ಸಂತ್ರಸ್ತರಿಗೆ ಈ ತನಕ ಯಾವುದೇ ಪರಿಹಾರ ದೊರೆಯದೆ ಅನ್ಯಾಯವಾಗಿದೆ.ಆದುದರಿಂದ ಇವರಿಗೆ ತತ್‌ಕ್ಷಣ ಸರಕಾರ ನೆರವು ಮತ್ತು ಪಿಂಚಣಿ ನೀಡಬೇಕೆಂಬುದಾಗಿ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next