ಮಂಗಳೂರು: ನಾಲ್ಕನೇ ಶನಿವಾರದ ರಜೆ ಸೌಲಭ್ಯದಿಂದ ಶಿಕ್ಷಕ ರನ್ನು ರಾಜ್ಯ ಸರಕಾರ ಹೊರಗಿಟ್ಟಿರುವು ದಲ್ಲದೆ, ಅವರ ಐದು ಸಾಂದರ್ಭಿಕ ರಜೆಗಳನ್ನೂ ಕಡಿತಗೊಳಿಸಿದೆ.
‘ಈಗ ಇತರರಂತೆ ಶಿಕ್ಷಕರಿಗೆ 2ನೇ ಮತ್ತು 4ನೇ ಶನಿವಾರದ ರಜೆ ಇಲ್ಲದಿದ್ದರೂ ಅವರ ಸಾಂದರ್ಭಿಕ ರಜೆಯನ್ನು 10ಕ್ಕೆ ಇಳಿಸಲಾಗಿದೆ. ಹಾಗಾಗಿ ಸಾಂದರ್ಭಿಕ ರಜೆಗಳನ್ನು ಯಥಾಪ್ರಕಾರ ಮುಂದುವರಿಸ ಬೇಕು’ ಎಂದು ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಡಾ| ರಾಮಕೃಷ್ಣ ಶಿರೂರು ತಿಳಿಸಿದ್ದಾರೆ.
‘ಸರಕಾರ ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಶಿಕ್ಷಕರು ಪ್ರತಿಭಟಿ ಸುವರು’ ಎಂದು ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ರಾಜ್ಯ ಅಧ್ಯಕ್ಷ ಎಚ್.ಕೆ. ಮಂಜುನಾಥ್ ‘ಉದಯವಾಣಿ’ಗೆ ತಿಳಿಸಿದ್ದಾರೆ.
ರಜೆ ಬಗ್ಗೆ ‘ಉದಯವಾಣಿ’ಗೆ ಪ್ರತಿಕ್ರಿಯಿಸಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಆರ್. ಶ್ರೀನಿವಾಸ್, ‘4ನೇ ಶನಿವಾರವನ್ನು ಸರಕಾರಿ ರಜೆಯಾಗಿ ಘೋಷಿಸಿರುವ ಹಿನ್ನೆಲೆಯಲ್ಲಿ ಶಿಕ್ಷಕರ ಸಾಂದರ್ಭಿಕ ರಜೆಯಲ್ಲಿ ಕಡಿತವಾಗಿರುವುದು ಗಮನಕ್ಕೆ ಬಂದಿದೆ. ಈ ಗೊಂದಲ ಬಗೆಹರಿಸಲು ಜೂ. 29ರಂದು ಶಿಕ್ಷಕರ ಸಭೆ ಕರೆಯಲಾಗಿದೆ’ ಎಂದು ತಿಳಿಸಿದ್ದಾರೆ.
Advertisement
ಕೇಂದ್ರ ಸರಕಾರಿ ನೌಕರರಂತೆ ರಾಜ್ಯ ಸರಕಾರಿ ನೌಕರರಿಗೂ ನಾಲ್ಕನೇ ಶನಿವಾರ ರಜೆ ಘೋಷಿಸಿ ಇತ್ತೀಚೆಗೆ ರಾಜ್ಯ ಸರಕಾರ ಆದೇಶಿ ಸಿತ್ತು. ನಾಲ್ಕನೇ ಶನಿವಾರವೂ ಶಾಲೆ ಗಳಿರುವುದರಿಂದ ಈ ಸೌಲಭ್ಯ ಶಿಕ್ಷಕ ವರ್ಗಕ್ಕೆ ಅನ್ವಯಿಸಿರಲಿಲ್ಲ. ಆದರೂ ಇತರರಿಗೆ ಕಡಿತಗೊಳಿಸಿದಂತೆ ಶಿಕ್ಷಕರ ವಾರ್ಷಿಕ 15 ಸಾಂದರ್ಭಿಕ ರಜೆ (ಸಿಎಲ್)ಗಳ ಪೈಕಿ 5ನ್ನು ಕಡಿತ ಗೊಳಿಸಿ 10ಕ್ಕೆ ನಿಗದಿಪಡಿಸಿದೆ. ಇದರಿಂದ ರಾಜ್ಯದಲ್ಲಿ ಸುಮಾರು 2 ಲಕ್ಷಕ್ಕೂ ಮಿಕ್ಕಿ ಪ್ರಾಥಮಿಕ-ಪ್ರೌಢಶಾಲಾ ಶಿಕ್ಷಕರು, 1 ಲಕ್ಷಕ್ಕೂ ಹೆಚ್ಚು ಪ.ಪೂ. ಕಾಲೇಜು ಹಾಗೂ ಪದವಿ ಕಾಲೇಜು ಉಪನ್ಯಾಸಕರಿಗೆ ರಜೆ ನಷ್ಟವಾಗಲಿದೆ.
Related Articles
29ರಂದು ಸಭೆ: ಶಿಕ್ಷಣ ಸಚಿವ
ರಜೆ ಬಗ್ಗೆ ‘ಉದಯವಾಣಿ’ಗೆ ಪ್ರತಿಕ್ರಿಯಿಸಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಆರ್. ಶ್ರೀನಿವಾಸ್, ‘4ನೇ ಶನಿವಾರವನ್ನು ಸರಕಾರಿ ರಜೆಯಾಗಿ ಘೋಷಿಸಿರುವ ಹಿನ್ನೆಲೆಯಲ್ಲಿ ಶಿಕ್ಷಕರ ಸಾಂದರ್ಭಿಕ ರಜೆಯಲ್ಲಿ ಕಡಿತವಾಗಿರುವುದು ಗಮನಕ್ಕೆ ಬಂದಿದೆ. ಈ ಗೊಂದಲ ಬಗೆಹರಿಸಲು ಜೂ. 29ರಂದು ಶಿಕ್ಷಕರ ಸಭೆ ಕರೆಯಲಾಗಿದೆ’ ಎಂದು ತಿಳಿಸಿದ್ದಾರೆ.
ಮನವಿ ಬಂದಲ್ಲಿ ಕಳುಹಿಸಲಾಗುವುದು
ರಜೆ ಕಡಿತ ಮಾಡಿರುವುದು ಸರಕಾರದ ಆದೇಶ. ಅದಕ್ಕೆ ನಾನು ಪ್ರತಿಕ್ರಿಯೆ ನೀಡಲಾಗು ವುದಿಲ್ಲ. ರಜೆ ಕಡಿತ ಮಾಡದಂತೆ ಯಾವುದೇ ಮನವಿ ಸಂಘ ದಿಂದ ಬಂದಿಲ್ಲ. ಅವರು ಮನವಿ ನೀಡಿದಲ್ಲಿ ಸರಕಾರಕ್ಕೆ ಕಳುಹಿಸಿಕೊಡಲಾಗುವುದು.
-ವೈ. ಶಿವರಾಮಯ್ಯ, ಡಿಡಿಪಿಐ ದ.ಕ.
ರಜೆ ಬಗ್ಗೆ ಪರಿಶೀಲನೆ
ಶಿಕ್ಷಕರಿಗೆ ನಾಲ್ಕನೇ ಶನಿವಾರ ರಜೆ ಇಲ್ಲ. ಶಿಕ್ಷಕರ ಸಾಂದರ್ಭಿಕ ರಜೆ ಕಡಿತದ ಬಗ್ಗೆ ಶಿಕ್ಷಕ ವರ್ಗದಿಂದ ದೂರುಗಳು ಬಂದಿದ್ದು, ಆ ಬಗ್ಗೆ ಪರಿಶೀಲಿಸಲಾಗುವುದು.
-ಡಾ| ಪಿ.ಸಿ. ಜಾಫರ್, ಆಯುಕ್ತರು, ಶಿಕ್ಷಣ ಇಲಾಖೆ, ಬೆಂಗಳೂರು
-ಡಾ| ಪಿ.ಸಿ. ಜಾಫರ್, ಆಯುಕ್ತರು, ಶಿಕ್ಷಣ ಇಲಾಖೆ, ಬೆಂಗಳೂರು
-ಧನ್ಯಾ ಬಾಳೆಕಜೆ
Advertisement