Advertisement

ಸರಕಾರಿ ಪ್ರಾಯೋಜಿತ ಉಗ್ರವಾದ ವಿಶ್ವಕ್ಕೆ ಮಾರಕ

12:01 PM Jun 10, 2019 | Sriram |

ಮಾಲೆ (ಮಾಲ್ಡೀವ್ಸ್‌): “”ಸರಕಾರಿ ಪ್ರಾಯೋ ಜಿತ ಉಗ್ರವಾದವು ಇಡೀ ಜಗತ್ತಿಗೇ ಮಾರಕವಾಗಿದ್ದು, ಜಗತ್ತಿನ ಎಲ್ಲ ರಾಷ್ಟ್ರಗಳೂ ಈ ಪಿಡುಗನ್ನು ಬುಡಸಮೇತ ಕಿತ್ತುಹಾಕಲು ಪಣ ತೊಟ್ಟು, ಆ ನಿಟ್ಟಿನಲ್ಲಿ ಕಾರ್ಯೋ ನ್ಮುಖರಾಗಬೇಕು” ಎಂದು ಪ್ರಧಾನಿ ನರೇಂದ್ರ ಮೋದಿ, ವಿಶ್ವ ಸಮುದಾಯಕ್ಕೆ ಕರೆ ಕೊಟ್ಟಿದ್ದಾರೆ.

Advertisement

ಎರಡು ದಿನಗಳ ಭೇಟಿಗಾಗಿ ಮಾಲ್ಡೀವ್ಸ್‌ಗೆ ತೆರಳಿರುವ ಮೋದಿ, ಶನಿವಾರ ಸಂಜೆ ಅಲ್ಲಿನ ಸಂಸತ್‌ ಭವನ “ದ ಮಾಝಿ’ಯಲ್ಲಿ ಏರ್ಪಡಿಸಲಾಗಿದ್ದ ವಿಶೇಷ ಕಲಾಪದಲ್ಲಿ ಮಾತನಾಡಿದರು. ಉಗ್ರರ ಪಾಲಿನ ಸ್ವರ್ಗವೆನಿಸಿರುವ ಪಾಕಿಸ್ಥಾನದ ವಿರುದ್ಧ ಪರೋಕ್ಷ ಟೀಕಾ ಪ್ರಹಾರ ನಡೆಸಿದ ಅವರು, ಭಯೋತ್ಪಾದನೆಯು ಕೇವಲ ದೇಶಗಳಿಗಷ್ಟೇ ಅಲ್ಲ, ನಾಗರಿಕತೆಯ ಅಸ್ತಿತ್ವಕ್ಕೂ ಮಾರಕ.

ಇಡೀ ವಿಶ್ವಕ್ಕೇ ಮುಳುಗು ನೀರು ತಂದೊಡ್ಡಿರುವ ಭಯೋತ್ಪಾದನೆಯ ವಿರುದ್ಧ ವಿಶ್ವದ ಎಲ್ಲ ನಾಯಕರೂ ಒಟ್ಟಾಗಿ ಸೆಣಸಬೇಕಿದೆ ಎಂದರು. ಭಯೋತ್ಪಾದನೆ ಬಗ್ಗೆಯೂ ಮೃದುಧೋರಣೆ ತಳೆಯಲಾಗುತ್ತಿದ್ದು, ಉಗ್ರರನ್ನು “ಉತ್ತಮ ಭಯೋತ್ಪಾದಕರು, ಕೆಟ್ಟ ಭಯೋತ್ಪಾದಕರು’ ಎಂದು ವಿಶ್ಲೇಷಿಸುವುದೇ ತಪ್ಪು ಎಂದರು. ಆ ರೀತಿ ಮಾಡುವುದು ದುರದೃಷ್ಟಕರ ಬೆಳವಣಿಗೆ ಎಂದರು.

ಇದೇ ವೇಳೆ, ಜಾಗತಿಕ ಹವಾಮಾನ ಬದಲಾವಣೆಯ ಸಮಸ್ಯೆಗಳನ್ನು ಸರಿಪಡಿಸುವಲ್ಲಿ ಜಗತ್ತಿನ ಹಲವೆಡೆ ಎಲ್ಲ ದೇಶಗಳ ತಜ್ಞರು ಸಭೆ ಸೇರಿ ಚರ್ಚಿಸುವ ಮಾದರಿಯಲ್ಲೇ ಭಯೋತ್ಪಾದನೆ ನಿಗ್ರಹಕ್ಕೂ ಜಾಗತಿಕ ಮಟ್ಟದ ಸಮ್ಮೇಳನಗಳಾಗಬೇಕು ಎಂದು ಆಶಿಸಿದರು.

ಸೇವೆಗಳ ಉದ್ಘಾಟನೆ: ಪ್ರಶಸ್ತಿ ಸಮಾರಂಭಕ್ಕೂ ಮುನ್ನ, ರಿಪಬ್ಲಿಕ್‌ ಸ್ಕ$Ìಯರ್‌ನಲ್ಲಿ, ಮಾಲ್ಡೀವ್ಸ್‌ ಅಧ್ಯಕ್ಷ ಇಬ್ರಾಹೀಂ ಮೊಹಮ್ಮದ್‌ ಸೊಲಿಹ್‌ ಭೇಟಿ ಮಾಡಿದ ಮೋದಿ, ಭಾರತದ ನೆರವಿನೊಂದಿಗೆ ಮಾಲ್ಡೀವ್ಸ್‌ನಲ್ಲಿ ನಿರ್ಮಾಣವಾಗಿರುವ ಕರಾವಳಿ ರೇಡಾರ್‌ ವ್ಯವಸ್ಥೆ ಹಾಗೂ ಸೇನಾ ತರಬೇತಿ ಕೇಂದ್ರಗಳ ಸೇವೆಯನ್ನು ಸೊಲಿಹ್‌ ಜತೆಗೆ ಜಂಟಿಯಾಗಿ ಉದ್ಘಾಟಿಸಿದರು. ಅನಂತರ, ಮಾಲ್ಡೀವ್ಸ್‌ ಅಭಿವೃದ್ಧಿಗೆ ಭಾರತ ಎಂದಿಗೂ ಸಿದ್ಧವಿದೆ. ಮಾಲ್ಡೀವ್ಸ್‌ ಅಭಿವೃದ್ಧಿಗೆ ಪೂರಕವಾದ ಯೋಜನೆಗಳಿಗೆ ಧನ ಸಹಾಯ ಹಾಗೂ ಇನ್ನಿತರ ಅಗತ್ಯ ಬೆಂಬಲಗಳನ್ನು ನೀಡುವಲ್ಲಿ ಭಾರತ ಬದ್ಧವಾಗಿದೆ ಎಂದರು. ಮಾಲ್ಡೀವ್ಸ್‌ನಲ್ಲಿರುವ ಅತ್ಯಂತ ಹಳೆಯದಾದ ಹಾಗೂ ಆ ದೇಶದ ಕಣ್ಮಣಿಯಂತಿರುವ ಮಸೀದಿ “ಹುಕುರು ಮಿಸ್ಕಿಯ್‌’ನ ಅಭಿವೃದ್ಧಿಗೆ, ಸಂರಕ್ಷಣೆಗೆ ಸಹಾಯ ನೀಡುವುದಾಗಿ ಮೋದಿ ಘೋಷಿಸಿದ್ದಾರೆ. ಈ ಮಸೀದಿಯನ್ನು ಹವಳದ ಕಲ್ಲುಗಳಿಂದ ನಿರ್ಮಿಸಲಾಗಿದೆ.

Advertisement

ಆರು ಒಪ್ಪಂದಗಳಿಗೆ ಸಹಿ: ಇದೇ ವೇಳೆ, ಉಭಯ ನಾಯಕರು ಆರು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದರು. ಹೈಡ್ರೋಗ್ರಫಿ (ಸಮುದ್ರ ಹಾಗೂ ಇತರ ಜಲ ಸಂಪನ್ಮೂಲಗಳಲ್ಲಿನ ಜಲದ ಅಂದಾಜು ಮಾಪನ ತಂತ್ರಜ್ಞಾನ), ಆರೋಗ್ಯ, ಜಲ ಸಾರಿಗೆ, ಮಾಲ್ಡೀವ್ಸ್‌ನ “ಪರೋಕ್ಷ ತೆರಿಗೆ ಕೇಂದ್ರ ಕಚೇರಿ’ಗೆ ಧನಸಹಾಯ, ಭಾರತೀಯ ಉತ್ಪನ್ನಗಳ ಮೇಲಿನ ಸುಂಕ, ಮಾಲ್ಡೀವ್ಸ್‌ ಉತ್ಪನ್ನಗಳ ಮೇಲೆ ಭಾರತದಲ್ಲಿ ತೆರಿಗೆ – ಈ ವಿಷಯಗಳ ಬಗ್ಗೆ ಆರು ಒಪ್ಪಂದಗಳಿಗೆ ಸಹಿ ಹಾಕಲಾಯಿತು.

ಜತೆಯಲ್ಲೇ, ಸುಲಲಿತ ಸರಕಾರದ ಕೇಂದ್ರ ಕಚೇರಿ, ಆಡಳಿತಾತ್ಮಕ ಸುಧಾರಣಾ ಇಲಾಖೆ, ಮಾಲ್ಡೀವ್ಸ್‌ನಲ್ಲಿ ಸಾರ್ವಜನಿಕ ಕುಂದು ಕೊರತೆ ನಿವಾರಣೆ ಕಚೇರಿ, ಮಾಲ್ಡೀವ್ಸ್‌ ನಾಗರಿಕ ಸೇವೆಗಳ ಆಯೋಗ, ಮಾಲ್ಡೀವ್ಸ್‌ ಸರಕಾರಿ ಅಧಿಕಾರಿಗಳಿಗೆ ವಸತಿ ಸಮುತ್ಛಯ ನಿರ್ಮಾಣ ಮುಂತಾದ ವಿಚಾರಗಳಿಗೆ ಸಂಬಂಧಪಟ್ಟ ಒಪ್ಪಂದಕ್ಕೂ ಎರಡೂ ದೇಶಗಳು ಸಹಿ ಹಾಕಿದವು.

ಪ್ರಶಸ್ತಿಯ ಗರಿ
ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನಾರ್ಹ ಸಾಧನೆಗೈದ ವಿದೇಶಿ ಗಣ್ಯರಿಗೆ ಮಾಲ್ಡೀವ್ಸ್‌ ಸರಕಾರ ನೀಡುವ ಅತ್ಯುನ್ನತ ರಾಜತಾಂತ್ರಿಕ ಪ್ರಶಸ್ತಿಯಾದ “ರೂಲ್‌ ಆಫ್ ನಿಶಾನ್‌ ಇಝುದ್ದೀನ್‌’ ಪ್ರಶಸ್ತಿಯನ್ನು ಪ್ರಧಾನಿ ಮೋದಿಯವರಿಗೆ ನೀಡಿ ಗೌರವಿಸಲಾಯಿತು. ಶನಿವಾರ ಸಂಜೆ ಮಾಲ್ಡೀವ್ಸ್‌ ಅಧ್ಯಕ್ಷ ಇಬ್ರಾಹೀಂ ಮೊಹಮ್ಮದ್‌ ಸೋಲಿಹ್‌ ಅವರು ಪ್ರಶಸ್ತಿ ಪ್ರದಾನ ಮಾಡಿದರು.

6ನೇ ವಿದೇಶಿ ಪ್ರಶಸ್ತಿ
ಇದು ಮೋದಿಯವರಿಗೆ ವಿದೇಶಿ ಸರಕಾರಗಳಿಂದ ಸಂದಿರುವ 6ನೇ ಪ್ರಶಸ್ತಿ. 2016ರ ಎಪ್ರಿಲ್‌ನಲ್ಲಿ ಸೌದಿ ಅರೇಬಿಯಾ ಸರಕಾರ, “ಅಬ್ದುಲಜೀಜ್‌ ಅಲ್‌ ಸೌದ್‌’ ಪ್ರಶಸ್ತಿ ನೀಡಿ ಗೌರವಿಸಿತ್ತು. ಅದೇ ವರ್ಷ ಜೂನ್‌ನಲ್ಲಿ ಅಫ್ಘಾನಿಸ್ತಾನ ಸರಕಾರ , “ಘಾಜಿ ಅಮಿರ್‌ ಅಮಾನುಲ್ಲಾ ಖಾನ್‌’ ಪ್ರಶಸ್ತಿ ನೀಡಿತ್ತು. ಕಳೆದ ವರ್ಷ ಫೆಬ್ರವರಿಯಲ್ಲಿ, ಪ್ಯಾಲೆಸ್ತೀನ್‌ ಸರಕಾರ “ಗ್ರಾಂಡ್‌ ಕಾಲರ್‌ ಆಫ್ ದ ಸ್ಟೇಟ್‌ ಆಫ್ ಪ್ಯಾಲೆ ಸ್ತೀನ್‌’ ಪ್ರಶಸ್ತಿ ನೀಡಿತ್ತು. ಈ ವರ್ಷ ಎ. 4ರಂದು ಯು.ಎ.ಇ. ಸರಕಾರ “ಆರ್ಡರ್‌ ಆಫ್ ಝ ಯೀದ್‌’ ಪ್ರಶಸ್ತಿ ನೀಡಿದ್ದರೆ, ಎ. 12ರಂದು ರಷ್ಯಾ “ಆರ್ಡರ್‌ ಆಫ್ ಆ್ಯಂಡ್ರೂé’ ಪ್ರಶಸ್ತಿ ಬಂದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next