ಬೆಂಗಳೂರು : ಮುಖ್ಯಮಂತ್ರಿಯವರು ಕೋವಿಡ್ ಮೂರನೇ ಅಲೆಗೆ ಸಿದ್ಧರಾಗಿ ಎಂದು ಹೇಳಿದ್ದಾರೆ. ಆದ್ರೆ ಮೊದಲು ಎರಡನೇ ಅಲೆಯಲ್ಲಿ ಸಾಯುತ್ತಿರುವ ಜನರನ್ನು ರಕ್ಷಣೆ ಮಾಡಿ. ಅಲ್ಲದೆ ಎರಡನೇ ಅಲೆಯ ಕೋವಿಡ್ ಗೆ ಲಸಿಕೆಯನ್ನು ಒದಗಿಸಿ ಎಂದು ಬೆಂಗಳೂರಿನಲ್ಲಿ ಮಂಗಳವಾರ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
ಕೋವಿಡ್ ಲಸಿಕೆ, ಬೆಡ್, ಆಕ್ಸಿಜನ್ ಬಗ್ಗೆ ಸರ್ಕಾರಕ್ಕೆ ಗೊಂದಲ ಇದೆ. ನಾಮಗೂ ಕೂಡ ಲಸಿಕೆ ನೋಂದಣಿ ಮಾಡಲು ಆನ್ ಲೈನ್ ನಲ್ಲಿ ಗೊಂದಲವಾಗುತ್ತಿದೆ. ಇದಕ್ಕೆ ಒಂದು ಒಳ್ಳೆಯ ನಿರ್ದಾರವನ್ನು ಸರ್ಕಾರ ಕೈಗೊಳ್ಳಬೇಕು ಎಂದು ಶಿವಕುಮಾರ್ ಹೇಳಿದ್ದಾರೆ.
ಲಾಕ್ ಡೌನ್ ನಿಂದ ಜನರು ವಲಸೆ ಹೋಗುತ್ತಿದ್ದಾರೆ. ತಮಿಳುನಾಡು ಸರ್ಕಾರ ಜನರಿಗೆ ಪರಿಹಾರವನ್ನು ನೀಡಿದೆ. ನಮ್ಮ ರಾಜ್ಯದಲ್ಲೂ ಲಾಕ್ ಡೌನ್ ನಿಂದ ತೊಂದರೆ ಅನುಭವಿಸುತ್ತಿರುವ ಜನರಿಗೆ ಪರಿಹಾರ ನೀಡಲಿ. ಪ್ರತಿ ಕುಟುಂಬಕ್ಕೂ 10 ಸಾವಿರ ನೀಡಬೇಕು. ಆ ನಂತರ ಯಾರೂ ವಲಸೆ ಹೋಗುವುದಿಲ್ಲ ಎಂದಿದ್ದಾರೆ.
ಇನ್ನು ರೈತರು ಕೂಡ ಸಂಕಷ್ಟದಲ್ಲಿದ್ದಾರೆ. ಕೃಷಿ ಸಚಿವರೇ ನೀವು ಎಪಿಎಂಸಿಗಳಿಗೆ ಹೋಗಿ ರೈತರ ಕಷ್ಟ ಏನು ಎಂಬುದನ್ನು ತಿಳಿದುಕೊಂಡು ಪರಿಹಾರ ನೀಡುವ ಕೆಲಸ ಮಾಡಿ ಎಂಡಿದ್ದಾರೆ.