Advertisement
ಅಧಿಕಾರ ಎನ್ನುವುದು ಜನರ ಸೇವೆಗೆ ದೊರಕಿರುವ ಅವಕಾಶವೆಂದು ನಾನು ಭಾವಿಸಿದ್ದೇನೆ. ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಸರಕಾರ ಈಗಾಗಲೇ 12,000 ಕೋಟಿ ರೂ. ಗಳ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಇದೀಗ ಮಸ್ಕಿ ತಾಲೂಕು ಕೇಂದ್ರ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ 540 ಕೋ.ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದರು.
ಅನಿಲ ಭಾಗ್ಯ, ಕೃಷಿ ಭಾಗ್ಯ, ಶಾದಿ ಭಾಗ್ಯ, ಮಾತೃಪೂರ್ಣ ಭಾಗ್ಯ, ರೈತರ ಬೆಳಕು, ಇಂದಿರಾ ಕ್ಯಾಂಟೀನ್ ಮುಂತಾದ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಕೃಷ್ಣಾ ನಿಗಮದಿಂದ 750 ಕೋ.ರೂ. ವೆಚ್ಚದಲ್ಲಿ 0.95 ಕಿ.ಮೀ ಕಾಲುವೆ ಆಧುನೀಕರಣ ಮಾಡಲಾಗುವುದು. ರಾಜ್ಯದ 30 ಲಕ್ಷ ಪಲಾನುಭವಿಗಳಿಗೆ ಅನಿಲ ಭಾಗ್ಯ ಯೋಜನೆಯ ಮೂಲಕ ಕಿಟ್ ಹಾಗೂ ಸಿಲಿಂಡರ್ ನೀಡಲಾಗುವುದು.
Related Articles
Advertisement
ಅನ್ನಭಾಗ್ಯ ಯೋಜನೆ ಸೌಲಭ್ಯವನ್ನು ರಾಜ್ಯದ 3.80 ಲಕ್ಷ ಜನ ಪಡೆಯುತ್ತಿದ್ದು, ತನ್ಮೂಲಕ ಹಸಿವು ಮುಕ್ತ ರಾಜ್ಯ ಮಾಡುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇರಿಸಲಾಗಿದೆ. 3.58 ಲಕ್ಷ ಜನ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ನೀಡಲಾಗುತ್ತಿದೆ.ದೇಶದಲ್ಲಿಯೇ ಈ ಯೋಜನೆಯನ್ನು ಜಾರಿ ಮಾಡಿದ ಏಕೈಕ ಸರಕಾರ ರಾಜ್ಯ ಕಾಂಗ್ರೆಸ್ ಸರ್ಕಾರ ಎಂದರು. ರಾಜ್ಯದಲ್ಲಿ ಮೊದಲ ಬಾರಿಗೆ ಆರೋಗ್ಯ ಭಾಗ್ಯ ಯೋಜನೆ ಮೂಲಕ 1.43 ಲಕ್ಷ ಕುಟುಂಬಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು ಎಂದರು. ರಾಜ್ಯದ ಜನತೆಗೆ ಸುಳು ಭರವಸೆಗಳನ್ನು ಸರಕಾರ ನೀಡಿಲ್ಲ. ನಾವು ನುಡಿದಂತೆ ನಡೆದಿದ್ದೇವೆ. ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್ ಸಜ್ಜನ, ಸರಳ ವ್ಯಕ್ತಿ. ಮಾತು ಕಡಿಮೆ ಕೆಲಸ ಜಾಸ್ತಿ. ಮಸ್ಕಿ ಕ್ಷೇತ್ರ ಮತ್ತಷ್ಟು ಅಭಿವೃದ್ಧಿಯಾಗಬೇಕಾದರೆ ಅವರನ್ನು ಮತ್ತೆ ಗೆಲ್ಲಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ವಿನಂತಿಸಿದರು. ರಾಯಚೂರು ಸಂಸದ ಬಿ.ವಿ.ನಾಯಕ, ಶಾಸಕರಾದ ಹಂಪನಗೌಡ ಬಾದರ್ಲಿ, ಹಂಪಯ್ಯ ನಾಯಕ, ವಿಧಾನ ಪರಿಷತ್ ಸದಸ್ಯರಾದ ಎನ್.ಎಸ್. ಬೋಸರಾಜು, ಶರಣಪ್ಪ ಮಟ್ಟೂರು, ಬಸವರಾಜ ಪಾಟೀಲ್ ಇಟಗಿ, ಮಾಜಿ ಸಚಿವ
ಅಮರೇಗೌಡ ಬಯ್ನಾಪುರ, ಡಾ|ಪುಷ್ಪಾವತಿ, ಮಾನ್ವಿ ತಾಪಂ ಅಧ್ಯಕ್ಷೆ ಶರಣಮ್ಮ ಮುದಿಗೌಡ, ಚಂದ್ರಶೇಖರ್
ಪಾಟೀಲ್, ಮೀನಾಕ್ಷಿ, ಜಿಲ್ಲಾ ಧಿಕಾರಿ ಡಾ| ಗೌತಮ್ ಬಗಾದಿ ಮುಂತಾದವರು ಉಪಸ್ಥಿತರಿದ್ದರು. ಸಾವಿರಾರು ಜನ ಭಾಗವಹಿಸಿದ್ದರು. ಕೃಷ್ಣಾ ಬಲದಂಡೆ 5ಎ
ಯೋಜನೆ ಜಾರಿಗೆ ಮನವಿ ಶಾಸಕ ಪ್ರತಾಪಗೌಡ ಪಾಟೀಲ್ ಮಾತನಾಡಿ, 1,590 ಕೋಟಿ ರೂ. ವೆಚ್ಚದಲ್ಲಿ ನಂದವಾಡಗಿ ಏತ ನೀರಾವರಿ ಯೋಜನೆಯಡಿ 50 ಸಾವಿರ ಹೆಕ್ಟೇರ್ ಜಮೀನು ನೀರಾವರಿ ಸೌಲಭ್ಯ ಪಡೆಯಲಿದೆ. 7500 ಎಕರೆಗೆ ನೀರು ಒದಗಿಸುವ ಮಸ್ಕಿ ನಾಲಾ ಯೋಜನೆಯ ಕಾಲುವೆಗಳು ಶಿಥಿಲಗೊಂಡಿದ್ದು ಕಾಲುವೆಗಳ ಆಧುನೀಕರಣವಾಗಬೇಕಾಗಿದೆ ಎಂದ ಅವರು, ಈ ಭಾಗದ ಕೃಷ್ಣಾ ಬಲದಂಡೆ 5ಎ ಯೋಜನೆ ಜಾರಿಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿನಂತಿಸಿದರು. ಜೆಡಿಎಸ್‌ನ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ತಾವು ಅಧಿ ಕಾರಕ್ಕೆ ಬಂದಲ್ಲಿ 52 ಸಾವಿರ ಕೋಟಿ ರೂ.ರೈತರ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡುತ್ತಿದ್ದಾರೆ. ಆದರೆ ಅವರು ಅಧಿಕಾರಕ್ಕೆ ಬರುವುದಿಲ್ಲ ಅದಕ್ಕಾಗಿ ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ.
ಸಿದ್ದರಾಮಯ್ಯ, ಮುಖ್ಯಮಂತ್ರಿ