Advertisement

ನಿರ್ವಹಣೆ ಇಲ್ಲದೆ ಸೊರಗುತ್ತಿದೆ ಸರಕಾರಿ ಬಾವಿ

10:18 PM Apr 28, 2019 | sudhir |

ಕಟಪಾಡಿ: ಉದ್ಯಾವರ ಗ್ರಾ. ಪಂ. ವ್ಯಾಪ್ತಿಯ ಪಿತ್ರೋಡಿ ಮುಡ್ಡಲಗುಡ್ಡೆ ಬ್ರಹ್ಮನಗರದಲ್ಲಿನ ಸರಕಾರಿ ಬಾವಿಯೊಂದು ಸಮರ್ಪಕ ನಿರ್ವಹಣೆ ಕಾಣದೆ ಸೊರಗಿದೆ.

Advertisement

ಬಾವಿಯ ಒಳಗಿನಿಂದಲೇ ಗಿಡಗಳು ಬೆಳೆದು ನಿಂತಿದೆ. ಹೂಳೆತ್ತದೆ, ಸಮರ್ಪಕ ನಿರ್ವಹಣೆ ಕಾಣದೆ ಬಾವಿಯ ನೀರು ಕಲುಶಿತಗೊಂಡಿದೆ. ಇದನ್ನೆಲ್ಲ ಸರಿಪಡಿಸಿದರೆ, ಸ್ಥಳೀಯರ ಕುಡಿಯುವ ನೀರಿನ ಬೇಡಿಕೆಗೆ ಪರಿಹಾರವಾಗಬಲ್ಲದು.

ನಳ್ಳಿ ನೀರು ಕಲುಶಿತ
ಈ ಭಾಗದಲ್ಲಿ ಸುಮಾರು 50ಕ್ಕೂ ಅಧಿಕ ಮನೆಗಳು ಇದ್ದು ಈ ಮೊದಲು ಇದೇ ಬಾವಿಯ ನೀರನ್ನು ಉಪಯೋಗಿಸುತ್ತಿದ್ದರು. ಇದೀಗ ಪಂಚಾಯತ್‌ ನಳ್ಳಿ ನೀರಿನ ಸಂಪರ್ಕವನ್ನು ಈ ಭಾಗದ ಜನತೆಗೆ ನೀಡಿದೆ. ಆದರೆ ಅದರಲ್ಲಿ ಹೆಚ್ಚಾಗಿ ಹಳದಿಕೆಂಪು ಮಿಶ್ರಿತ ಬಣ್ಣದ ನೀರು ಬರುವುದರಿಂದ ಹೆಚ್ಚು ಉಪಯೋಗಿಸಲು ಅಸಾಧ್ಯವಾಗಿದೆ.

ವಿದ್ಯುತ್‌ ಕೈಕೊಟ್ಟು ನಳ್ಳಿ ನೀರು ಬರದೆ ಇರುವ, ಹೆಚ್ಚುವರಿ ನೀರಿನ ಬೇಡಿಕೆ ಇರುವ ತುರ್ತು ಸಂದರ್ಭಗಳಲ್ಲಿ ಇಲ್ಲಿನ ಕಾಲನಿ ನಿವಾಸಿಗಳಿಗೆ ಕುಡಿಯುವ ನೀರು ದೊರಕದೆ ಸಮಸ್ಯೆ ಎದುರಿಸುವಂತಾಗಿದೆ ಎಂದು ಸ್ಥಳೀಯ ನಿವಾಸಿಗಳು ಹೇಳುತ್ತಾರೆ.

ಗಿರೀಶ್‌ ಸುವರ್ಣ, ಕೋಟ್‌ 2: ಈ ಸಮಸ್ಯೆಯ ಬಗ್ಗೆ ಇದುವರೆಗೆ ಗಮನಕ್ಕೆ ಬಂದಿಲ್ಲ. ಉದ್ಯಾವರ ಗ್ರಾ. ಪಂ. ವ್ಯಾಪ್ತಿಯ ಮೂರು ಬಾವಿಗಳನ್ನು ಹೂಳೆತ್ತುವ ಮೂಲಕ ನಿರ್ವಹಣೆ ಮಾಡಲಾಗುತ್ತಿದೆ. ಅದರ ಜತೆಗೆ ಮುಡ್ಡಲಗುಡ್ಡೆ ಕಾಲನಿಯ ಸರಕಾರಿ ಬಾವಿಯನ್ನು ಕೂಡ ನಿರ್ವಹಣೆ ಮಾಡಲಾಗುತ್ತದೆ. ಜನಪರ ಉಪಯೋಗಕ್ಕಾಗಿ ಸುಮಾರು 10 ದಿನಗಳೊಳಗಾಗಿ ನಿರ್ವಹಣೆಯನ್ನು ಕೈಗೆತ್ತಿಕೊಳ್ಳಲಾಗುವುದು
-ರಮಾನಂದ ಪುರಾಣಿಕ್‌, ಪಿ.ಡಿ.ಒ., ಉದ್ಯಾವರ ಗ್ರಾ. ಪಂ.

Advertisement

ಈ ಸಮಸ್ಯೆಯ ಬಗ್ಗೆ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಗಮನ ಹರಿಸುವಂತೆ ವಿನಂತಿಸಿ ಕೊಳ್ಳಲಾಗಿದೆ.
-ಗಿರೀಶ್‌ ಸುವರ್ಣ, ಸದಸ್ಯ, ಉದ್ಯಾವರ ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next