Advertisement

ಕಪ್ಪು ಶಿಲೀಂಧ್ರದ ಔಷಧದ ಬಗ್ಗೆ ಸರ್ಕಾರ ಎಚ್ಚೆತ್ತುಕೊಂಡಿದೆ : ಕುಮಾರಸ್ವಾಮಿ

06:37 PM May 23, 2021 | Team Udayavani |

ಬೆಂಗಳೂರು : ಕಪ್ಪು ಶಿಲೀಂಧ್ರದ ಚಿಕಿತ್ಸೆಗೆ ಅಗತ್ಯವಿರುವ ಔಷಧ ಪೂರೈಕೆಯಲ್ಲಿನ ಕೇಂದ್ರದ ತಾರತಮ್ಯ, ಔಷಧ ಸಂಗ್ರಹಿಸಲು ತೆಲಂಗಾಣ ಕೈಗೊಂಡ ಕ್ರಮಗಳ ಕುರಿತು 22-05-2021ರಂದು ಟ್ವೀಟ್‌ ಮಾಡಿ ಸರ್ಕಾರವನ್ನು ಎಚ್ಚರಿಸಿದ್ದೆ. ಅದು ವರದಿಯೂ ಆಗಿತ್ತು. ಅದರ ಮರುದಿನವೇ ಔಷಧ ಪೂರೈಕೆಗೆ ಸರ್ಕಾರ ಕಂಪನಿಗಳಿಂದ ದರ ಪಟ್ಟಿ ಆಹ್ವಾನಿಸಿದೆ. ಇದು ಸ್ವಾಗತಾರ್ಹ ಕ್ರಮ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ಮೂಲಕ ತಿಳಿಸಿದ್ದಾರೆ.

Advertisement

ಕಪ್ಪು ಶಿಲೀಂಧ್ರ ಚಿಕಿತ್ಸೆಗೆ ಅಗತ್ಯವಿರುವ ಔಷಧ ಸಂಗ್ರಹಿಸಲು ಸರ್ಕಾರ ತಡವಾಗಿಯಾದರೂ ಎಚ್ಚೆತ್ತುಕೊಂಡಿದೆ. ಪ್ರತಿಯೊಂದಕ್ಕೂ ಕೇಂದ್ರದತ್ತ ನೋಡದೇ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳುವಂತೆ ನೀಡಿದ್ದ ಸಲಹೆಯನ್ನು ಸರ್ಕಾರ ಪರಿಗಣಿಸಿದೆ. ಸೂಕ್ತ ಸಮಯದಲ್ಲಿ ನೀಡಲಾಗುವ ಸೂಕ್ತ ಸಲಹೆಗಳನ್ನು ಮನ್ನಿಸುವುದು ರಾಜ್ಯದ ಹಿತದೃಷ್ಟಿಯಿಂದಲೂ ಒಳ್ಳೆಯದು ಎಂದು ಕುಮಾರಸ್ವಾಮಿ  ಟ್ವಿಟ್ಟರ್  ಮೂಲಕ ಬರೆದುಕೊಂಡದ್ದಾರೆ.

 

 

Advertisement

Udayavani is now on Telegram. Click here to join our channel and stay updated with the latest news.

Next