Advertisement

ಪಾಕ್‌ ಪರ ಘೋಷಣೆ ಕೂಗಿದ್ರೆ ಸರಕಾರ ಸುಮ್ಮನಿರಲ್ಲ : ಕೋಟ

10:08 AM Mar 02, 2020 | sudhir |

ಶಿರಸಿ: ಪಾಕಿಸ್ತಾನ ಪರ ಘೋಷಣೆ, ಭಾರತಕ್ಕೆ ವಿರೋಧದ ಜಯಕಾರ ಕೂಗಿದವರ ವಿರುದ್ಧ ಸರಕಾರ ಸುಮ್ಮನಿರಲ್ಲ ಎಂದು ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಲದ ಹೆಗ್ಗಣ, ಹಾವುಗಳು ಹೊರಬರುತ್ತಿವೆ. ಇಲ್ಲಿನ ಗಾಳಿ-ನೀರು ಕುಡಿದು ಭಾರತದ ವಿರುದ್ಧ ಮಾತನಾಡಿದರೆ ಜೈಲಿಗೆ ಕಳಿಸುತ್ತೇವೆ ಎಂದರು. ದೊರೆಸ್ವಾಮಿ ಹಾಗೂ ಯತ್ನಾಳರ ಮಾತುಗಳನ್ನು ಕೇಳಿದ್ದೇವೆ. ಈ ಗೊಂದಲ ಇತ್ಯರ್ಥ ಆಗಬಹುದೆಂಬ ನಂಬಿಕೆ ಇದೆ ಎಂದರು.

Advertisement

ಸಿಎಂ ಪರಮಾಧಿಕಾರ:
ಉಸ್ತುವಾರಿ, ನಿಗಮ-ಮಂಡಳಿ ನೇಮಕ, ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳ ಪರಮಾಧಿಕಾರ. ಸಚಿವ ಸಂಪುಟ ವಿಸ್ತರಣೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ನೇಮಕಾತಿ ಸಂಬಂಧ ಸ್ವಲ್ಪ ವಿಳಂಬ ಆಗಿದ್ದರೂ ಸಿಎಂ ಆಯಾ ಕಾಲಕ್ಕೆ ರಾಜ್ಯದ ಅಧ್ಯಕ್ಷರ, ಕೇಂದ್ರದ ನಾಯಕರ ಸಹಮತ ಪಡೆದು ಸಮರ್ಪಕವಾದ ತೀರ್ಮಾನ ಕೈಗೊಳ್ಳುತ್ತಾರೆ. ಸ್ವಾಭಾವಿಕವಾಗಿ ಆಯಾ ಜಿಲ್ಲೆಯವರಿಗೆ ಉಸ್ತುವಾರಿ ಸಿಗುತ್ತದೆ. ಆದರೆ, ಕೆಲವೊಮ್ಮೆ ಆಚೀಚೆ ಆಗಬಹುದು. ಉಸ್ತುವಾರಿಗಳು ಎಂದರೆ ಆಯಾ ಜಿಲ್ಲೆಗಳ ಅಭಿವೃದ್ಧಿ, ಆಗುಹೋಗುಗಳನ್ನು ನೋಡಿಕೊಳ್ಳಬೇಕಾದವರು ಎಂದರ್ಥ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next