Advertisement
ದೇಶದಲ್ಲಿ 100 ಕೋಟಿ ಜನರಿಗೆ ಕೋವಿಡ್ ಲಸಿಕೆ ಮೊದಲನೇ ಡೋಸ್ ನೀಡಿದ ಹಿನ್ನೆಲೆಯಲ್ಲಿ ಸಂಭ್ರಮಾಚರಣೆ ಹಾಗೂ ಮಕ್ಕಳಿಗೆ ನ್ಯೂಮೋನಿಯಾ ತಡೆ ನಿಟ್ಟಿನಲ್ಲಿ ನೀಡಲಾಗುವ ನ್ಯೂಮೋಕಾಕಲ್ ಲಸಿಕೆಗೆ ಕಿಮ್ಸ್‌ನಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
Related Articles
Advertisement
ರಾಜ್ಯದಲ್ಲಿ ಶೇ.83 ಜನರು ಮೊದಲನೇ ಡೋಸ್ ಪಡೆದರೆ, ಶೇ.37.38 ಜನರು ಎರಡೂ ಡೋಸ್ ಪಡೆದಿದ್ದಾರೆ. ಕೋವಿಡ್ ಇಳಿಮುಖ ಆಗಿರುವುದರಿಂದ 2ನೇ ಡೋಸ್ ಪಡೆಯಲು ಜನ ಮುಂದೆ ಬರುತ್ತಿಲ್ಲ ಎಂದೆನಿಸುತ್ತಿದೆ. ಎರಡು ಡೋಸ್ ಪಡೆಯುವುದು ಕಡ್ಡಾಯವಾಗಿದೆ. ಕಳೆದ ನಾಲ್ಕೈದು ತಿಂಗಳಿಂದ ರಾಜ್ಯದಲ್ಲಿ ದಿನಕ್ಕೆ 200-400 ಕೋವಿಡ್ ಕೇಸ್‌ಗಳು ಬರುತ್ತಿದ್ದು, ಕೋವಿಡ್ ಸಂಪೂರ್ಣವಾಗಿ ಹೋಗಿಲ್ಲ ಎಂದರು.
ಲಸಿಕೆ ನೀಡಲು ಶ್ರಮಿಸಿದ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ, ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಸನ್ಮಾನಿಸಲಾಯಿತು. ವಿಧಾನ ಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ವಿವಿಧ ನಿಗಮ ಮಂಡಳಿ ಅಧ್ಯಕ್ಷರಾದ ಈರಣ್ಣ ಜಡಿ, ಸವಿತಾ ಅಮರಶೆಟ್ಟಿ, ನಾಗೇಶ ಕಲಬುರ್ಗಿ, ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ನವೀನರಾಜ್ ಸಿಂಗ್, ಆರೋಗ್ಯ ಇಲಾಖೆ ಆಯುಕ್ತ ಡಾ| ರಂದೀಪ್, ರಾಷ್ಟ್ರೀಯ ಆರೋಗ್ಯ ಮಿಷನ್ ವ್ಯವಸ್ಥಾಪಕ ನಿರ್ದೇಶಕಿ ಡಾ| ಅರುಂಧತಿ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಮಹಾನಗರ ಪೊಲೀಸ್ ಆಯುಕ್ತ ಲಾಭೂ ರಾಮ್, ಜಿಪಂ ಸಿಇಒ ಡಾ| ಬಿ.ಸುಶೀಲಾ, ಆರೋಗ್ಯ ಮತ್ತು ಕುಟುಂಬ ಇಲಾಖೆ ಜಂಟಿ ನಿರ್ದೇಶಕ ಡಾ| ಪ್ರಭು ಬಿರಾದಾರ, ಜಿಲ್ಲಾ ವೈದ್ಯಾಧಿಕಾರಿ ಡಾ| ಯಶವಂತ ಮದೀನಕರ, ಕಿಮ್ಸ್ ಮುಖ್ಯ ಆಡಳಿತಾಧಿಕಾರಿ ರಾಜಶ್ರೀ ಜೈನಾಪುರ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ| ಎಸ್. ಎಂ.ಹೊನಕೇರಿ ಇನ್ನಿತರರಿದ್ದರು. ಕಿಮ್ಸ್ ನಿರ್ದೇಶಕ ಡಾ| ರಾಮಲಿಂಗಪ್ಪ ಅಂಟರತಾನಿ ಸ್ವಾಗತಿಸಿದರು. ಡಾ| ರಾಜಶೇಖರ ದ್ಯಾಬೇರಿ ನಿರೂಪಿಸಿದರು.
ಕಿಮ್ಸ್ ಅಭಿವೃದ್ದಿ ಗೆ ಮಾಸ್ಟರ್ ಪ್ಲ್ಯಾನ್ನ್; ನವೆಂಬರ್‌ನಲ್ಲಿ ಸಭೆ
ಕಿಮ್ಸ್‌ಗೆ ವಿಶೇಷ ಪ್ಯಾಕೇಜ್, ವಿವಿಧ ಸೌಲಭ್ಯಗಳ ನಿಟ್ಟಿನಲ್ಲಿ ನವೆಂಬರ್‌ನಲ್ಲಿ ಬೆಂಗಳೂರಿನಲ್ಲಿ ಸಭೆ ಕರೆದು ಚರ್ಚಿಸಲಾಗುವುದು. ಕಿಮ್ಸ್‌ಗೆ ಮಾಸ್ಟರ್ ಪ್ಲಾನ್ ರೂಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಿಮ್ಸ್‌ನಲ್ಲಿ ಇದ್ದ ಸೌಲಭ್ಯಗಳ ಬಳಕೆ ಹಾಗೂ ಸೌಲಭ್ಯಗಳ ಹೆಚ್ಚಳ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಸಚಿವ ಡಾ| ಸುಧಾಕರ, ಸಂಬಂಧಿಸಿದ ಇಲಾಖೆಗಳ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳ ಸಭೆಯನ್ನು ನವೆಂಬರ್‌ನಲ್ಲಿ ಕೈಗೊಂಡು ಏನೆಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು, ಇದ್ದ ವ್ಯವಸ್ಥೆಯಲ್ಲಿ ಹೇಗೆ ಸುಧಾರಣೆ ಕೈಗೊಳ್ಳಬೇಕು ಎಂಬುದನ್ನು ಚರ್ಚಿಸಲಾಗುವುದು ಎಂದರು. ಸಾಂಕ್ರಾಮಿಕ ರೋಗಗಳು ಭಾರತಕ್ಕೆ ಹೊಸತಲ್ಲ. ಕೋವಿಡ್ ಸ್ಫೋಟ ಸಂದರ್ಭದಲ್ಲಿ ನಿಯಂತ್ರಣಕ್ಕೆ ಲಸಿಕೆ ಸಂಶೋಧಿಸುವ ಕಾರ್ಯ ಸವಾಲು ರೂಪದ್ದಾಗಿತ್ತು. ನಮ್ಮ ವಿಜ್ಞಾನಿಗಳು ಅದನ್ನು ಸಾಧಿಸಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಸಾಂಕ್ರಾಮಿಕ ಸ್ಫೋಟ ತಡೆ ನಿಟ್ಟಿನಲ್ಲಿ ಅಗತ್ಯ ಮುಂಜಾಗ್ರತೆ ಬೇಕೆಂಬ ಪಾಠವನ್ನು ಕೋವಿಡ್ ಕಲಿಸಿದೆ. ಜತೆಗೆ ಆರೋಗ್ಯ ವ್ಯವಸ್ಥೆಯಲ್ಲಿ ಅನೇಕ ಸುಧಾರಣೆಯಾಗುವಂತೆ ಮಾಡಿದೆ.
ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ