Advertisement

ಧರ್ಮದ ವಿಷಯದಲ್ಲಿ ಸರ್ಕಾರ ಗೊಂದಲ ಸೃಷ್ಠಿಸಲ್ಲ

06:00 AM Oct 31, 2018 | Team Udayavani |

ಬೆಂಗಳೂರು: ಮಕ್ಕಳ ಶಾಲಾ ದಾಖಲಾತಿಯ ಧರ್ಮದ ಕಾಲಂನಲ್ಲಿ ಬೌದ್ಧ ಧರ್ಮ ಸೇರಿಸುವ ಬಗ್ಗೆ ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶದ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಸಮಾಜಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ. ಅಕ್ಟೋಬರ್‌ 30 ರಂದು “ಉದಯವಾಣಿ’ಯಲ್ಲಿ ಪ್ರಕಟಗೊಂಡ ವರದಿ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಶಾಲಾ ದಾಖಲಾತಿಯಲ್ಲಿ ಪರಿಶಿಷ್ಟ ಜಾತಿಯ ಮಕ್ಕಳು ಧರ್ಮದ ಕಾಲಂನಲ್ಲಿ ಬೌದ್ಧ ಧರ್ಮ ಎಂದು ಬರೆಸಲು ಪಾಲಕರು ಇಷ್ಟ ಪಟ್ಟರೆ, ಶಾಲಾ ಪ್ರಾಂಶುಪಾಲರು ತಕರಾರು ಮಾಡಬಾರದು ಎಂದು ಶಿಕ್ಷಣ ಆದೇಶ ಮಾಡಿದೆ. ಈ ರೀತಿಯ ಆದೇಶದ ಕುರಿತು ಪರಿಶೀಲಿಸಿ ಮುಂದಿನ 
ತೀರ್ಮಾನ ಮಾಡುತ್ತೇನೆ ಎಂದು ತಿಳಿಸಿದರು.

Advertisement

ಮಹಾರಾಷ್ಟ್ರದಲ್ಲಿ ಬೌದಟಛಿ ಧರ್ಮಕ್ಕೆ ಮತಾಂತರ ಹೊಂದಿದ ಪರಿಶಿಷ್ಟ ಜಾತಿಯವರಿಗೆ ನ್ಯೂಯೋ ಬುದ್ಧಿಸ್ಟ್‌ ಎಂದು ಪರಿಗಣಿಸಿ ಪರಿಶಿಷ್ಟ ಜಾತಿಯ ಮೀಸಲಾತಿ ನೀಡಬೇಕೆಂದು ಒತ್ತಾಯ ಕೇಳಿ ಬಂದಿತ್ತು ಆದರೆ, ಆ ಬೇಡಿಕೆಗೆ ಅಲ್ಲಿ ಸಾಕಷ್ಟು ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಆ ಪ್ರಸ್ತಾಪವನ್ನು ಕೈ ಬಿಡಲಾಗಿದೆ. ರಾಜ್ಯ ಸರ್ಕಾರ ಧರ್ಮದ ವಿಷಯದಲ್ಲಿ ಅನಗತ್ಯ ಗೊಂದಲ ಸೃಷ್ಠಿಸುವ ಪ್ರಯತ್ನ
ಮಾಡುವುದಿಲ್ಲ. ಕಲಬುರಗಿ ವಿಭಾಗದ ಶಿಕ್ಷಣ ಇಲಾಖೆಯಿಂದ ಈ ರೀತಿಯ ಆದೇಶ ಹೊರಡಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಗಂಭೀರವಾಗಿ ಪರಿಶೀಲನೆ ಮಾಡುತ್ತೇನೆ. ಸಮಾಜ ಕಲ್ಯಾಣ ಇಲಾಖೆಯ ಮುಂದಿನ ಕ್ರಮ ಏನು ಎಂದು ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ ಎಂದರು. 

ಪರಿಶಿಷ್ಟ ಜಾತಿ ಕಾಲಂ ಸೃಷ್ಟಿಸಲು ಸರ್ಕಾರಕ್ಕೆ ಪತ್ರ: ಈ ಮಧ್ಯೆ, ಬೌದಟಛಿ ಧರ್ಮ ಸೇರುವ ಪರಿಶಿಷ್ಟ ಜಾತಿಯ  ಮುದಾಯದವರಿಗೆ ಸರ್ಕಾರದ ಯೋಜನೆಯ ಸವಲತ್ತುಗಳನ್ನು ಪಡೆಯಲು ಅನುಕೂಲವಾಗುವಂತೆ ಹಿಂದೂ ಧರ್ಮದ ಕಾಲಂನಲ್ಲಿ ಬೌದಟಛಿ ಧರ್ಮ ಎಂದು ನಮೂದಿಸಲು ಇ ಆಡಳಿತದ ತಂತ್ರಾಂಶದಲ್ಲಿ ಸೇರಿಸುವಂತೆ ಕಲಬುರಗಿಯ ಬೌದಟಛಿ ಧರ್ಮದ ಅನುಯಾಯಿ ಷಣುಖ್‌ ವಾಗೊರೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಹಾಗೂ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆಗೆ ಪತ್ರ ಬರೆದಿದ್ದಾರೆ. 

ಎಸ್ಸಿಪಿ ಯೋಜನೆಯಡಿ ವಿವಿಧ ಸರ್ಕಾರಿ ಸೌಲಭ್ಯಗಳು, ನೇಮಕಾತಿ, ಮೆಡಿಕಲ್‌, ಎಂಜಿನಿಯರಿಂಗ್‌, ಸಿಇಟಿ ಪ್ರವೇಶ ಪರೀಕ್ಷೆಗಳ
ನೇಮಕಾತಿಗಳು ಮೂಲ ಕಾಯ್ದೆಯಂತೆ ಹಿಂದೂ ಧರ್ಮದ ಬಳಕೆಯಾಗುತ್ತಿದೆ. 1990 ರ ನೂತನ ಕಾಯ್ದೆಯ ಪ್ರಕಾರ ಹಿಂದೂ/ಬೌದ್ಧ (ಕರ್ನಾಟಕ) ಎಂದು ಇ ಆಡಳಿತ ತಂತ್ರಾಂಶದಲ್ಲಿ ಸೇರಿಸಬೇಕೆಂದು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಆರ್‌ಎಸ್‌ಎಸ್‌ಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ ಆರ್‌ಎಸ್‌ಎಸ್‌ಗೆ ಭಾರತದ ಕಾನೂನು ಹಾಗೂ ಸಂವಿಧಾನದ 
ಮೇಲೆ ನಂಬಿಕೆ ಇಲ್ಲ. ಹಾಗಾಗಿಯೇ ರಾಮಮಂದಿರ ನಿರ್ಮಾಣ ವಿಚಾರದಲ್ಲಿ ಸುಗ್ರೀವಾಜ್ಞೆ ಹೊರಡಿ ಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ. ನ್ಯಾಯಾಲಯದಲ್ಲಿ ರಾಮ ಮಂದಿರ ನಿರ್ಮಾಣ ಪ್ರಕರಣ ವಿಚಾರಣೆ ನಡೆಯುತ್ತಿರುವಾಗ ಸುಗ್ರೀವಾಜ್ಞೆ ಹೊರಡಿಸು ವುದು ಅನಗತ್ಯ. ಬಿಜೆಪಿಗೆ
ಚುನಾವಣೆ ಸಮೀಪಿಸುತ್ತಿದ್ದಂತೆ ಮಂದಿರ- ದೇವಸ್ಥಾನಗಳು ನೆನಪಾಗುತ್ತವೆ. ಚುನಾವಣೆ ಗಿಮಿಕ್‌ ಮಾಡಲು ಜಿಎಸ್‌ಟಿ
ಪ್ರಮಾಣ ಇಳಿಕೆ ಮಾಡಲಾಗಿದೆ ಎಂದು ಆರೋಪಿಸಿದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳ ಶೈಕ್ಷಣಿಕ ಸಾಲ ಮನ್ನಾ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳಿಂದ ಯಾವುದೇ ಮಾಹಿತಿ ಬಂದಿಲ್ಲ ಎಂದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next