Advertisement
ಮಂಗಳವಾರ ಪ್ರಶ್ನೋತ್ತರ ಕಲಾಪಕ್ಕೂ ಮುನ್ನ ಕಾನೂನು ಸುವ್ಯವಸ್ಥೆ ಕುರಿತು ನಿಲುವಳಿ ಸೂಚನೆ ಮಂಡನೆಗೆ ಅವಕಾಶ ನೀಡುವಂತೆ ವಿಪಕ್ಷ ಸದಸ್ಯರು ಪಟ್ಟು ಹಿಡಿದರು. ಕಳೆದ ಅಧಿವೇಶನದ ಸಂದರ್ಭದಲ್ಲೇ ಕಾನೂನು-ಸುವ್ಯವಸ್ಥೆ ಕುರಿತು ಚರ್ಚೆಗೆ ಕೇಳಿದ್ದೆವು. ಈಗ ನಿಲುವಳಿ ಸೂಚನೆಗಾಗಿ ಬೆಳಗ್ಗೆಯೇ ನೋಟಿಸ್ ಕೊಟ್ಟಿದ್ದೇವೆ. ಪ್ರಶ್ನೋತ್ತರ ಬದಿಗೊತ್ತಿ ಇದಕ್ಕೆ ಅವಕಾಶ ಕೊಡಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹಾಗೂ ವಿ. ಸುನೀಲ್ ಕುಮಾರ್ ಆಗ್ರಹಿಸಿದರು.
ಸುನೀಲ್ ಕುಮಾರ್ ಮಾತನಾಡಿ, ಒಂದಕ್ಕಿಂತ ಹೆಚ್ಚು ನಿಲುವಳಿ ಬಂದಾಗ ಅಧಿಕೃತ ವಿಪಕ್ಷಕ್ಕೆ ಕೊಡಬೇಕೆಂದು ನಿಯಮದಲ್ಲೇ ಇದೆ ನೋಡಿ ಎಂದರು. ಕಾನೂನು ಸುವ್ಯವಸ್ಥೆ ವಿಚಾರವನ್ನು ನಿಲುವಳಿ ಸೂಚನೆ ಅಡಿಯಲ್ಲಿ ಚರ್ಚಿಸಲು ಬರುವುದೇ ಇಲ್ಲ ಎಂದು ಸಚಿವ ಪರಮೇಶ್ವರ್ ಆಕ್ಷೇಪಿಸಿದರು. ಪ್ರಿಯಾಂಕ್ ಖರ್ಗೆ ವಿರುದ್ಧ ಮುಗಿಬಿದ್ದ ಬಿಜೆಪಿ
ಚರ್ಚೆ ನಡುವೆ ಮಾತಿಗಿಳಿದ ಸಚಿವ ಪ್ರಿಯಾಂಕ್ ಖರ್ಗೆ, ಇವರೇ ಕಾನೂನು ಭಂಗ ಮಾಡಿ, ಕಾನೂನು ಸುವ್ಯವಸ್ಥೆ ಸರಿಯಿಲ್ಲ ಎನ್ನುತ್ತಿದ್ದಾರೆ. ಕಲಾಪದ ಕಾರ್ಯಸೂಚಿ ಪಟ್ಟಿಯಲ್ಲಿರುವಂತೆ ಹೋಗೋಣ. ಅನಂತರ ಪರಶುರಾಮ ಪ್ರತಿಮೆಯಿಂದ ಹಿಡಿದು ನ್ಯಾ| ವೀರಪ್ಪ ಸಮಿತಿವರೆಗೂ ಚರ್ಚಿಸೋಣ. ಮಂಡ್ಯದ ವಿಚಾರವನ್ನೂ ಚರ್ಚಿಸಿ, ಬಿಟ್‌ಕಾಯಿನ್ ಎಫ್ಐಆರ್ ಆಗಿದೆ ಅದನ್ನೂ ಮಾಡೋಣ ಎಂದರು. ಇದರಿಂದ ಕೆರಳಿದ ಬಿಜೆಪಿ ಸದಸ್ಯರು, ಪ್ರಿಯಾಂಕ್ ವಿರುದ್ಧ ಮುಗಿಬಿದ್ದರು. ಯಾವ ವಿಚಾರ ಚರ್ಚಿಸಬೇಕೆಂಬುದು ನಿಮ್ಮ ಹತ್ತಿರ ಹೇಳಿಸಿಕೊಳ್ಳಬೇಕಿಲ್ಲ ಎಂದು ಸುನೀಲ್ ಕುಮಾರ್ ತಿರುಗೇಟು ನೀಡಿದರು.