Advertisement
ಆಡಿಟ್ ಮರುಪರಿಶೀಲನೆ ಮತ್ತು ವಿತ್ತ ಬಂಡವಾಳ ರೂಪುರೇಷೆಯನ್ನು ಅನ್ವಯಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆರ್‌ಬಿಐ ಪ್ರಕಟಣೆ ತಿಳಿಸಿದೆ. ಎರಡನೇ ವರ್ಷವೂ ಮಧ್ಯಂತರ ಹೆಚ್ಚುವರಿ ಮೊತ್ತವನ್ನು ಸರಕಾರಕ್ಕೆ ಆರ್‌ಬಿಐ ವರ್ಗಾವಣೆ ಮಾಡುತ್ತಿದೆ. ಆರ್‌ಬಿಐ ಈ ನಿರ್ಧಾರ ಪ್ರಕಟಿಸುವುದಕ್ಕೂ ಮುನ್ನ ಕೇಂದ್ರೀಯ ಮಂಡಳಿ ಸಭೆಯನ್ನು ವಿತ್ತ ಸಚಿವ ಅರುಣ್ ಜೇಟ್ಲಿ ನಡೆಸಿದ್ದರು. ಈ ವೇಳೆ ಸರಕಾರದ ವಿವಿಧ ಸುಧಾರಣೆಗಳು ಮತ್ತು ನೀತಿ ನಿರೂಪಣೆಗಳ ವಿವರಗಳನ್ನು ಚರ್ಚಿಸಿದ್ದರು. ಆರ್‌ಬಿಐನಿಂದ ಹೆಚ್ಚುವರಿ ಮೀಸಲು ನಿಧಿಯನ್ನು ಪಡೆಯುವ ಬಗ್ಗೆ ಈ ಹಿಂದೆ ವ್ಯಾಪಕ ಚರ್ಚೆ ನಡೆದಿತ್ತು.
Advertisement
ಆರ್‌ಬಿಐನಿಂದ ಸರಕಾರಕ್ಕೆ 28,000 ಕೋಟಿ ರೂ.ಲಾಭಾಂಶ
12:30 AM Feb 19, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.