Advertisement

ಸರ್ಕಾರದಿಂದ ಕಾಟಾಚಾರದ ಗೋಹತ್ಯೆ ಕಾನೂನು

11:38 AM Apr 15, 2022 | Team Udayavani |

ಸೇಡಂ: ರಾಜ್ಯದಲ್ಲಿ ಕಾಟಾಚಾರದ ಗೋಹತ್ಯೆ ನಿಷೇಧ ಕಾಯ್ದೆಯನ್ನು ಸರ್ಕಾರ ಜಾರಿ ಮಾಡಿದೆ ಎಂದು ಕೊಂಚೂರು ಮಹರ್ಷಿ ಸವಿತಾ ಪೀಠದ ಶ್ರೀ ಶ್ರೀಧರಾನಂದ ಸರಸ್ವತಿ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.

Advertisement

ತಾಲೂಕಿನ ಮಳಖೇಡ ಗ್ರಾಮದಲ್ಲಿ ವಿಶ್ವ ಹಿಂದೂ ಪರಿಷತ್‌ ವತಿಯಿಂದ ಶ್ರೀ ಚನ್ನ ವೀರೇಶ್ವರರ ರಥದ ಮೈದಾನದಲ್ಲಿ ನಡೆದ ರಾಮೋತ್ಸವದ ಸಾರ್ವಜನಿಕ ಸಮಾವೇಶದಲ್ಲಿ ಅವರು ಮಾತನಾಡಿದರು.

ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾಗಿದೆ. ಆದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿಲ್ಲ. ಗೋಹತ್ಯೆ ನಿಷೇದ ಕಾಯಿದೆ ಜಾರಿಗೆ ತರುವ ಬದಲು ಕಸಾಯಿಖಾನೆಗಳನ್ನು ಸರ್ಕಾರ ಮುಚ್ಚಿಸಬೇಕು. ಅಂದಾಗ ಮಾತ್ರ ಗೋ ಸಂತತಿ ಉಳಿಯಲು ಸಾಧ್ಯ ಎಂದು ಹೇಳಿದರು.

ಭಾರತದಲ್ಲಿ ರಾಮರಾಜ್ಯ ಸ್ಥಾಪನೆಯಾದಾಗ ಮಾತ್ರ ಇಲ್ಲಿನ ನಿವಾಸಿಗಳಿಗೆ ನಿಜವಾದ ಸ್ವಾತಂತ್ರ್ಯ ದೊರಕಲು ಸಾಧ್ಯ ಎಂದರು.

ಉತ್ತರಾದಿ ಮಠದ ಪಂ.ವೆಂಕಣ್ಣಾಚಾರ್ಯರು, ವಿಹಿಂಪ ಜಿಲ್ಲಾ ಕಾರ್ಯದರ್ಶಿ ಅಂಬರೀಷ ಸುಲೇಗಾಂವ ಮಾತನಾಡಿದರು. ಕೊಟ್ಟೂರೇಶ್ವರ ಶಿವಾಚಾರ್ಯರು, ವೀರಗಂಗಾಧರ ಶಿವಾಚಾರ್ಯರು ಮರೆಪ್ಪ ತಾತಾ, ವಿಹಿಂಪ ತಾಲೂಕಾಧ್ಯಕ್ಷ ರಾಘವೇಂದ್ರ ಮುಸ್ತಾಜರ, ರಾಜಶೇಖರ ಪುರಾಣಿಕ, ಬಸವರಾಜ ರೇವಗೊಂಡ, ಬಸವರಾಜ ಮಾಲಿಪಾಟೀಲ, ಶಿವಯ್ಯ ಹಿರೇಮಠ, ರುದ್ರು ಪಿಲ್ಲಿ, ಶಿವಕುಮಾರ ಬೋಳಶೆಟ್ಟಿ, ಗುರಣಪ್ಪ ತಳಕಿನ, ಶ್ರೀನಿವಾಸ ಸಂಗಾವಿ, ಗಣಪತಿ ತಳಕಿನ, ಚಂದ್ರಶೇಖರ ಸಂಪಾ, ಭೀಮರಾವ ಮಾಲಿಪಾಟೀಲ, ಅಣ್ಣಾರಾವ್‌ ನೂರಂದಗೌಡ, ಅರವಿಂದ ಮರಗೋಳ, ಲಕ್ಷ್ಮಿಕಾಂತ ತಳಕಿನ, ನಾಗರಾಜ ಬೆನಕನಹಳ್ಳಿ, ರಾಜಶೇಖರ ದಂಡೋತಿ ಮತ್ತಿತರರು ಪಾಲ್ಗೊಂಡಿದ್ದರು.

Advertisement

ಇದಕ್ಕೂ ಮುನ್ನ ಶ್ರೀರಾಮನ ಭವ್ಯಮೂರ್ತಿಯ ಮೆರವಣಿಗೆಯೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಬೃಹತ್‌ ಶೋಭಾಯಾತ್ರೆ ನಡೆಯಿತು. ಕಾಶೀನಾಥ ಭಜಂತ್ರಿ ಸ್ವಾಗತಿಸಿದರು. ಅವಿನಾಶ ಮಡಿವಾಳ ಪ್ರಾಸ್ತಾವಿಕ ಮಾತನಾಡಿದರು. ವಿನಲ್‌ ಪತಂಗೆ ನಿರೂಪಿಸಿದರು. ವಿಹಿಂಪ ಮಳಖೇಡ ಅಧ್ಯಕ್ಷ ಸಂದೀಪ ಸಂಗಾವಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next