Advertisement

ಕುಪೇಂದ್ರ ರೆಡ್ಡಿ ಕೇಳಿ ಸರ್ಕಾರ ರಚಿಸಿಲ್ಲ, ಲಘು ಹೇಳಿಕೆ ಬೇಡ: ಡಿಸಿಎಂ

09:55 AM May 14, 2019 | Team Udayavani |

ಬೆಂಗಳೂರು: ರಾಜ್ಯದ ಮೈತ್ರಿ ಸರ್ಕಾರದ ಕಾಂಗ್ರೆಸ್, ಜೆಡಿಎಸ್ ಮುಖಂಡರು ನೀಡುತ್ತಿರುವ ಹೇಳಿಕೆ ಸೋಮವಾರ ಮತ್ತಷ್ಟು ತಾರಕಕ್ಕೇರಿದೆ. ರಾಜ್ಯದಲ್ಲಿ ಜೆಡಿಎಸ್ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ಅವರನ್ನು ಕೇಳಿ ಸರ್ಕಾರ ರಚಿಸಿಲ್ಲ, ಇನ್ನು ಮುಂದೆ ಇಂತಹ ಹೇಳಿಕೆ ಬರಬಾರದು ಎಂದು ಡಿಸಿಎಂ ಪರಮೇಶ್ವರ್ ತಿಳಿಸಿದ್ದಾರೆ.

Advertisement

ನಾವೇನು ಯಾರ ಮನೆ ಬಾಗಿಲಿಗೆ ಹೋಗಿಲ್ಲ. ಕಾಂಗ್ರೆಸ್ ಪಕ್ಷದವರಿಗೆ ಕಷ್ಟ ಆದರೆ ಅವರ ದಾರಿ ನೋಡಿಕೊಳ್ಳಲಿ ಎಂದು ಕುಪೇಂದ್ರ ರೆಡ್ಡಿ ಅವರು ನೀಡಿದ ಹೇಳಿಕೆಗೆ ಸೋಮವಾರ ಪ್ರತಿಕ್ರಿಯೆ ನೀಡಿರುವ ಪರಮೇಶ್ವರ್, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಜೆಡಿಎಸ್ ವರಿಷ್ಠ ದೇವೇಗೌಡರು ಮಾತುಕತೆ ನಡೆಸಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ತಂದಿದ್ದಾರೆ.

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಮತ್ತು ಸಿದ್ದರಾಮಯ್ಯನವರು ಒಂದೇ ಜಿಲ್ಲೆಯವರು. ಅವರಿಬ್ಬರ ಮಧ್ಯೆ ವೈಯಕ್ತಿಕವಾಗಿ ಸ್ವಲ್ಪ ಭಿನ್ನಾಭಿಪ್ರಾಯಗಳು ಇರಬಹುದು. ಆದರೆ ರಾಜಕೀಯವಾಗಿ ನಾವು ಒಟ್ಟಿಗೆ ಇರಬೇಕಾಗುತ್ತದೆ. ಸಮನ್ವಯ ಸಮಿತಿ ಅಧ್ಯಕ್ಷರ ವಿರುದ್ಧ ಲಘುವಾಗಿ ಮಾತನಾಡಬಾರದು ಎಂದು ಪರಮೇಶ್ವರ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next