Advertisement
ಬಸರಕೋಡ ಗ್ರಾಮದ ಪ್ರಗತಿಪರ ರೈತ ಪವಾಡೆಪ್ಪ ವಡ್ಡರ ಅವರ ಸಾವಯವ ತೋಟದಲ್ಲಿ ರೈತರೊಂದಿಗೊಂದು ದಿನದ ಹಿನ್ನೆಲೆ ನಡೆದ ಕ್ಷೇತ್ರ ಭೇಟಿ ನಂತರ ಪ್ರಗತಿಪರ ರೈತರನ್ನು ಸನ್ಮಾನಿಸಿ ಅವರು ಮಾತನಾಡಿದರು. ನ. 14ರಂದು ಚಾಲನೆಗೊಂಡಿರುವ ರೈತರೊಂದಿಗೊಂದು ದಿನ ಕಾರ್ಯಕ್ರಮ ಯಶಸ್ವಿಯತ್ತ ಸಾಗುತ್ತಿದೆ. ಸರ್ಕಾರವನ್ನೇ ರೈತರ ಹೊಲಕ್ಕೆ ತರುವ ಯೋಜನೆ ಇದಾಗಿದೆ.
Related Articles
Advertisement
ಕ್ಷೇತ್ರ ಪರಿಶೀಲನೆ: ಇದಕ್ಕೂ ಮುನ್ನ ಪಾವಡೆಪ್ಪ ಅವರ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಹೊಲದಲ್ಲಿ ಗೋಮಾತೆಯನ್ನು ಸಚಿವದ್ವಯರು, ಶಾಸಕ ನಡಹಳ್ಳಿ ಜಂಟಿಯಾಗಿ ಪೂಜಿಸಿದರು. ನಾಟಿ ಕೋಳಿ ಸಾಕಾಣಿಕೆ, ದೇಶಿ ಆಡುಗಳ ಘಟಕಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಶೇಂಗಾ ಬೆಳೆಯಲ್ಲಿ ತುಂತುರು ನೀರಾವರಿ ಘಟಕಕ್ಕೆ ಚಾಲನೆ ನೀಡಿದರು.
ದನಕರುಗಳಿಗೆ ಖನಿಜ ಮಿಶ್ರಣ ತಿನ್ನಿಸಿದರು. ಕೊಟ್ಟಿಗೆ ಗೊಬ್ಬರ ಘಟಕಕ್ಕೆ ಡಿ ಕಂಪೋಜರ್ ಸಿಂಪಡಿಸಿದರು. ಜಲಸಸ್ಯೆ ಅಜೋಲ್ಲಾ ಘಟಕ ವೀಕ್ಷಿಸಿ ಮೆಚ್ಚುಗೆ ಸೂಚಿಸಿದರು. ಎರೆಹುಳು ಕೃಷಿ ಘಟಕಕ್ಕೆ ನೀರುಣಿಸಿದರು. ಜೀವಾಮೃತ ಬೆಳೆಸಿ ಬೆಳೆದ ಬಾಳೆಯ ಗೊನೆ ಕತ್ತರಿಸಿ ಒಂದೆರಡು ಬಾಳೆಹಣ್ಣನ್ನು ತಿಂದು ಅದರ ರುಚಿಗೆ ಮಾರುಹೋದರು. ಯಾಂತ್ರಿಕೃತ ಕಾಯಿಪಲ್ಯೆ ಸಸಿಗಳನ್ನು ನೆಟ್ಟರು. ಸ್ವಂತ ಮಾರುಕಟ್ಟೆ ಕಂಡುಕೊಳ್ಳಲು ರೈತರೇ ಆವಿಷ್ಕರಿಸಿದ ದ್ವಿಚಕ್ರ ವಾಹನ ಟ್ರಾಲಿಯನ್ನು ವೀಕ್ಷಿಸಿದರು. ಈ ಸಂದರ್ಭ 200 ರೂ. ನೀಡಿ ಪಪ್ಪಾಯಿ ಖರೀದಿಸಿ ರೈತನನ್ನು ಸಚಿವರು ಪ್ರೋತ್ಸಾಹಿಸಿದರು.
ಸಿದ್ದು ಮೇಟಿ ಹೊಲಕ್ಕೆ ಭೇಟಿ: ಪಾವಡೆಪ್ಪ ಅವರ ಹೊಲಕ್ಕೆ ಭೇಟಿ ನೀಡಿದ ನಂತರ ರೂಢಗಿ ರಸ್ತೆಯಲ್ಲಿರುವ ಪ್ರಗತಿಪರ ಯುವ ರೈತ ಸಿದ್ದು ಮೇಟಿ ಅವರ ಹೊಲಕ್ಕೂ ಸಚಿವರು ಭೇಟಿ ನೀಡಿದರು. ಅವರ ಹೊಲದಲ್ಲಿ ಯಾಂತ್ರೀಕೃತ ಯಂತ್ರದಿಂದ ಗೋಧಿ ಕೊಯ್ಲು ಮಾಡುವುದನ್ನು, ಕಬ್ಬು ಕಟಾವಿನ ನಂತರ ರವದಿಯನ್ನು ಯಾಂತ್ರೀಕೃತ ಯಂತ್ರದಿಂದ ಸೂಡು ಕಟ್ಟುವುದನ್ನು ವೀಕ್ಷಿಸಿ ಆಧುನಿಕ ತಂತ್ರಜ್ಞಾನದ ಬಳಕೆಯನ್ನು ಅರಿತುಕೊಂಡರು.
ಕಬ್ಬು ಕಟಾವಿನ ನಂತರ ರವದಿ ಸುಡುವುದರಿಂದ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣ ವಾತಾವರಣದಲ್ಲಿ ಹೆಚ್ಚಾಗುತ್ತದೆ ಎನ್ನುವ ಮಾಹಿತಿ ಪಡೆದುಕೊಂಡರು.
ಸೆಲ್ಫಿಗೆ ಮುಗಿಬಿದ್ದ ಅಭಿಮಾನಿಗಳಕೃಷಿ ಸಚಿವ ಬಿ.ಸಿ. ಪಾಟೀಲ ನಿಜ ಜೀವನದಲ್ಲಿ ಪೊಲೀಸ್ ಅ ಧಿಕಾರಿಯಾಗಿ, ನಂತರ ಚಲನಚಿತ್ರದ ನಾಯಕ ನಟರಾಗಿ ಜನಾಕರ್ಷಣೆ ಹೊಂದಿದ್ದರು. ಹೀಗಾಗಿ ಅವರನ್ನು ಅವರ ಅಭಿಮಾನಿಗಳು ಕೌರವ ಪಾಟೀಲ ಎಂದೇ ಕರೆಯುತ್ತಾರೆ. ಮಂಗಳವಾರ ಈ ಭಾಗದಲ್ಲಿ ರೈತರೊಂದಿಗೊಂದು ದಿನ, ಕ್ಷೇತ್ರ ಭೇಟಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರೊಟ್ಟಿಗೆ ಸೆಲ್ಫಿ ತೆಗೆದುಕೊಳ್ಳಲು ಅನೇಕರು ಮುಗಿಬಿದ್ದಿದ್ದರು. ಮಾಧ್ಯಮದ ಕೆಲವರೂ ಇದಕ್ಕೆ ಹೊರತಾಗಿರಲಿಲ್ಲ.