Advertisement

ಭೇಟಿ ನೀಡಿದ್ದ ವಿದೇಶಿಗರ ಪತ್ತೆಗೆ ಸರ್ಕಾರದ ಮೊರೆ

03:19 PM Apr 21, 2020 | mahesh |

ಮೈಸೂರು: ಜಿಲ್ಲೆಯ ಹಾಟ್‌ಸ್ಪಾಟ್‌ ಎಂದೇ ಕುಖ್ಯಾತಿಯಾಗಿರುವ ನಂಜನಗೂಡು ಜ್ಯುಬಿಲಿಯಂಟ್‌ ಕಾರ್ಖಾನೆಯ ಕೋವಿಡ್-19 ಸೋಂಕಿನ ಮೂಲ ಆಸ್ಟ್ರೀಯ ದೇಶಕ್ಕೆ ತಳುಕು ಹಾಕಿಕೊಂಡಿದೆ. ಇದಕ್ಕೆ ಪುಷ್ಟಿ ನೀಡುವಂತೆ ಫೆಬ್ರವರಿಯಲ್ಲಿ ಆಸ್ಟ್ರೀಯ ದೇಶದ ಮಹಿಳೆ ದೆಹಲಿಯಲ್ಲಿರುವ ಜ್ಯುಬಿಲಿಯಂಟ್‌ನ ಎಂಡಿ ಜೊತೆಗೂಡಿ ನಂಜನಗೂಡು ಕಾರ್ಖಾನೆಗೆ ಭೇಟಿ ನೀಡಿದ್ದರು. ವಾರಗಳ ಕಾಲ ಮೈಸೂರು ಸೇರಿ ಪಕ್ಕದ ಮಡಿಕೇರಿಯ ಪ್ರವಾಸ ಸ್ಥಳಗಳಿಗೆ ತೆರಳಿದ್ದ ಇವರಿಬ್ಬರೂ, ಕಾರ್ಖಾನೆಯ ಓರ್ವ ಸಿಬ್ಬಂದಿಯನ್ನು ಕರೆದೊಯ್ದಿದ್ದರು ಎನ್ನಲಾಗಿದೆ.

Advertisement

ಜ್ಯುಬಿಲಿಯಂಟ್‌ ಕಾರ್ಖಾನೆಯ ಇನ್ವೆಸ್ಟ್‌ ಮೆಂಟ್‌ನಲ್ಲಿ ಒಂದು ಭಾಗವನ್ನು ಆಸ್ಟ್ರೀಯ ದೇಶದ ಪ್ರಜೆಯೂ ಶೇರ್‌ ಹಾಕಿದ್ದು, ಆಗಾಗ ಈ ಕಾರ್ಖಾನೆಗೆ ಭೇಟಿ ನೀಡುವುದು ವಾಡಿಕೆ.
ಅದರಂತೆ ಮಾರ್ಚ್‌ನಲ್ಲಿ ನಡೆದ ಆಡಿಟ್‌ಗೂ ಮುನ್ನ ಕಾರ್ಖಾನೆಯ ಕೆಂದ್ರ ಕಚೇರಿಯಲ್ಲಿರುವ ಜತೆಗೆ ಆಸ್ಟ್ರೀಯದ ಮಹಿಳೆಯೂ ನಂಜನಗೂಡಿಗೆ ಬಂದಿದ್ದರು. ಇವರ
ಸಂಪರ್ಕದಿಂದ ಕಾರ್ಖಾನೆಗೆ ಸೋಂಕು ವ್ಯಾಪಿಸಿದೆ ಎಂಬ ಅನುಮಾನ ವ್ಯಕ್ತವಾಗಿದೆ.

ಜಿಲ್ಲೆಯ ಸೋಂಕಿತರ ಪಟ್ಟಿಯಲ್ಲಿ ಜ್ಯುಬಿಲಿಯಂಟ್‌ ಕಾರ್ಖಾನೆ ನೌಕರರು ಹಾಗೂ ಕಾರ್ಖಾನೆಗೆ ಸಂಬಂಧಪಟ್ಟವರದ್ದೇ ಹೆಚ್ಚಿದ್ದು, ಈವರೆಗೆ ಕಾರ್ಖಾನೆಗೆ ಸಂಬಂಧಿಸಿದಂತೆ 68
ಮಂದಿಗೆ ಸೋಂಕು ತಗುಲಿದೆ. ಕಾರ್ಖಾನೆ ನೌಕರರಿಗೆ ಸೋಂಕು ಹೇಗೆ ತಗುಲಿತು ಎಂಬ ಪ್ರಶ್ನೆಗೆ ಇಂದಿಗೂ ನಿಖರವಾದ ಉತ್ತರ ಸಿಗದಿದ್ದರೂ, ಹೊರದೇಶದಿಂದ ಕಾರ್ಖಾನೆಗೆ ಭೇಟಿ ನೀಡಿದ್ದವರಿಂದ ಸೋಂಕು ಹರಡಿದೆ ಎಂದು ಸರ್ಕಾರ ಹೇಳಿದೆ.

ಜ್ಯುಬಿಲಿಯಂಟ್‌ಗೆ ವೈರಸ್‌ ಹೇಗೆ ತಗುಲಿರಬಹುದು ಎಂಬ ತನಿಖೆಗೆ ಜಿಲ್ಲಾ ಪೊಲಿಸ್‌ ವರಿಷ್ಠಾಧಿಕಾರಿ ಮತ್ತು ಜಿಲ್ಲಾಡಳಿತದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಬರೆದಿರುವ ಪತ್ರ ಇಂಬು ನೀಡಿದೆ. ಪತ್ರದಲ್ಲಿ ಕೆಲವು ಮುಖ್ಯವಿಚಾರಗಳನ್ನು ಪ್ರಸ್ತಾಪಿಸಿ ಜರ್ಮನಿ, ಜಪಾನ್‌, ಯುಎಸ್‌ಎ ಹಾಗೂ ಆಸ್ಟ್ರೀಯದಿಂದ ಕೆಲವರು ಕಾರ್ಖಾನೆಗೆ ಬಂದು ಹೋಗಿದ್ದು, ಇವರಿಂದ ಸೋಂಕು ಹರಡಿರಬಹುದಾ ಎಂಬ ಅನುಮಾನವನ್ನು ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ.

ಜಪಾನ್‌, ಜರ್ಮನಿಯತ್ತಲೂ ಚಿತ್ತ:
ಜನವರಿಯಲ್ಲಿ ಜರ್ಮನಿಯವರು ಹಾಗೂ ಫೆಬ್ರವರಿ 18 ರಂದು ಜಪಾನ್‌ ಸೇರಿ ಯುಎಸ್‌ ಎನಿಂದ ಹಲವರು ಬಂದು ಹೋಗಿದ್ದಾರೆ. ಈ ಎಲ್ಲಾ ವಿಚಾರ ಮುಂದಿಟ್ಟುಕೊಂಡು, ಇವರ
ಸಂಪರ್ಕದಿಂದ ಸೋಂಕು ಹರಡಿತೆ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Advertisement

9 ವಿದೇಶಿಗರು ಪತ್ತೆ
ಕಾರ್ಖಾನೆಗೆ ಭೇಟಿ ನೀಡಿದ್ದ ವಿದೇಶಿಗರ ಪೈಕಿ 9 ಜನರನ್ನು ವಿದೇಶಾಂಗ ಸಚಿವಾಲಯದ ನೆರವಿನಿಂದ ತನಿಖಾ ತಂಡ ಪತ್ತೆಹಚ್ಚಲಾಗಿದೆ. ಆದರೆ ಅವರನ್ನು ಸಂ‌ರ್ಕಿಸಿ ಅವರಲ್ಲಿ ಕೋವಿಡ್‌ 19 ಸೋಂಕು ಇತ್ತೆ ಎಂಬುದನ್ನು ಪತ್ತೆಹಚ್ಚಲು ಜಿಲ್ಲಾಡಳಿತ ಮತ್ತು ತನಿಖಾ ತಂಡ ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೊರೆಹೋಗಿದೆ.

ಸತೀಶ್‌ ದೇಪುರ

Advertisement

Udayavani is now on Telegram. Click here to join our channel and stay updated with the latest news.

Next