Advertisement

“ಡ್ರಗ್ಸ್‌ ದಂಧೆಕೋರರ ಮೇಲೆ ಗೂಂಡಾ ಕಾಯ್ದೆ’

06:10 AM Oct 02, 2018 | Team Udayavani |

ಹುಬ್ಬಳ್ಳಿ: ಉಡ್ತಾ ಪಂಜಾಬ್‌ ರೀತಿ ರಾಜ್ಯ ಆಗದಂತೆ ತೀವ್ರ ಕಟ್ಟೆಚ್ಚರ ವಹಿಸಬೇಕು. ಮಾದಕ ವಸ್ತುಗಳ ದಂಧೆಯಲ್ಲಿ ತೊಡಗಿದವರ ವಿರುದ್ಧ ಗೂಂಡಾ ಕಾಯ್ದೆ ಬಳಸಬೇಕೆಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿದರು. ನಗರದಲ್ಲಿ ಪೊಲೀಸ್‌ ವಸತಿಗೃಹಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಾದಕವಸ್ತು ಸರಬರಾಜು ಮಾಡುವವರು ಎಷ್ಟೇ ಪ್ರಭಾವಿ ವ್ಯಕ್ತಿಯಾಗಿದ್ದರೂ ಅವರನ್ನು ಬಿಡದೆ ಬಂಧಿಸಿ, ಅಂಥವರ ಮೇಲೆ ಗೂಂಡಾ ಕಾಯ್ದೆ ಜಾರಿಗೊಳಿಸಿ ಎಂದರು.

Advertisement

ಪೊಲೀಸ್‌ ಇಲಾಖೆಯ 1.16 ಲಕ್ಷ ಹುದ್ದೆಗಳಲ್ಲಿ ಸುಮಾರು 25 ಸಾವಿರ ಹುದ್ದೆಗಳು ಖಾಲಿ ಇವೆ. ಪೊಲೀಸ್‌ ಸಿಬ್ಬಂದಿಗೆ ಒಟ್ಟು 11 ಸಾವಿರ ವಸತಿಗೃಹಗಳನ್ನು 1818 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುವ ಯೋಜನೆ ಜಾರಿಯಲ್ಲಿದೆ. ಈಗಾಗಲೇ 7ರಿಂದ 8 ಸಾವಿರ ಮನೆಗಳನ್ನು ನಿರ್ಮಿಸಲಾಗಿದೆ. ಕಂದಾಯ ನಿರೀಕ್ಷಕರ ಹುದ್ದೆಗೆ ಸಮಾನವಾಗಿ ಪೊಲೀಸ್‌ ಪೇದೆಗಳಿಗೆ ವೇತನ ಸೌಲಭ್ಯ ನೀಡಲು ಪರಿಷ್ಕರಣೆ ಮಾಡಲಾಗುತ್ತಿದೆ. ಪೊಲೀಸರಿಗೆ ಪಡಿತರ ಸ್ಥಗಿತಗೊಳಿಸಿಲ್ಲ. ಅವರ ಕೋರಿಕೆಯಂತೆ ಎಲ್ಲರಿಗೂ 400 ರೂ. ಮಾಸಿಕ ಭತ್ಯೆ ನೀಡಲಾಗುತ್ತಿದೆ. ಸಿಬ್ಬಂದಿ ಬಯಸಿದರೆ ಮರಳಿ ಹಳೆಯ ಪದ್ಧತಿಯಂತೆ ಪಡಿತರ ನೀಡಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next