ಕೊಪ್ಪಳ: ಆರ್ ಸಿಇಪಿ ವಿಚಾರದಲ್ಲಿ ಪ್ರಧಾನಿ ಮೋದಿ ಅವರು ಜನಪರ ನಿಲುವು ತಾಳಿದ್ದಾರೆ. ನಮಗೆ ಅಂತರಾಷ್ಟ್ರೀಯ ಒಪ್ಪಂದಕ್ಕಿಂತ ದೇಶದ ಹಿತ ಮುಖ್ಯ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಅವರು ಹೇಳಿದರು.
ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ದೇಶದಲ್ಲಿ ನೆಹರೂ ಆಳ್ವಿಕೆ ಇಲ್ಲ, ಮೋದಿ ಆಳ್ವಿಕೆ ಇದೆ. ಹಾಗಾಗಿ ಈ ಒಪ್ಪಂದಕ್ಕೆ ಸಹಿ ಹಾಕಿಲ್ಲ. ಅವರು ಜನರ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ಹಿಂದೆ ಪಾಕಿಸ್ತಾನ ದಾಳಿ ಮಾಡಿದಾಗ ನೆಹರು ಅಂತರಾಷ್ಟ್ರೀಯ ಮಟ್ಟಕ್ಕೆ ತಗೆದುಕೊಂಡು ಹೋಗಿದ್ದರು.
ನೆಹರು ದಾಳಿ ಮಾಡಿದವರನ್ನ ಒದ್ದು ಓಡಿಸಿದ್ರೇ ಮತ್ತೆ ದಾಳಿಯಾಗ್ತಿರಲಿಲ್ಲ ಎಂದರು. ಅವರನ್ನ ಒದ್ದು ಒಡಿಸಿದ್ರೆ ಕಾಶ್ಮೀರ ಸಮಸ್ಯೆ ಅವತ್ತೆ ಬಗೆ ಹರಿತಿತ್ತು.ನಮ್ಮ ಪ್ರಧಾನಿ ಇನ್ನೊಬ್ಬರ ಮೇಲೆ ಅವಲಂಬಿತವಾಗಿಲ್ಲ ಎಂದರು.
ಇನ್ನೂ ಚಿಕ್ಕಮಗಳೂರಿನಲ್ಲಿ ಗುಂಡಿಗೆ ಬಿದ್ದು ಯುವತಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿದ ಸಚಿವ ಕಳೆದ ಆರು ವರ್ಷ ನನ್ನ ಟಾರ್ಗೆಟ್ ಮಾಡಿ ಹಣ ಬಿಡುಗಡೆ ಮಾಡಿಲಿಲ್ಲ. ಇದೀಗ ಹಣ ಬಿಡುಗಡೆ ಮಾಡಿಸಿದ್ದೀನೆ.ರಸ್ತೆ ದುರಸ್ಥಿಯಾಗ್ತಿದೆ. ಅಪಘಾತಕ್ಕೆ ಕೇವಲ ಗುಂಡಿ ಕಾರಣವಲ್ಲ. ಚೆನ್ನಾಗಿರೋ ರಸ್ತೆಯಲ್ಲಿ ಅಪಘಾತವಾಗಿವೆ ಎಂದರು.