ಉಡುಪಿ: 2022 ರಲ್ಲಿ ಪಿಯುಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ TAT ಪರೀಕ್ಷೆ ಜೂನ್ 6 ರಂದು ನಡೆಯಲಿದೆ. ಇದನ್ನು ದ್ವಿತೀಯ ಪಿಯುಸಿ ಪರೀಕ್ಷೆ ಬರೆದ ವಾಣಿಜ್ಯ, ವಿಜ್ಞಾನ ಹಾಗೂ ಕಲಾ ವಿಭಾಗದ ವಿದ್ಯಾರ್ಥಿಗಳೆಲ್ಲಾ ಬರೆಯಬಹುದು . ಸಾಮಾನ್ಯ ಜ್ಞಾನದ ಜೊತೆಗೆ ವಾಣಿಜ್ಯ ವಿಷಯಗಳ ಅರಿವನ್ನು ಪರೀಕ್ಷಿಸುವುದರೊಂದಿಗೆ ವಿದ್ಯಾರ್ಥಿಗಳ ಸಾಮರ್ಥ್ಯ, ಬುದ್ಧಿವಂತಿಕೆಯನ್ನು ಅರಿಯಲು ಈ ಪರೀಕ್ಷೆ ಸಹಕಾರಿಯಾಗಲಿದೆ. ಪರೀಕ್ಷೆಯು ನೂರು ಅಂಕಗಳನ್ನು ಹೊಂದಿದ್ದು, ಬಹುಆಯ್ಕೆಯ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಎಂಬಿಎ ಪ್ರವೇಶ ಪರೀಕ್ಷೆ, ಐ.ಎ.ಎಸ್, ಸಿ.ಎ., ಸಿ.ಎಸ್, ಬ್ಯಾಂಕಿಂಗ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು TAT (ತ್ರಿಶಾ ಅಡ್ಮಿಷನ್ ಟೆಸ್ಟ್) ಸಹಕಾರಿಯಾಗಲಿದೆ.
ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ತ್ರಿಶಾ ಸಂಸ್ಥೆಯು ವಿದ್ಯಾರ್ಥಿ ವೇತನ ನೀಡಲಿದೆ ಹಾಗೂ ಪರೀಕ್ಷೆ ಬರೆದ ಅಷ್ಟೂ ವಿಧ್ಯಾರ್ಥಿಗಳಿಗೆ ಪೋಷಕರ ಸಮ್ಮುಖದಲ್ಲಿ ವಾಣಿಜ್ಯ ಕ್ಷೇತ್ರದಲ್ಲಿ ಅವಕಾಶವಿರುವ ಅಗತ್ಯ ವೃತ್ತಿ ಮಾರ್ಗದರ್ಶನವನ್ನು ಕೊಡಲಾಗುತ್ತದೆ. ಉದ್ಯೋಗ ಕ್ಷೇತ್ರಕ್ಕೆ ಅಗತ್ಯವಾದ ಕೌಶಲಗಳ ಕಲಿಕೆಯೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸಲು ಮಾರ್ಗದರ್ಶನ ಮಾಡಲಾಗುತ್ತದೆ.
ತ್ರಿಶಾ ವಿದ್ಯಾ ಕಾಲೇಜು ಕಟಪಾಡಿ ಹಾಗೂ ತ್ರಿಶಾ ಕಾಲೇಜು ಮಂಗಳೂರಿನ ಕ್ಯಾಂಪಸ್ ಗಳಲ್ಲಿ ಜೂನ್ 6, ಸೋಮವಾರದಂದು ಬೆಳಗ್ಗೆ 9.30 ಇಂದ ಮದ್ಯಾಹ್ನ 12 ರವರೆಗೆ ಪ್ರವೇಶ ಪರೀಕ್ಷೆ ನಡೆಯಲಿದೆ. ಪರೀಕ್ಷೆಯು ಒಟ್ಟು 100 ಅಂಕಗಳನ್ನು ಹೊಂದಿದ್ದು ಆಪ್ಟಿಟ್ಯೂಡ್ ಮಾದರಿಯ ಪ್ರಶ್ನೆಗಳಿರುತ್ತವೆ. ಜೊತೆಗೆ ಸರಳ ಗಣಿತ, ರೀಸನಿಂಗ್, ಇಂಗ್ಲೀಷ್, ಅಕೌಂಟ್ಸ್ ಹಾಗೂ ಬ್ಯುಸಿನೆಸ್ ಸ್ಟಡಿಗೆ ಸಂಬಂಧಿಸಿದ ಆಯ್ಕೆ ಆಧಾರಿತ ಪ್ರಶ್ನೆಗಳಿರುತ್ತವೆ.
ಪಿಯುಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಪಾಲಿಗೆ ಉಜ್ವಲ ಭವಿಷ್ಯಕ್ಕೆ ಈ ಪರೀಕ್ಷೆ ಬುನಾದಿಯಾಗಲಿದ್ದು, ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದು ಉತ್ತಮ ಉದ್ಯೋಗಾವಕಾಶಗಳನ್ನು ಹೊಂದಬೇಕೆಂಬುದು ತ್ರಿಶಾ ಸಂಸ್ಥೆಯ ಉದ್ದೇಶವಾಗಿದೆ. ಈಗಾಗಲೇ ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಈ ಸಂಸ್ಥೆಯು ನಡೆಸುವ ಪ್ರವೇಶ ಪರೀಕ್ಷೆಗೆ ಹೆಚ್ಚನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಜರಾಗುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಈ ಮೇಲೆ ತಿಳಿಸಿದ ತ್ರಿಶಾ ಕಾಲೇಜುಗಳಲ್ಲಿ TAT ಕುರಿತ ಮಾಹಿತಿ ಕೈಪಿಡಿ ದೊರೆಯಲಿದೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯನ್ನು ಸಂಪರ್ಕಿಸಬಹುದು. TAT ಪರೀಕ್ಷೆಗೆ ನೋಂದಾಯಿಸಲು ಈ ಲಿಂಕ್
https://tinyurl.com/TATexam ಬಳಸಿ.