Advertisement

ಕಲ್ಮಾಡಿ ಬಳಿಯ ದೇವರಕೆರೆ ಕೆಸರಿನಿಂದ ಮುಕ್ತ

10:52 PM Jun 07, 2019 | Sriram |

ಮಲ್ಪೆ: ಮಳೆಯ ಕೊರತೆಯಿಂದಾಗಿ ಎಲ್ಲಡೆ ನೀರಿಗೆ ಹಾಹಾಕಾರ. ಅಕ್ಷರಶಃ ನೀರಿನ ಬರ ಕಾಡುತ್ತಿದೆ. ಈಗೀಗ ಜನರಿಗೆ ಇದರ ಕಾರಣವೂ ಅರಿವಾಗುತ್ತಿದೆ. ಜನರು ಈಗ ನೀರಿನ ಮೂಲವನ್ನು ಹುಡುಕಿಕೊಂಡು ಹೋಗುವಂತಾಗಿದೆ. ಈ ನಿಟ್ಟಿನಲ್ಲಿ ಪಾಳುಬಿದ್ದಿರುವ ಕೆರೆ ಹೂಳನ್ನು ತೆರವುಗೊಳಿಸುವ ಕಾರ್ಯಗಳು ಅಲ್ಲಲ್ಲಿ ನಡೆಯುತ್ತಿದೆ.


Advertisement

ಅಂಬಲಪಾಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಗೆ ಸೇರಿದ ನಗರಸಭೆ ಕಲ್ಮಾಡಿ ವಾರ್ಡ್‌ಗೆ ತಾಗಿ ಕೊಂಡಿರುವ ಪುರಾತನವಾದ ದೇವರಕರೆ ಇದ್ದು ಇದರ ಅಭಿವೃದ್ಧಿಗೆ ಇಲ್ಲಿನ ಜನರು ಮುಂದಾಗಿದ್ದಾರೆ. ನಗರಸಭಾ ಸದಸ್ಯ ಸುಂದರ ಜೆ. ಕಲ್ಮಾಡಿ ಅವರ ನೇತೃತ್ವದಲ್ಲಿ ಸ್ಥಳಿಯರೊಡಗೂಡಿ ಒಂದು ವಾರಗಳ ಕಾಲ ಕರಸೇವೆಯ ಮೂಲಕ ಹೂಳೆತ್ತುವ ಕಾರ್ಯವನ್ನು ನಡೆಸಲಾಗಿದೆ. ತಾ.ಪಂ. ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ಅಂಬಲಪಾಡಿ ಗ್ರಾಮ ಪಂಚಾಯತ್‌ ಅಧ್ಯಕ್ಷ ಪ್ರಮೋದ್‌ ಸಾಲ್ಯಾನ್‌, ಸದಸ್ಯರಾದ ಭಾರತೀ ಭಾಸ್ಕರ್‌, ದಯಾಶಿನಿ, ಶೋಭಾ ಕಲ್ಮಾಡಿ ಜತೆಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸ್ವಸಹಾಯ ಸಂಘದ ಸದಸ್ಯರು ಪೂರ್ಣ ಸಹಕಾರವನ್ನು ನೀಡಿದ್ದಾರೆ. ಜಿ.ಪಂ. ಅಧ್ಯಕ್ಷ ದಿನಕರ ಬಾಬು ಕೆರೆ ಅಭಿವೃದ್ದಿ ಜಿ.ಪಂ.ನಿಂದ ಅನುದಾನವನ್ನು ಒದಗಿಸಿ ಕೊಡುವ ಭರವಸೆಯನ್ನು ನೀಡಿದ್ದಾರೆ.

ಸುಮಾರು 2.5 ಎಕ್ರೆ ವಿಸ್ತೀರ್ಣವನ್ನು ಹೊಂದಿದ ಈ ಪುರಾತನವಾದ ಕೆರೆಯನ್ನು 18ವರ್ಷಗಳ ಹಿಂದೆ ಹೂಳನ್ನು ತೆರೆವುಗೊಳಿಸಿ ಅಭಿವೃದ್ಧಿಪಡಿಸಲಾಗಿತ್ತು. ಮುಂದೆ ಇದು ಅಂತರ್ಜಲ ಅಭಿವೃದ್ಧಿಗೆ ಪೂರಕವಾಗಿತ್ತು.

ಕೆಲವು ವರ್ಷಗಳಿಂದ ಇಚೇಗೆ ಈ ಕೆರೆ ಉಪಯೋಗವಾಗದೆ ಕೆರೆಯಲ್ಲಿ ಕಪ್ಪು ಹೂಳು ತುಂಬಿಕೊಂಡಿದ್ದು ನೀರು ನಿಲ್ಲುತ್ತಿರಲಿಲ್ಲ. ವಾರದ ಹಿಂದೆ ಗ್ರಾಮದ ಜನರ ಸಹಕಾರದಲ್ಲಿ ಕೆರೆಯ ಸುತ್ತ ಬೆಳೆದಿರುವ ಹುಲ್ಲು ಕಡ್ಡಿಗಳು, ಕಡಿದು ಜೆಸಿಬಿ, ಕ್ರೇನ್‌ಗಳ ಮೂಲಕ ಹೂಳನ್ನು ತೆರವುಗೊಳಿಸಲಾಯಿತು. ಇದೀಗ ಮತ್ತೆ ಶುದ್ಧ ನೀರು ತುಂಬಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next