Advertisement

ʼAadujeevithamʼ: ಮರುಭೂಮಿ ಎಂಬ ಸುಡುಗಾಡಿನಲ್ಲಿ ಬದುಕು ಬಿರುಗಾಳಿ.. ಟ್ರೇಲರ್‌ ಔಟ್

03:36 PM Mar 09, 2024 | Team Udayavani |

ಕೊಚ್ಚಿ: ಮಾಲಿವುಡ್ ಸೂಪರ್‌ ಪೃಥ್ವಿರಾಜ್‌ ಸುಕುಮಾರನ್‌ ʼ ಆಡು ಜೀವಿತಂ ದಿ ಗೋಟ್ ಲೈಫ್ʼ ಸಿನಿಮಾದ ಟ್ರೇಲರ್‌ ರಿಲೀಸ್‌ ಆಗಿದೆ.

Advertisement

ಸಟ್ಟೇರಿದ ದಿನದಂದ ಈ ಸಿನಿಮಾ  ನಾನಾ ಕಾರಣಗಳಿಂದ ಸದ್ದು ಮಾಡಿದೆ. ಸಿನಿಮಾದ ಸ್ಕ್ರಿಪ್ಟ್‌ ಶುರುವಾಗಿ ಕೆಲ ವರ್ಷಗಳೇ ಕಳೆದಿದೆ. ಶೂಟಿಂಗ್‌ ಸಮಯಕ್ಕೂ ಕೆಲ ತಿಂಗಳುಗಳೇ ಕಳೆದಿದೆ. ಅಂತೂ ಸಿನಿಮಾ ಸವಾಲುಗಳನ್ನು ದಾಟಿ ರಿಲೀಸ್‌ ಹಂತಕ್ಕೆ ಬಂದು ನಿಂತಿದೆ.

ಪೃಥ್ವಿರಾಜ್‌ ಸುಕುಮಾರನ್‌ ಈ ಸಿನಿಮಾದಲ್ಲಿ ಸಂಪೂರ್ಣ ಭಿನ್ನವಾದ ಗೆಟಪ್‌ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾಕ್ಕಾಗಿ ಅವರು ಸಾಕಷ್ಟು ಪರಿಶ್ರಮವನ್ನು ಹಾಕಿದ್ದಾರೆ ಎನ್ನುವುದು ಟ್ರೇಲರ್‌ ನಲ್ಲಿ ಕಾಣುವ ಅವರ ಅಭಿನಯವನ್ನು ನೋಡಿಯೇ ಗೊತ್ತಾಗುತ್ತದೆ.

ಮರುಭೂಮಿಯಲ್ಲಿ ಸಿಲುಕಿಕೊಂಡಿರುವ ವ್ಯಕ್ತಿಯೊಬ್ಬನನ್ನು ತೋರಿಸಿ, ಆತನ ಬದುಕಿನ ಯೌವನದ ಹಂತದ ಝಲಕ್‌ ನ್ನು ಟ್ರೇಲರ್‌ ನಲ್ಲಿ ತೋರಿಸಲಾಗಿದೆ. “ಒಳಗೆ ಬಂದವರು ಯಾರೂ ಹೊರಗೆ ಹೋಗಲು ಆಗುವುದಿಲ್ಲ” ಎನ್ನುವ ಹಿನ್ನೆಲೆ ಧ್ವನಿಯಲ್ಲಿ ಸಿಲುಕಿಕೊಂಡಿರುವ ವ್ಯಕ್ತಿಯನ್ನು ತೋರಿಸಲಾಗಿದೆ.  ಜೊತೆಗೆ ಆಡುಗಳ ಹಿಂಡು, ಮರುಭೂಮಿಯಲ್ಲಿನ ತಾಪ, ಸವಾಲನ್ನು ತೋರಿಸಲಾಗಿದೆ. ಈ ಪಾತ್ರದಲ್ಲಿ ಪೃಥ್ವಿರಾಜ್‌ ಎಂದೂ ಕಾಣದ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಸಿನಿಮಾದ ಕಥೆಯೇನು?: ʼಆಡುಜೀವಿತಂʼ ಸಿನಿಮಾ ರಿಲೀಸ್‌ ಗೂ ಮುನ್ನ ದೊಡ್ಡಮಟ್ಟದಲ್ಲಿ ನಿರೀಕ್ಷೆ ಹುಟ್ಟಿಸಿರುವುದಕ್ಕೆ ಕೆಲ ಕಾರಣಗಳಿವೆ. ಈ ಸಿನಿಮಾ ಸತ್ಯ ಘಟನೆಯನ್ನು ಆಧಾರಿಸಿದೆ. ಮಲಯಾಳಂನ ಜನಪ್ರಿಯ ‘ಆಡುಜೀವಿತಂʼಕಾದಂಬರಿ ಆಧರಿಸಿ ಈ ಸಿನಿಮಾ ನಿರ್ಮಾಣ ಆಗಿದೆ. ಈ ಕಾದಂಬರಿ ವಿದೇಶಿ ಭಾಷೆ ಸೇರಿದಂತೆ 12 ಭಾಷೆಗಳಿಗೆ ಅನುವಾದಗೊಂಡಿದೆ. ಇದನ್ನು ಹೆಸರಾಂತ ಬರಹಗಾರ ಬೆನ್ಯಾಮಿನ್ ಅವರು ಬರೆದಿದ್ದಾರೆ.

Advertisement

ʼಆಡು ಜೀವಿತಂʼ ನಜೀಬ್ ಮೊಹಮ್ಮದ್ ಎನ್ನುವ ಕೇರಳದ ವ್ಯಕ್ತಿಯ ಕಥೆಯಾಗಿದೆ. ಈ ಪಾತ್ರವನ್ನು ಪೃಥ್ವಿರಾಜ್‌ ಮಾಡಿದ್ದಾರೆ. 90ರ ದಶಕದಲ್ಲಿ ಭವಿಷ್ಯ ಹುಡುಕಿಕೊಂಡು ಸೌದಿ ಅರೇಬಿಯಾಗೆ ಹೋಗುವ ನಜೀಬ್ ಪಾಸ್‌ಪೋರ್ಟ್‌ ಇಲ್ಲದೆ ಎದುರಿಸಿದ ಹಿಂಸೆ,  ಮರುಭೂಮಿ ಬಿಸಿಲಿನಲ್ಲಿ ಅನುಭವಿಸಿದ ಕಷ್ಟಗಳನ್ನು ಸಿನಿಮಾದಲ್ಲಿ ಹೇಳಲಾಗಿದೆ.

ಈ ಸಿನಿಮಾವನ್ನು ರಾಷ್ಟ್ರ ಪ್ರಶಸ್ತಿ ಪುರಸ್ಕೃತ​ ಬ್ಲೆಸ್ಸಿ ಥಾಮಸ್ ನಿರ್ದೇಶನ ಮಾಡಿದ್ದಾರೆ. ‘ವಿಷ್ಯುವಲ್​ ರೊಮ್ಯಾನ್ಸ್​ʼ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಎ.ಆರ್​. ರೆಹಮಾನ್ ಮ್ಯೂಸಿಕ್‌ ನೀಡಿದ್ದಾರೆ.

ಪೃಥಿರಾಜ್‌ ಜೊತೆ ಅಮಲಾ ಪೌಲ್​ , ಅರಬ್​ ನಟರಾದ ತಲಿಬ್​ ಅಲ್​ ಬಲುಶಿ, ರಿಕ್​ ಅಬಿ ನಟಿಸಿದ್ದು, ಹಾಲಿವುಡ್​ ನಟ ಜಿಮ್ಮಿ ಜೀನ್​ ಲೂಯಿಸ್​ ಕೂಡ ನಟಿಸಿದ್ದಾರೆ.

ಇದೇ ಮಾರ್ಚ್‌ 28 ರಂದು ವರ್ಲ್ಡ್‌ ವೈಡ್‌ ಸಿನಿಮಾ ತೆರೆಕಾಣಲಿದೆ.

Advertisement

Udayavani is now on Telegram. Click here to join our channel and stay updated with the latest news.