Advertisement

ರಾಜಧಾನಿಯ 20 ಕ್ಷೇತ್ರಗಳ ಗೆಲುವೇ ಗುರಿ

12:14 PM Apr 11, 2018 | Team Udayavani |

ಬೆಂಗಳೂರು: ರಾಜಧಾನಿ ಬೆಂಗಳೂರಿನ ವ್ಯಾಪ್ತಿಗೆ ಬರುವ ವಿಧಾನಸಭೆ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಮಂಗಳವಾರ ದೆಹಲಿಯಲ್ಲಿ ನಡೆದ ಸ್ಕ್ರೀನಿಂಗ್‌ ಕಮಿಟಿ ಸಭೆಯಲ್ಲಿ ಚರ್ಚೆಯಾಗಿದ್ದು, 20 ಸ್ಥಾನ ಗೆಲ್ಲುವ ಗುರಿಯೊಂದಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ನಿರ್ಧರಿಸಲಾಯಿತು.

Advertisement

ಹಾಲಿ ಶಾಸಕರಿರುವ ಹದಿಮೂರು ಕ್ಷೇತ್ರಗಳಲ್ಲಿ ಬಹುತೇಕ ಎಲ್ಲ ಶಾಸಕರಿಗೂ ಟಿಕೆಟ್‌ ದೊರೆಯಲಿದ್ದು, ಶಾಂತಿನಗರ ಶಾಸಕ ಎನ್‌.ಎ. ಹ್ಯಾರಿಸ್‌ ಪುತ್ರ ನಲಪಾಡ್‌ ಪ್ರಕರಣದಿಂದ ಪಕ್ಷದ ಇಮೆಜ್‌ಗೆ ಧಕ್ಕೆಯಾಗಿದ್ದು, ಅವರಿಗೆ ಟಿಕೆಟ್‌ ನೀಡಬಾರದು ಎಂದು ಕೆಲವರು ಒತ್ತಡ ಹೇರುತ್ತಿದ್ದಾರೆ.

ಆದರೆ, ಪಕ್ಷದ ನಾಯಕರು ಅವರ ಬಗ್ಗೆ ಸಹಾನುಭೂತಿ ಹೊಂದಿದ್ದು , ಕೊನೆ ಗಳಿಗೆಯಲ್ಲಿ ಟಿಕೆಟ್‌ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಪ್ರಮುಖವಾಗಿ ಜಯನಗರ ಕ್ಷೇತ್ರದಲ್ಲಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿ ಹಾಗೂ ಕಳೆದ ಬಾರಿ ಸ್ಪರ್ಧಿಸಿದ್ದ ಎಂ.ಸಿ. ವೇಣುಗೋಪಾಲ್‌ ನಡುವೆ ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆದಿದೆ.

ಸೌಮ್ಯ ರೆಡ್ಡಿಗೆ ಟಿಕೆಟ್‌ ನೀಡಿದರೆ ಬಿಜೆಪಿ ತೆಕ್ಕೆಯಲ್ಲಿರುವ ಕ್ಷೇತ್ರ ಕಾಂಗ್ರೆಸ್‌ ವಶಕ್ಕೆ ಪಡೆಯಬಹುದು ಎಂದು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌ ಸೇರಿದಂತೆ ನಗರದ ಸಚಿವರು ಮುಖ್ಯಮಂತ್ರಿ ಮೇಲೆ ಒತ್ತಡ ಹೇರುತ್ತಿದ್ದಾರೆ. ಆದರೆ, ಕಳೆದ ಬಾರಿ ಸೋತಿದ್ದ ಎಂ.ಸಿ. ವೇಣುಗೋಪಾಲ್‌ಗೆ ಟಿಕೆಟ್‌ ನೀಡಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ ಹಾಗೂ ಮಲ್ಲಿಕಾರ್ಜುನ ಖರ್ಗೆ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. 

ಇನ್ನು ಸಿ.ವಿ. ರಾಮನ್‌ ನಗರದಲ್ಲಿ ಲೋಕೋಪಯೋಗಿ ಸಚಿವ ಎಚ್‌.ಸಿ. ಮಹದೇವಪ್ಪ ಸ್ಪರ್ಧೆ ಮಾಡದಿದ್ದರೆ, ತಮ್ಮ ಪುತ್ರನ ಸ್ಪರ್ಧೆಯ ಬಗ್ಗೆ ನಿರ್ಧಾರ ತಿಳಿಸುವಂತೆ ಸೂಚಿಸಲಾಗಿದೆ. ಈ ಕ್ಷೇತ್ರದಲ್ಲಿ 2013 ರಲ್ಲಿ ಸ್ಪರ್ಧೆ ಮಾಡಿದ್ದ ರಮೇಶ್‌ ಹಾಗೂ ಮೇಯರ್‌ ಸಂಪತ್‌ ರಾಜ್‌ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. 

Advertisement

ಉಳಿದ ಕ್ಷೇತ್ರಗಳಲ್ಲಿಯೂ ಎರಡು ಮೂರು ಆಕಾಂಕ್ಷಿಗಳು ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದು, ಈ ಬಾರಿ ಗೆಲುವೊಂದೇ ಮಾನದಂಡವನ್ನಾಗಿ ಮಾಡಿಕೊಂಡಿರುವ ಪಕ್ಷದ ನಾಯಕರು ಯಾರಿಗೆ ಟಿಕೆಟ್‌ ನೀಡುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ. 

ಇವರಿಗೆ ಟಿಕೆಟ್‌ ಪಕ್ಕಾ
-ಬಿಟಿಎಂ ಲೇಔಟ್‌    ರಾಮಲಿಂಗಾ ರೆಡ್ಡಿ
-ಸರ್ವಜ್ಞ ನಗರ    ಕೆ.ಜೆ. ಜಾರ್ಜ್‌
-ವಿಜಯನಗರ    ಎಂ. ಕೃಷ್ಣಪ್ಪ
-ಗೋವಿಂದರಾಜ ನಗರ    ಪ್ರಿಯಾ ಕೃಷ್ಣ
-ರಾಜರಾಜೇಶ್ವರಿ ನಗರ    ಮುನಿರತ್ನ
-ಗಾಂಧಿನಗರ    ದಿನೇಶ್‌ ಗುಂಡೂರಾವ್‌
-ಚಿಕ್ಕಪೇಟೆ    ಆರ್‌.ವಿ.ದೇವರಾಜ್‌
-ಕೆ.ಆರ್‌.ಪುರ    ಬೈರತಿ ಬಸವರಾಜ್‌
-ಶಿವಾಜಿ ನಗರ    ರೋಷನ್‌ಬೇಗ್‌
-ಬ್ಯಾಟರಾಯನಪುರ    ಕೃಷ್ಣಬೈರೇಗೌಡ
-ಯಶವಂತಪುರ    ಎಸ್‌.ಟಿ. ಸೋಮಶೇಖರ್‌ 
-ಆನೇಕಲ್‌    ಶಿವಣ್ಣ
-ಶಾಂತಿ ನಗರ    ಹ್ಯಾರಿಸ್‌
-ಚಾಮರಾಜಪೇಟೆ    ಜಮೀರ್‌ ಅಹಮದ್‌ ಖಾನ್‌ 

ಪೈಪೋಟಿ ಇರುವ ಕ್ಷೇತ್ರಗಳು 
-ದಾಸರಹಳ್ಳಿ    ಉಮೇಶ್‌ ಬೋರೇಗೌಡ/ತಿಮ್ಮನಂಜಯ್ಯ/ಸೌಂದರ್ಯ ಮಂಜಪ್ಪ
-ರಾಜಾಜಿನಗರ    ಪದ್ಮಾವತಿ/ಮಂಜುಳಾ ನಾಯ್ಡು/ರಘುವೀರ್‌ ಗೌಡ
-ಪದ್ಮನಾಭನಗರ    ಬಾಲಾಜಿ ನಾಯ್ಡು/ಗುರಪ್ಪ ನಾಯ್ಡು
-ಬಸವನಗುಡಿ    ಕೆ.ಚಂದ್ರಶೇಖರ್‌/ಬೋರೇಗೌಡ/ಸುಧೀಂದ್ರ 
-ಬೆಂಗಳೂರು ದಕ್ಷಿಣ    ಸುಷ್ಮಾ ರಾಜಗೋಪಾಲ ರೆಡ್ಡಿ/ ಆರ್‌.ಕೆ. ರಮೇಶ್‌/ಕುಮಾರ್‌
-ಬೊಮ್ಮನಳ್ಳಿ    ಕವಿತಾ ರೆಡ್ಡಿ/ನಾಗಭೂಷಣ್‌ ರೆಡ್ಡಿ/ವಾಸುದೇವ ರೆಡ್ಡಿ
-ಜಯನಗರ    ಸೌಮ್ಯ ರೆಡ್ಡಿ/ಎಂ.ಸಿ. ವೇಣುಗೋಪಾಲ
-ಸಿ.ವಿ.ರಾಮನ್‌ನಗರ    ಎಚ್‌.ಸಿ. ಮಹದೇವಪ್ಪ/ರಮೇಶ್‌/ ಸಂಪತ್‌ ರಾಜ್‌, 
-ಪುಲಕೇಶಿ ನಗರ    ಅಖಂಡ ಶ್ರೀನಿವಾಸ್‌/ಪ್ರಸನ್ನಕುಮಾರ್‌
-ಯಲಹಂಕ    ಕೇಶವ ರಾಜಣ್ಣ/ ನಾರಾಯಣಸ್ವಾಮಿ/ ಗೋಪಾಕೃಷ್ಣ
-ಹೆಬ್ಟಾಳ    ಬೈರತಿ ಸುರೇಶ್‌/ರೆಹಮಾನ್‌ ಷರೀಫ್
-ಮಹಾಲಕ್ಷ್ಮೀ ಲೌಔಟ್‌    ಗಿರೀಶ್‌ ನಾಶಿ/ಕುಮಾರಗೌಡ/ ಮಂಜುಳಾ ಪುರುಷೋತ್ತಮ್‌
-ಮಲ್ಲೇಶ್ವರಂ    ಕೆಂಗಲ್‌ ಶ್ರೀಪಾದ್‌ ರೇಣು/ ಬಿ.ಕೆ. ಶಿವರಾಮ್‌/ಗಿರೀಶ್‌ ಲಕ್ಕಣ್ಣ
-ಮಹದೇವಪುರ    ಎ.ಸಿ. ಶ್ರೀನಿವಾಸ

Advertisement

Udayavani is now on Telegram. Click here to join our channel and stay updated with the latest news.

Next