Advertisement

ಮಾನವ ಕಲ್ಯಾಣವೇ ಆಗಿದೆ ಧರ್ಮಗಳ ಗುರಿ

03:37 PM Mar 28, 2017 | |

ಆಳಂದ: ಜಗತ್ತಿನ ಎಲ್ಲ ಧರ್ಮಗಳ ಗುರಿ ಮಾನವ ಕಲ್ಯಾಣವೇ ಆಗಿದೆ. ಧರ್ಮ ಸನ್ಮಾರ್ಗ ತೋರುತ್ತದೆ. ಪ್ರತಿಯೊಬ್ಬರ ಧರ್ಮದ ಕಡೆ ಒಲವು ತೋರಬೇಕು ಎಂದು ರಂಭಾಪುರಿ ಪೀಠದ ಜಗದ್ಗುರು ಪ್ರಸನ್ನ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಹೇಳಿದರು. 

Advertisement

ತಾಲೂಕಿನ ಭೂಸನೂರ ಗ್ರಾಮದಲ್ಲಿ ಮಂಗಳವಾರ ನಡೆಯಲಿರುವ ವೀರಭದ್ರೇಶ್ವರ ನೂತನ ಮೂರ್ತಿ ಪ್ರಾಣ ಪ್ರತಿಷ್ಠಾಪನಾ ಪ್ರಯುಕ್ತ ಸೋಮವಾರ ನಡೆದ ಧಾರ್ಮಿಕ ಸಮಾರಂಭದ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಆಶೀರ್ವಚನ ನೀಡಿದರು. ಹಲವು ಧರ್ಮಗಳಲ್ಲಿ ವೀರಶೈವ ಧರ್ಮ ತನ್ನದೆಯಾದ ಪ್ರಾಮುಖ್ಯತೆ ಪಡೆದಿದೆ.

ಅದು ಸಕಲರಿಗೂ ಲೇಸನ್ನೇ ಬಯಸಿ ಎಲ್ಲರು ನಮ್ಮವರು ಎಂಬ ಭಾವದೊಂದಿಗೆ ಕಾಲ ಕಾಲಕ್ಕೆ ಸಮಾಜ ಮತ್ತು ಜನಾಂಗದ ಹಿತಕ್ಕಾಗಿ ಶ್ರಮಿಸುತ್ತಿದೆ. ಈ ಧರ್ಮಕ್ಕೆ ಪ್ರಾಚೀನ ಇತಿಹಾಸ ಪರಂಪರೆ ಇದೇ. ಶಾಂತಿ ದೊರೆಯಲಿ ಎಂಬುವ ತತ್ವಗಳನ್ನು ಬೋಧಿಸಿದೆ. ಆದರೆ ಈಗ ಕೆಲ ಪಟ್ಟಭದ್ರ ಹಿತಾಶಕ್ತಿಗಳು ಧರ್ಮದಲ್ಲಿ ರಾಜಕೀಯ ಪ್ರವೇಶಿಸಿ ಸಂಸ್ಕೃತಿ ಆದರ್ಶವನ್ನು ನೂಚ್ಚು ನೂರಾಗಿಸುವ ಕೆಲಸ ಮಾಡುತ್ತಿವೆ.

ಇಂಥವುಗಳಿಗೆ ಕಿವಿಗೊಡದೆ ಮುಗ್ಧ ಭಕ್ತರು ಧರ್ಮ ಮಾರ್ಗದಲ್ಲಿ ಮುನ್ನಡೆದು ಆದರ್ಶ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು. ಭೂಸನೂರ ಗ್ರಾಮದಲ್ಲಿ ವೀರಭದ್ರೇಶ್ವರ ಮೂರ್ತಿ ಸ್ಥಾಪನೆ ಮೂಲಕ ಗ್ರಾಮದಲ್ಲಿ ಶಾಂತಿ ಮತ್ತು ಸಂಸ್ಕಾರವನ್ನು ಪುನರ ಸ್ಥಾಪನೆಗೆ ಧಾರ್ಮಿಕ ಕಾರ್ಯಕ್ರಮ ಒಳಿತು ಮಾಡಲಿದೆ ಎಂದು ಶುಭ ಹಾರೈಸಿದರು. 

ಚಿನ್ಮಯಗಿರಿ ಸಿದ್ಧರಾಮ ಶಿವಾಚಾರ್ಯರು, ದೇವಂತಗಿ ಮಠದ ರೇಣುಕ ಶಿವಾಚಾರ್ಯರು, ಭೂಸನೂರ ಮಠದ ಶಂಭು ಸೋಮನಾಥ ಮಾತನಾಡಿದರು. ಮುಖಂಡ ಶಾಂತಮಲ್ಲಪ್ಪ ನೆಲ್ಲೂರ, ಶಂಕರ ಸೋಮಾ, ಸಿದ್ದರಾಮ ಗೊಬ್ಬರ, ಆನಂತರಾಜ ಸಾಹು, ರೇವಣಸಿದ್ದಪ್ಪ ಯಲಶೆಟ್ಟಿ, ಮಹಾಂತಪ್ಪ ಯಲಶೆಟ್ಟಿ, ಅಮೃತ ದೇಶೆಟ್ಟಿ,

Advertisement

ಬಿಜೆಪಿ ಮುಖಂಡ ರೇವಣಸಿದ್ದ ಪಟೆ, ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ಧರ್ಮರಾಜ ಸಾಹು, ಬಾಬುರಾವ ಗೊಬ್ಬರ, ಗುರುಶಾಂತ ಕಡಿಕೊಳ, ಸೂರ್ಯಕಾಂತ ಹತ್ತಗುಂದಿ, ಮಡಿವಾಳಯ್ಯ ಸ್ವಾಮಿ ಮತ್ತು ವೀರಭದ್ರೇಶ್ವರ ಮೂರ್ತಿ ಧಾನಿ, ಚನ್ನಬಸಯ್ಯ ಹಿರೇಮಠ, ಶ್ರೀಮಂತರಾವ ಅಲ್ದಿ, ಉದ್ಯಮಿ ಸೀರಿ ಇದ್ದರು. 

ಪ್ರವಚನಕಾರ ಮಲ್ಲಯ್ಯ ಶಾಸ್ತ್ರಿ ಖಾನಾಪುರ ಮತ್ತು  ತಬಲಾ ಸಾಥಿ ದತ್ತಣ್ಣ ಭೂಸನೂರ ಸಂಗೀತ ನೆರವೇರಿಸಿದರು. ಭೂಸನೂರ ಗ್ರಾಮ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳ ಗ್ರಾಮಸ್ಥರು ರಂಭಾಪುರಿ ಶ್ರೀಗಳ ಕುಂಭ ಕಳಶದೊಂದಿಗೆ ಭವ್ಯ ಮೆರವಣಿಗೆ ಕೈಗೊಂಡರು. ಮಾ. 28ರಂದು ಬೆಳಗಿನ ಜಾವ ವೀರಭದ್ರೇಶ್ವರ ನೂತನ ಮೂರ್ತಿ ಪ್ರತಿಷ್ಠಾಪನೆ ಧಾರ್ಮಿಕ ಸಮಾರಂಭ ನಡೆಯಲಿದ್ದು, ಹರು, ಗುರು ಚರಮೂರ್ತಿಗಳು ಪಾಲ್ಗೊಳ್ಳಲಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next