Advertisement

ಇನ್ನೂ ಬಹಳ ದೂರವಿದೆ ಅಪೌಷ್ಟಿಕತೆ ಮುಕ್ತ ದೇಶದ ಗುರಿ

09:14 AM Feb 13, 2020 | sudhir |

2022ರ ವೇಳೆಗೆ ರಾಷ್ಟ್ರೀಯ ಪೌಷ್ಟಿಕಾಂಶ ಮಿಷನ್‌ (ಎನ್‌ಎನ್‌ಎಂ) ದೇಶ ದಲ್ಲಿ ಅಪೌಷ್ಟಿಕತೆ ಸಮಸ್ಯೆ ಯನ್ನು ಸಂಪೂರ್ಣವಾಗಿ ನಿವಾರಣೆ ಮಾಡುವ ಗುರಿ ಹೊಂದಿದೆ. ಆದರೆ ಆ ಗುರಿಯನ್ನು ತಲುಪುವುದು ಸದ್ಯದ ಮಟ್ಟಿಗೆ ಅಸಾಧ್ಯ ಎಂದು ಭಾರತದ ವಾರ್ಷಿಕ ಪರಿಸರ ವರದಿ ಹೇಳಿದೆ. ಹಾಗಾದರೆ ದೇಶಾದ್ಯಂತ ಅಪೌಷ್ಟಿಕತೆ ಸಮಸ್ಯೆಗೆ ಬಲಿಯಾದವರೆಷ್ಟು? ಕಾರಣಗಳೇನು? ಮಾಹಿತಿ ಇಲ್ಲಿದೆ.

Advertisement

10.4 ಲಕ್ಷ ಸಾವು
2017ರಲ್ಲಿ ದೇಶಾದ್ಯಂತ ಸುಮಾರು 10.4 ಲಕ್ಷ ಐದು ವರ್ಷದೊಳಗಿನ ಮಕ್ಕಳು ಅಪೌಷ್ಟಿಕತೆ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಶೇ.68.2ರಷ್ಟು ಸಾವುಗಳು ಅಪೌಷ್ಟಿಕತೆಯಿಂದ ಸಂಭವಿಸಿವೆ.

ಹಸಿವು ಸೂಚ್ಯಂಕದಲ್ಲಿ ಹಿನ್ನಡೆ
ಅದೇ ವರ್ಷ ಜಾಗತಿಕ ಹಸಿವು ಸೂಚ್ಯಂಕದಲ್ಲಿಯೂ ಹಿನ್ನಡೆ ಸಾಧಿಸಿರುವ ಭಾರತ 117 ದೇಶಗಳ ಪೈಕಿ 102ನೇ ಸ್ಥಾನ ಪಡೆದುಕೊಂಡಿತ್ತು.

ಕಳೆಗುಂದಿದ ಅಭಿಯಾನ್‌
ಸಮಸ್ಯೆಯ ತೀವ್ರತೆಯನ್ನು ಅರಿತ ಕೇಂದ್ರ ಸರಕಾರ ಅಪೌಷ್ಟಿಕತೆ ನಿವಾರಣೆಗೆ 2018ರಲ್ಲಿ ಪೋಷಣ್‌ ಅಭಿಯಾನ್‌ ಯೋಜನೆಯನ್ನು ಜಾರಿ ಮಾಡಿತ್ತು. ಆದರೆ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನ ಆಗದ ಕಾರಣ ಅಪೌಷ್ಟಿಕತೆ ಪ್ರಮಾಣ ಹೆಚ್ಚಾಗುತ್ತಿದ್ದು, ಯೋಜನೆಯ ಗುರಿಗಳು ಕಳೆಗುಂದುತ್ತಿವೆ.

2ನೇ ಬಾರಿ ಸೋಲು
2017ರಿಂದ 2020ರ ನಡುವೆ ಪ್ರತ್ಯೇಕ ವರ್ಷಗಳಲ್ಲಿ ಈ ಸಮಸ್ಯೆಯ ಪ್ರಮಾಣವನ್ನು ಶೇ. 2ರಷ್ಟು ಕಡಿಮೆ ಮಾಡುವ ಗುರಿ ಇಟ್ಟುಕೊಳ್ಳಲಾಗಿತ್ತು. ಆದರೆ 2020ರ ಒಳಗೆ ತನ್ನ ಗುರಿ ತಲುಪುವುದು ಕಷ್ಟಸಾಧ್ಯವಾಗುತ್ತದೆ ಎಂಬ ವರದಿ ಕಳೆದ ವರ್ಷ ಪ್ರಕಟವಾಗಿತ್ತು. ಆದರೆ ಮತ್ತೆ ಇದೀಗ 2022ರ ವೇಳೆಗೆ ಅಪೌಷ್ಟಿಕತೆ ಮುಕ್ತ ಗುರಿ ಸಂಪೂರ್ಣವಾಗುವುದಿಲ್ಲ ಎಂದು ವರದಿ ಉಲ್ಲೇಖ ಮಾಡಿದೆ.

Advertisement

 ಕಾರಣಗಳೇನು…
– ಸರಕಾರಿ ಯೋಜನೆ ಕುರಿತು ಮಾಹಿತಿ ಇಲ್ಲದಿರುವುದು.
– ಬಡತನ ಹಾಗೂ ಸಾಮಾ ಜಿಕ ಪರಿಸ್ಥಿತಿ.
– ಸಮಸ್ಯೆಯ ಪರಿಣಾಮದ ಕುರಿತು ಮಾಹಿತಿ ಕೊರತೆ.
– ಆರೋಗ್ಯ ಸವಲತ್ತುಗಳಿಂದ ವಂಚಿತ ಕುಟುಂಬಗಳು
– ಆರೋಗ್ಯ ಮತ್ತು ಪೌಷ್ಟಿಕ ಆಹಾರದ ಕುರಿತು ನಿರ್ಲಕ್ಷ್ಯ.

 ಪರಿಹಾರ
– ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ನೀಡುವುದು.
– ಗರ್ಭಿಣಿಯರಿಗೆ ಕಬ್ಬಿಣಾಂಶ ಮಾತ್ರೆ ಒದಗಿಸುವುದು.
– ಎದೆ ಹಾಲು ಶಿಶುವಿಗೆ ಪೂರಕ ಪೌಷ್ಟಿಕ ಆಹಾರ.
– ತಜ್ಞರಿಂದ ಮಕ್ಕಳ ತಾಯಂದಿರಿಗೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡುವುದು.
– ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಕುರಿತು ಮಾಹಿತಿ ನೀಡುವುದು.

 ದೇಶದ ಅಪೌಷ್ಟಿಕತೆ ಸ್ಥಿತಿ
– 10 ಮಕ್ಕಳಲ್ಲಿ 4 ಮಕ್ಕಳ ಬೆಳವಣಿಗೆ ಕುಂಠಿತ.
– ಶೇ. 39.3ರಷ್ಟು ಕುಬj ಬೆಳವಣಿಗೆ.
– 10 ಮಕ್ಕಳಲ್ಲಿ 3 ಮಕ್ಕಳ ತೂಕ ಕಡಿಮೆ.
– 5 ಮಕ್ಕಳ ಪೈಕಿ ಮೂವರಲ್ಲಿ ರಕ್ತ ಹೀನತೆ ಸಮಸ್ಯೆ.

Advertisement

Udayavani is now on Telegram. Click here to join our channel and stay updated with the latest news.

Next