Advertisement

ಮಾನವ ಕಲ್ಯಾಣ ಆವಿಷ್ಕಾರಗಳ ಗುರಿಯಾಗಲಿ: ಪ್ರೊ|ಹಲಸೆ

06:19 AM Feb 26, 2019 | Team Udayavani |

ಹರಿಹರ: ಮಾನವ ಕಲ್ಯಾಣವೇ ವೈಜ್ಞಾನಿಕ ಆವಿಷ್ಕಾರಗಳ ಮೂಲ ಗುರಿಯಾಗಿರಬೇಕು ಎಂದು ದಾವಣಗೆರೆ ವಿವಿ ಉಪಕುಲಪತಿ ಪ್ರೊ| ಎಸ್‌.ವಿ.ಹಲಸೆ ಹೇಳಿದರು. ನಗರದ ಎಸ್‌ಜೆವಿಪಿ ಕಾಲೇಜಿನಲ್ಲಿ ಸೋಮವಾರ ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ ವಿಭಾಗಗಳು ಆಯೋಜಿಸಿದ್ದ ಪ್ರಸೆಂಟ್‌ ಸೆನಾರಿಯೋ ಆಫ್‌ ಬೇಸಿಕ್‌ ಆ್ಯಂಡ್‌ ಅಒಪ್ಲೈಡ್‌ ಬಯೋಸೆ„ನ್ಸ್‌ ವಿಷಯದ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ವಿಜ್ಞಾನದ ಆವಿಷ್ಕಾರಗಳು ಜನಸಾಮಾನ್ಯರಿಗೆ ಉಪಯೋಗಕಾರಿ ಆಗಿರಬೇಕು ಎಂದರು. 

Advertisement

ವಿವಿಧ ರೀತಿಯ ಮಾಲಿನ್ಯ ಜಗತ್ತನ್ನು ಕಾಡುತ್ತಿದೆ. ಘನತ್ಯಾಜ್ಯ ಮತ್ತು ವೈದ್ಯಕೀಯ ತ್ಯಾಜ್ಯದ ಸಮರ್ಪಕ ವಿಲೇವಾರಿ ದೊಡ್ಡ ಸವಾಲಾಗಿದೆ. ಆಧುನಿಕ ಯುಗದ ಇಂತಹ ಸವಾಲುಗಳಿಗೆ ವಿಜ್ಞಾನದಲ್ಲಿ ಪರಿಹಾರ ಕಂಡುಕೊಳ್ಳಬೇಕು. ಮೂಲ ವಿಜ್ಞಾನದ ಬೇರನ್ನು ಹಿಡಿದು ಅನ್ವಯಿಕ ವಿಜ್ಞಾನದಲ್ಲಿ ಆವಿಷ್ಕಾರ ಮಾಡುವ ಮೂಲಕ ಮನುಕುಲದ ಸಮಸ್ಯೆಗಳನ್ನು ದೂರಗೊಳಿಸಬೇಕಿದೆ. ಪದವಿ ಹಂತದಲ್ಲಿ ಮೂಲ ವಿಜ್ಞಾನ, ಸ್ನಾತ್ತಕೋತ್ತರ ಹಂತದಲ್ಲಿ ಅನ್ವಯಿಕ ವಿಜ್ಞಾನಕ್ಕೆ ಒತ್ತು ನೀಡಿರುವ ಉದ್ದೇಶ ಇದೇ ಆಗಿದೆ ಎಂದರು.

ವಿದ್ಯಾರ್ಥಿಗಳು, ಸಂಶೋಧಕರು ಮೂಲ ವಿಜ್ಞಾನ ಹಾಗೂ ಸೂಕ್ಷ್ಮ ವಿಜ್ಞಾನ ಕ್ಷೇತ್ರದಲ್ಲಿ ಆಳ ಅಭ್ಯಾಸಕ್ಕೆ ಆದ್ಯತೆ ನೀಡಬೇಕು. ಸೂಕ್ಷ್ಮ ವಿಜ್ಞಾನಗಳ ಅಧ್ಯಯನ, ಸಂಶೋಧನೆಯಿಂದ ಬದುಕಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು, ಮನುಕುಲಕ್ಕೆ ಮತ್ತಷ್ಟು ಅನುಕೂಲ ಮಾಡಿಕೊಡಬಹುದು ಎಂದರು.

ಐಕ್ಯುಎಸಿ ಸಂಚಾಲಕ ಡಾ| ಎ.ಬಿ.ರಾಮಚಂದ್ರಪ್ಪ ಮಾತನಾಡಿ, ವಿಜ್ಞಾನವನ್ನು ಬದುಕಿನ ನೆಲೆಗೆ ಎಳೆತರುವ ಅಗತ್ಯವಿದೆ. ವಿಜ್ಞಾನವನ್ನು ಬದುಕಿಗೆ ಹತ್ತಿರವಾಗಿಸುವ ನಿಟ್ಟಿನಲ್ಲಿ ಈ ವಿಚಾರ ಸಂಕಿರಣ ಆಯೋಜಿಸಿದೆ ಎಂದರು.
 
ವಿಚಾರ ಸಂಕಿರಣದ ಸಂಘಟನಾ ಕಾರ್ಯದರ್ಶಿ ಪ್ರೊ| ಎ.ಎಸ್‌. ಹಿತ್ತಲಮನಿ ಮಾತನಾಡಿ, ಬದಲಾದ ಇಂದಿನ ಪರಿಸರ, ಮೂಲ ವಿಜ್ಞಾನದ ಬಗ್ಗೆ ಅರಿವು ಮೂಡಿಸಬೇಕು. ಪ್ರಕೃತಿಗೆ ಪೂರಕವಾದ ಎಲ್ಲಾ ರೀತಿಯ ಜೀವಿಗಳನ್ನು, ಸಸ್ಯಗಳನ್ನು, ಗಿಡ, ಮರಗಳ ರಕ್ಷಣೆ ಹಾಗೂ ಅವುಗಳ ಬಗ್ಗೆ ತಿಳಿದುಕೊಳ್ಳಬೇಕಿದೆ ಎಂದರು.

ಮೊದಲ ತಾಂತ್ರಿಕ ಗೋಷ್ಠಿಯಲ್ಲಿ ಗೋವಾ ವಿವಿ ಮರೀನ್‌ ಸೈನ್ಸ್‌ ವಿಭಾಗದ ಡಾ| ಚಂದ್ರಶೇಖರ್‌ ಯು. ರಿವೋನ್ಕರ್‌ ಮಾತನಾಡಿ, ಒಂದು ವರದಿಯ ಪ್ರಕಾರ ಭೂಮಿ ಮೇಲಿನ ಎಲ್ಲಾ ಜೀವಿಗಳಿಗೆ ಶೇ.60ಕ್ಕಿಂತ ಹೆಚ್ಚು ಆಮ್ಲಜನಕ ಸಮುದ್ರದಲ್ಲಿರುವ ಸಣ್ಣ, ಸಣ್ಣ ಸಸ್ಯರಾಶಿಯಿಂದ ದೊರಕುತ್ತದೆ. ಸಮುದ್ರದ ಈ ಸಸ್ಯರಾಶಿಯ ಅಸ್ತಿತ್ವಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
 
ಸಂಸ್ಥೆ ಉಪಾಧ್ಯಕ್ಷ ಡಿ.ಎಂ.ಹಾಲಸ್ವಾಮಿ ಉದ್ಘಾಟಿಸಿದರು. ಪ್ರಾಚಾರ್ಯ ಪ್ರೊ| ಹದಡಿ ಯಲ್ಲಪ್ಪ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ಕಾರ್ಯದರ್ಶಿ ಪ್ರೊ| ಜಿ.ಶಕುಂತಲಮ್ಮ, ಕಾರವಾರ ಸ್ನಾತಕೋತ್ತರ ಕೇಂದ್ರದ ಮರೀನ್‌ ಬಯಾಲಜಿ ವಿಭಾಗ ಮುಖ್ಯಸ್ಥ ಡಾ| ಜಗನ್ನಾಥ ರಾಥೋಡ್‌, ಉಪನ್ಯಾಸಕರಾದ ವೀರೇಶ್‌ ಬಿ.ಶೆಟ್ಟರ್‌, ಬಿ.ಎಂ. ಸದಾಶಿವಯ್ಯ, ಮೊಹಮ್ಮದ್‌ ಸ್ವಾಲೇಹಾ, ಎಂ.ಜೆ.ಮಹೇಶ್‌, ವರ್ಷಾ ಕಾಟ್ವೆ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next