ಮಾಗಡಿ: ಸಮಾಜದ ಸರ್ವತೋಮುಖ ಬೆಳವಣಿಗೆಯ ಜೊತೆಗೆ ಆರೋಗ್ಯವಂತ ಸಮಾಜ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿ ಕೊಂಡು ಪರೋಪಕಾರ ಮಾಡುವುದೇ ನಮ್ಮ ಗುರಿ ಎಂದು ವಾಸವಿ ಯುವಜನ ಸಂಘದ ಅಧ್ಯಕ್ಷ ರಜತ್.ಎಸ್.ಆರ್. ತಿಳಿಸಿದರು.
ಪಟ್ಟಣದ ಕನ್ನಿಕಾ ಮಹಲ್ನಲ್ಲಿ ವಾಸವಿ ಯುವಜನ ಸಂಘ ಹಾಗೂ ಬೆಂಗಳೂರಿನ ಪೀಪಲ್ ಟ್ರೀ ಆಸ್ಪತ್ರೆಯ ಸಹಯೋಗದಲ್ಲಿ ವಾಸವಿ ಜಯಂತಿ ಅಂಗವಾಗಿ ನಡೆದ ಆರೋಗ್ಯ ಉಚಿತ ತಪಾಸಣೆ ಬೃಹತ್ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ದೇಶದ ಅಭಿವೃದ್ಧಿಯಲ್ಲಿ ಯುವಜನತೆಯ ಆರೋಗ್ಯ ಬಹಳ ಮುಖ್ಯ ಪಾತ್ರವಸಲಿದೆ. ಯುವಕರು ಮೊಬೈಲ್, ಸಿನಿಮಾ, ಇತರೆ ದುಷ್ಟಚಟಗಳಿಂದ ದೂರ ಉಳಿಯಬೇಕು. ದೀನರ ಸೇವೆಯೇ ದೇವರ ಸೇವೆ ಎಂದು ನಂಬಿ ಧಾರ್ಮಿಕ ಮತ್ತು ಆರೋಗ್ಯ ಸುಧಾರಣೆಯ ಬಗ್ಗೆ ಅರಿವು ಮೂಡಿಸಲು ಮುಂದಾಗಬೇಕಿದೆ. ಯುವಕರು ಇಳಿವಯಸ್ಸಿನ ಪೋಷಕರ ರಕ್ಷಣೆಯ ಕಡೆಗೆ ಹೆಚ್ಚಿನ ಗಮನಹರಿಸಬೇಕಿದೆ ಎಂದು ಹೇಳಿದರು.
ವ್ಯಾಪಾರ ಮಾಡುವುದು ಜೀವನದ ಮುಖ್ಯ ಗುರಿಯಾದರೂ ಸಹ ಮಾನವೀಯತೆಯ ಕಡೆಗೂ ಆದ್ಯತೆ ನೀಡಲಾಗುವುದು. ಪರಿಸರ, ಜಲಮೂಲ, ಸ್ಮಾರಕಗಳ ರಕ್ಷಣೆಯ ಜತೆಗೆ ಮಹಿಳಾ ಜಾಗೃತಿ ಮತ್ತು ಬಡವರ ಆರೋಗ್ಯ ಸುಧಾರಣೆಗೆ ಶಿಬಿರಗಳ ಮೂಲಕ ನೆರವಾಗುವುದು ನಮ್ಮ ಮುಖ್ಯ ಉದ್ದೇಶವಾಗಿದೆ ಎಂದರು.
ಸಂಘದ ಕಾರ್ಯದರ್ಶಿ ಬಾಲಾಜಿ ಆನಂದ್ ಮಾತನಾಡಿ, ಸನಾತನ ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಮುಂದುವರಿಸಲಾಗುವುದು. ಒಟ್ಟಿನಲ್ಲಿ ಆರೋಗ್ಯಕರ ಸಮಾಜ ದೇಶದ ಪ್ರಗತಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಆರ್ಯವೈಶ್ಯ ಮಂಡಳಿಯ ಅಧ್ಯಕ್ಷ ಎಸ್.ಆರ್.ರಮೇಶ್ ಗುಪ್ತ ಮಾತನಾಡಿ, ವಾಸವಿ ಯುವಜನ ಸಂಘದವರು ಮಾಡುವ ಸಮಾಜ ಸೇವಾ ಕಾರ್ಯಗಳಿಗೆ ಬೆಂಬಲ ನೀಡಲಾಗುವುದು. ಸಮಾಜ ಸೇವೆಯೇ ನಮ್ಮ ಗುರಿ ಎಂದರು.
ಕರ್ನಾಟಕ ಆರ್ಯವೈಶ್ಯ ಯುವಜನ ಮಹಾಸಭಾ ಅಧ್ಯಕ್ಷ ಎಸ್.ಎನ್.ಶಭರೀಶ್, ಯುವಪರಿಷತ್ ಅಧ್ಯಕ್ಷ ಸಂದೀಪ್.ಎಚ್.ಎಂ, ಸ್ವರೂಪ್, ಗೋವರ್ಧನ್, ಕೃಷ್ಣ.ಬಿ.ಎಸ್, ರಸ್ವಂತ್, ಪುನೀತ್, ಸುಮನ್, ಸುಹಾಸ್, ಅಮೃತ್, ರಾಹುಲ್, ರಂಜಿತ್, ಮೋತ್, ಅಜೆಯ್, ನಾಗಾರ್ಜುನ್, ಪೀಪಲ್ ಟ್ರೀ ಆಸ್ಪತ್ರೆ ಎಚ್.ಜಿ.ಮಂಜುನಾಥ್ ಕಾರ್ಯಕ್ರಮ ದಲ್ಲಿ ಪಾಲ್ಗೊಂಡಿದ್ದರು.
ಶಿಬಿರದಲ್ಲಿ ಪಾಲ್ಗೊಂಡಿದ್ದ ನೂರಾರು ರೋಗಗಿಳನ್ನು ತಪಾಸಣೆ ಮಾಡಿ, ಔಷಧ ನೀಡಲಾಯಿತು.