Advertisement

ಮಂತ್ರ ಮುಗ್ಧ ಚಿತ್ರ ವೈಭವ

12:55 AM Jan 19, 2019 | |

ಮಂತ್ರಾಲಯದ ಗುರು ರಾಘವೇಂದ್ರರ ಸನ್ನಿಧಾನವನ್ನು ಕಣ್ತುಂಬಿಕೊಳ್ಳುವ ಸುಖವೇ ಬೇರೆ. ಅದು ಆತ್ಮಕ್ಕೆ ದಕ್ಕುವ ಆನಂದ. ರಾಯರ ಸ್ಥಳ ಮಹಿಮೆಯನ್ನು ಸಾರುವ, ಮಂತ್ರಾಲಯದ ದಿಗªರ್ಶನ ಮಾಡಿಕೊಡುವ ಕೃತಿಯೊಂದು ಇದೀಗ ಅನಾವರಣಗೊಳ್ಳುತ್ತಿದೆ. ಬೃಹತ್‌ ಆಲ್ಬಮ್ಮಿನಂತೆ ಇರುವ ಹೊತ್ತಗೆ, ಮಂತ್ರಾಲಯದ ಮಹಿಮೆಯನ್ನು ಅಪರೂಪದ ಚಿತ್ರಗಳೊಂದಿಗೆ ಸಾರುತ್ತದೆ.

Advertisement

ಆ ಕೃತಿಯ ಹೆಸರು “ಗುರುವಿನಾಲಯ ಮಂತ್ರಾಲಯ’. ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಜೀವನ ಚರಿತ್ರೆ, ಪರಂಪರೆ ಮತ್ತು ಶ್ರೀ ಮಠದ ಸಮಗ್ರ ಚಿತ್ರಣ ಇರುವ “ಗುರುವಿನಾಲಯ ಮಂತ್ರಾಲಯ’ ಚಿತ್ರಸಂಪುಟವು ಸೋಮವಾರ ಲೋಕಾರ್ಪಣೆಗೊಳ್ಳುತ್ತಿದೆ. ಪೂರ್ವಾಶ್ರಮ ವಂಶ ಬೀಗಮುದ್ರೆ ಮನೆತನದ ಹಿನ್ನೆಲೆ, ಜೀವನದ ಕತೆ ಹೇಳುವ ವರ್ಣಚಿತ್ರ ಶಾಲೆ, ಶ್ರೀಗುರುರಾಜರಿಂದ ರಚಿತವಾದ ಗ್ರಂಥಗಳು, ಅಮರ ಸಂದೇಶ, ಮಂತ್ರಾಲಯದ ಒಳನೋಟ, ಬೃಂದಾವನದ ವೈಶಿಷ್ಟé, ಶ್ರೀ ಸಂಸ್ಥಾನದ ಪೂಜಾ ವಿಗ್ರಹಗಳು, ಭಂಡಾರ, ಅಪೂರ್ವ ರಾಯಸಗಳು, ಶಾಸನಗಳು, ರಾಯರ ಮೃತ್ತಿಕಾ ಬೃಂದಾವನಗಳ ಸಚಿತ್ರ ಮಾಹಿತಿ, ರಾಯರ ನಂತರ ಪೀಠವನ್ನಾಳಿದ ಮಹೋನ್ನತರು, ಅಂತರಂಗದ ಭಕ್ತರು, ಹರಿದಾಸ ಸಾಹಿತ್ಯಕ್ಕೆ ಗುರುರಾಜರ ಕೊಡುಗೆ, ವಿದೇಶಗಳಲ್ಲಿ ರಾಯರ ಮಹಿಮೆ… ಹೀಗೆ ರಾಯರ ಬದುಕಿನ ಅಪೂರ್ವ ದೃಶ್ಯಕಲಾ ವೈಭವವೇ ಈ ಕೃತಿಯಲ್ಲಿದೆ.

ಮಂತ್ರಾಲಯದ ಶ್ರೀ ರಾಘವೇಂದ್ರ ಮಠದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದರು, ಹರಿಹರಪುರದ ಆದಿಶಂಕರಾಚಾರ್ಯ ಶಾರದ ಲಕ್ಷ್ಮೀ ನರಸಿಂಹ ಪೀಠದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳು ಮತ್ತು ಮೇಲುಕೋಟೆಯ ಶ್ರೀ ಯದುಗಿರಿ ಯತಿರಾಜ ರಾಮಾನುಜ ನಾರಾಯಣ ಜೀಯರ್‌ ಅವರ ಸಾನ್ನಿಧ್ಯದಲ್ಲಿ ಸಮಾರಂಭ ನಡೆಯಲಿದೆ. ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯನ್ಯಾಯಮೂರ್ತಿ ಎಂ.ಎನ್‌. ವೆಂಕಟಾಚಲಯ್ಯ, ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್‌ ಮತ್ತು ಜಯನಗರದ ಶಾಸಕಿ
ಸೌಮ್ಯ ರೆಡ್ಡಿ ಮುಖ್ಯಅತಿಥಿಗಳಾಗಿ ಆಗಮಿಸುವರು.

ಕೃತಿ ಲೋಕಾರ್ಪಣೆ
ಯಾವಾಗ?: ಜ. 21, ಸೋಮವಾರ ಸಂಜೆ 6.30
ಎಲ್ಲಿ?: ಶ್ರೀ ರಾಘವೇಂದ್ರಸ್ವಾಮಿ ಮಠ, ಜಯನಗರ 5ನೇ ಬ್ಲಾಕ್‌
ಸಂಪರ್ಕ: 98801 81803

Advertisement

Udayavani is now on Telegram. Click here to join our channel and stay updated with the latest news.

Next