Advertisement

ಮೆಟ್ರೋಗೆ ಗಾಜಿನ ತಡೆಗೋಡೆ

12:30 AM Jan 19, 2019 | |

ಕೋಲ್ಕತಾ: ಮೆಟ್ರೋ ರೈಲು ನಿಲ್ದಾಣಗಳು ಆತ್ಮಹತ್ಯೆ ಮಾಡಿಕೊಳ್ಳುವವರ ಹೊಸ ತಾಣಗಳಾಗುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಕೋಲ್ಕತಾ ಮೆಟ್ರೋ ರೈಲು ನಿಗಮ, ನಗರದ ಮೆಟ್ರೋ ರೈಲು ನಿಲ್ದಾಣಗಳಲ್ಲಿ ಫ್ಲಾಟ್‌ಫಾರಂ ಹಾಗೂ ರೈಲುಗಳ ನಡುವೆ “ಸ್ವಯಂಚಾಲಿತ ಸ್ಲೆ„ಡಿಂಗ್‌ ಡೋರ್‌ ಉಳ್ಳ ಗಾಜಿನ ಗೋಡೆ ವ್ಯವಸ್ಥೆ’ ಅಳವಡಿಸಿದೆ. ಈ ಗಾಜಿನ ಗೋಡೆಯಲ್ಲಿನ ಸ್ವಯಂ ಚಾಲಿತ ಸ್ಲೆ„ಡಿಂಗ್‌ ಬಾಗಿಲುಗಳಿಗೆ ಸರಿಸಮಾನವಾಗಿ ರೈಲಿನ ಬಾಗಿಲುಗಳು ಬರುವಂತೆ ನಿಲ್ದಾಣಕ್ಕೆ ಆಗಮಿಸುವ ರೈಲನ್ನು ನಿಲ್ಲಿಸಲಾಗುತ್ತದೆ. ಆಗ, ರೈಲಿನ ಬಾಗಿಲುಗಳು ತೆರೆದಾದ ನಂತರ ಗಾಜಿನ ಗೋಡೆಯ ಬಾಗಿಲುಗಳೂ ಸರಿದುಕೊಳ್ಳುತ್ತವೆ. ರೈಲು ಬರುವ ಹೊತ್ತಿಗೆ ಕೆಲವರು ಹಳಿಗಳ ಮೇಲೆ ಜಿಗಿಯುವುದನ್ನು, ಅಕಸ್ಮಾತ್‌ ಆಗಿ ಜಾರಿ ಬೀಳುವುದನ್ನು ತಪ್ಪಿಸುವಲ್ಲಿ ಇದು ಸಹಕಾರಿ ಯಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next