Advertisement

ಕಟಪಾಡಿ: ಆಡುತ್ತಿದ್ದಾಗ ಜೋಕಾಲಿ ಉರುಳಿಗೆ ಸಿಲುಕಿ ಬಾಲಕಿ ಸಾವು

04:11 PM May 03, 2017 | Harsha Rao |

ಕಾಪು: ಮನೆಯಲ್ಲಿ ಜೋಕಾಲಿ ಆಡುತ್ತಿದ್ದ ವೇಳೆ ಜೋಕಾಲಿ ಕಟ್ಟಿದ ಸೀರೆ ಕುತ್ತಿಗೆಗೆ ಬಿಗಿದು ಬಾಲಕಿ ಮೃತಪಟ್ಟ ಘಟನೆ ಕಟಪಾಡಿ – ಅಗ್ರಹಾರದಲ್ಲಿ ಸೋಮವಾರ ಸಂಜೆ ಸಂಭವಿಸಿದೆ.

Advertisement

ಕಟಪಾಡಿ ಅಗ್ರಹಾರ ನಿವಾಸಿ, ಪೌರೋಹಿತ್ಯ ವೃತ್ತಿಯ ಶಶಿಧರ್‌ ಪುರೋಹಿತ್‌ ಮತ್ತು ಭಾರತಿ ದಂಪತಿಯ ಪುತ್ರಿ ಅಭಿಜ್ಞಾ (10) ಮೃತ ಪಟ್ಟವಳು. ಅಭಿಜ್ಞಾ ಸೋಮವಾರ ಸಂಜೆ 3.30ರ ವೇಳೆಗೆ ಅಕ್ಕ ಮತ್ತು ತಮ್ಮನ ಜತೆಗೂಡಿ, ತನ್ನ ಮನೆಯ ಪರಿಸರದಲ್ಲಿ ಸೀರೆಯಿಂದ ಕಟ್ಟಲಾಗಿದ್ದ ಜೋಕಾಲಿಯಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಘಟನೆ ಬೆಳಕಿಗೆ ಬಂದ ಕೂಡಲೇ ತಾಯಿ ಬೊಬ್ಬೆಹಾಕಿದ್ದು, ಸ್ಥಳೀಯರು ಬಂದು ಬಾಲಕಿಯನ್ನು ಸೀರೆಯ ಉರುಳಿನಿಂದ ಬಿಡಿಸಿ ಆಸ್ಪತ್ರೆಗೆ ಸಾಗಿಸಿದರು. ಆದರೆ ಅಷ್ಟರಲ್ಲೇ ಬಾಲಕಿ ಕೊನೆಯುಸಿರೆಳೆದಿದ್ದಳು ಎನ್ನಲಾಗಿದೆ.

ಅಭಿಜ್ಞಾ ಶಂಕರ ಪುರ ಸೈಂಟ್‌ ಜೋನ್ಸ್‌ ಶಿಕ್ಷಣ ಸಂಸ್ಥೆಯಲ್ಲಿ ನಾಲ್ಕನೇ ತರಗತಿಯಲ್ಲಿ ಶಿಕ್ಷಣ ಪಡೆಯುತ್ತಿದ್ದಳು.

Advertisement

Udayavani is now on Telegram. Click here to join our channel and stay updated with the latest news.

Next