Advertisement

ಪ್ರೀತಿಸದಿದ್ದರೂ ಬೆದರಿಕೆಗೆ ಹೆದರಿ ಬಾಲಕಿ ಆತ್ಮಹತ್ಯೆ

07:53 AM Jun 04, 2019 | Team Udayavani |

ಶ್ರೀನಿವಾಸಪುರ: ಬಾಲಕಿಯನ್ನು ಪ್ರೀತಿಸಿ ವಿಷ ಸೇವಿಸಿದ ಮೂರ್ತಿ (18) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರೀತಿಸದಿದ್ದರೂ ಅಪಪ್ರಚಾರ ಮಾಡಿ ಅವಮಾನಿಸಿದ್ದರಿಂದ ಮನ ನೊಂದ ವಾಣಿ (14) ನೇಣಿಗೆ ಶರಣಾಗಿರುವ ಘಟನೆ ತಾಲೂಕಿನ ಶಿವಪುರ ಗ್ರಾಮದಲ್ಲಿ ಸಂಭವಿಸಿದೆ.

Advertisement

ಇತ್ತೀಚೆಗೆ ನಡೆದ ಬೆಳವಣಿಗೆಗಳಲ್ಲಿ ಹುಡುಗ ವಿಷ ಸೇವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹುಡುಗನ ಪೋಷಕರು ನಮ್ಮ ಮಗ ಸತ್ತರೆ ನಿಮ್ಮ ಕತೆ ನೋಡುತ್ತೇವೆ ಎಂದು ಬಾಲಕಿಯ ಮನೆಯವರಿಗೆ ಧಮಿಕಿ ಹಾಕಿದ್ದಾರೆ. ಘಟನೆಗೂ ನನಗೂ ಸಂಬಂಧವೇ ಇಲ್ಲದಿದ್ದರೂ ನನ್ನ ಮೇಲೆ ಅಪಪ್ರಚಾರ ಮಾಡಿದ್ದಾರೆ ಎಂದು ಬಾಲಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಘಟನೆ ಹಿನ್ನೆಲೆ: 9ನೇ ತರಗತಿ ವಿದ್ಯಾರ್ಥಿನಿ ವಾಣಿಯನ್ನು ಆಕೆ ಒಪ್ಪಿಗೆ ಇಲ್ಲದೆ ಮೂರ್ತಿ (18) ಎಂಬಾತ ನಿನ್ನನ್ನು ಪ್ರೀತಿಸಿದ್ದೇನೆ ಎಂದು ಬುಧವಾರ ಹೇಳಿದಾಗ ಹುಡುಗಿ ನಿರಾಕರಿಸಿದ್ದಾಳೆ. ತನ್ನ ಪ್ರೀತಿ ನಿರಾಕರಿಸಿದ್ದರಿಂದ ಯುವಕ ವಿಷ ಸೇವಿಸಿದ್ದು, ವಿಷಯವರಿತ ಪೋಷಕರು ಅವನನ್ನು ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.ಯುವಕನ ಸಂಬಂಧಿಕರು ನಮ್ಮವನು ಸತ್ತರೆ ನಿಮ್ಮ ಕತೆ ನೋಡುತ್ತೇವೆ. ನಿಮ್ಮ ಹುಡುಗಿ ನಮ್ಮವನೊಂದಿಗೆ ಮಾತಾಡಿರುವುದೆಲ್ಲ ರೆಕಾರ್ಡ್‌ ಆಗಿದೆ ಎಂದು ಶನಿವಾರ ಬಾಲಕಿ ಮನೆ ಬಳಿ ಹೋಗಿ ಯುವಕನ ಪೋಷಕರು ಧಮಿಕಿ ಹಾಕಿದ್ದಾರೆನ್ನಲಾಗಿದೆ.

ನಾನು ಏನು ತಪ್ಪು ಮಾಡದಿದ್ದರೂ ನಮ್ಮ ಮನೆ ಬಳಿ ಬಂದು ನಮ್ಮವರಿಗೆ ಅವಮಾನ ಮಾಡಿದ್ದಾರೆ, ನನ್ನಿಂದ ಯಾರಿಗೂ ತೊಂದರೆ ಆಗಬಾರದೆಂದು ಸೋಮವಾರ ಮಧ್ಯಾಹ್ನ ಯಾರು ಇಲ್ಲದ ವೇಳೆ ಮನೆಯಲ್ಲೇ ನೇಣಿಗೆ ಶರಣಾಗಿದ್ದಾಳೆ.

ದೂರು: ಮೃತ ಯುವತಿ ತಂದೆ ಕೊನಪ್ಪರೆಡ್ಡಿ ಬೆಳಗ್ಗೆ ನಮ್ಮ ಮನೆ ಬಳಿ ಬಂದ ಮೂರ್ತಿ ಸಂಬಂಧಿಕರು ಶ್ರೀನಿವಾಸ್‌ ಮತ್ತು ವೆಂಕಟೇಶ್‌, ವಿಷ ಸೇವಿಸಿರುವುದು ವಾಣಿಯಿಂದಲೆ, ಅವನು ಸತ್ತರೆ ನಿಮ್ಮನ್ನು ಉಳಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು.

Advertisement

ಇದರಿಂದ ಮತ್ತು ನಿಂದಿಸಿದ್ದರಿಂದ ಅವಳು ಸಾವಿಗೀಡಾಗಿದ್ದಾಳೆ. ಅವಳ ಸಾವಿಗೆ ಕಾರಣರಾದವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಶ್ರೀನಿವಾಸಪುರ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಠಾಣೆ ಎದುರು ಪ್ರತಿಭಟನೆ: ರಾತ್ರಿಯಾದರೂ ಸತ್ತ ಬಾಲಕಿಯ ಮರಣೋತ್ತರ ಪರೀಕ್ಷೆ ಮಾಡದೆ ಬೆಳಗ್ಗೆ ಶವ ಪರೀಕ್ಷೆ ಮಾಡಿ ಕೊಡುತ್ತೇವೆಂದು ಪೊಲೀಸರು ಹೇಳಿದ್ದರಿಂದ ಮೃತಳ ಸಂಬಂಧಿಕರು ಠಾಣೆ ಎದುರು ಪ್ರತಿಭಟನೆಗೆ ಮುಂದಾದರು.

ಉದ್ರಿಕ್ತ ಪರಿಸ್ಥಿತಿ ನಿರ್ಮಾಣವಾದ ಕೂಡಲೇ ಸ್ಥಳಕ್ಕೆ ಅಡಿಷನಲ್ ಎಸ್ಪಿ ಜಾಹ್ನವಿ ಬಂದು ಎಲ್ಲರನ್ನು ಸಮಾಧಾನ ಮಾಡಿ ಈಗಲೇ ಶವಪರೀಕ್ಷೆ ಮುಗಿಸಿ, ನಿಮಗೆ ಕಳುಹಿಸುತ್ತೇವೆಂದು ಹೇಳಿ ನಂತರ ಸಮಾಧಾನ ಪಡಿಸಿದರು. ಈ ಸಂದರ್ಭದಲ್ಲಿ ಡಿವೈಎಸ್ಪಿ ಉಮೇಶ್‌ ಹಾಗೂ ಸಿಬ್ಬಂದಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next