Advertisement
“ಐ ಮಿಸ್ ಯೂ’ ಅನ್ನೋ ವಾಕ್ಯ ಎಷ್ಟು ಚಿಕ್ಕದಲ್ವಾ? ಕೇವಲ ಎರಡೇ ಎರಡು ಸೆಕೆಂಡು ಸಾಕು ಹೇಳಿ ಬಿಡೋಕೆ! ಆದ್ರೆ ಅದರ ಅನುಭವ ಆದವನಿಗೇ ಗೊತ್ತು ಅದ್ರ ನೋವು, ಯಾತನೆ, ವಿರಹ. ಪ್ರತಿವಾರವೂ ನಿನ್ನನ್ನು ನೋಡ್ತಿದ್ದ ನಂಗೆ ಒಂದು ವಾರ ನೋಡಿಲ್ಲಾಂದ್ರೂ ಆಗೋ ತಹತಹಿಕೆ ವರ್ಣಿಸೋಕೂ ಆಗಲ್ಲ ಪುಟ್ಟಾ. ಹಾಗಿರೋವಾಗ ಒಂದು ದಿನ ಪೂರ್ತಿ ನಿನೊjತೇನೇ ಕಳೀಬೇಕು ಅಂತಿದ್ದ ನನ್ನ ಕರೆಗೆ ಓಗೊಟ್ಟು ಸಮ್ಮತಿಸಿದ್ಯಲ್ಲಾ, ಎಷ್ಟೊಂದು ಖುಷಿ ಆಯ್ತು ಗೊತ್ತಾ ಆ ದಿನ ನಂಗೆ?
ಎಷ್ಟು ಬೇಗ ನಿನ್ನ ಪಕ್ಕ ಕೂರಿ¤àನೋ ಅಂತಿದ್ದವನಿಗೆ, ನಿನ್ನ ಘಮ ತಾಕಿದಾಗ ಜೀವನಪೂರ್ತಿ ಹೀಗೆ ಒಬ್ರಿಗೊಬ್ರು ಅಂಟ್ಕೊಂಡು ಕೂರ್ಬೇಕು ಅನ್ಸಿದ್ದು ಸುಳ್ಳಲ್ಲ. ಮತ್ತೆ ಶುರು ಮಾಡಿದ್ಯಲ್ಲ ಮಾತು, ಅದು ಹಾಗೆ, ಇದು ಹೀಗೆ… ಅಂತಿರೋವಾಗ ನಡುವಲ್ಲಿ ಪಕ್ಕದ ಸೀಟಲ್ಲಿ ಕೂತಿದ್ದ ಹುಡುಗನ್ನ ತೋರ್ಸಿ ನಂಗೆ ಕಣ್ಣು ಹೊಡಾªಗ ಹೊಟ್ಟೆಯುರಿ ಹೆಚ್ಚಾದ್ರೂ ಸುಮ್ನಿದ್ದೆ. ಆದ್ರೂ ನೀನೇ “ತಮಾಷೆಗೆ’ ಅಂದಾಗ ಅಪ್ಕೊಂಡ್ ಬಿಡ್ಬೇಕು ಅನ್ನಿಸ್ತು ಒಂದ್ಸಲ. ನನ್ನಿಷ್ಟದ ಊರಲ್ಲಿರೋ, ನಿನ್ನಿಷ್ಟದ ದೇವರ ಗುಡಿಗೆ ಕರ್ಕೊಂಡು ಹೋಗಿದ್ದು ಮನಸ್ಸಿಗೆ ತುಂಬಾ ಸಮಾಧಾನ ಕೊಡು¤. ಆ ನಡುವೆ ಆ ಬೆಟ್ಟಕ್ಕೆ ಹೋಗಿ ಸುತ್ತಾಡ್ತಿರೋವಾಗ ನೀನು ಸಡನ್ನಾಗಿ “ತಲೆ ಸುತ್ತುತ್ತಾ ಇದೆ ಅಚ್ಚು’ ಅಂತ ಅಂದಾಗ ತುಂಬಾ ಭಯ ಆಗಿತ್ತು. ಆದ್ರೂ, ನೀನೆ ನಂಗೆ ಸಮಾಧಾನ ಮಾಡ್ತಾ “ಹಕ್ಕೀನ ಗೂಡಲ್ಲಿ ಕೂಡಿ ಹಾಕಿ, ಒಂದೇ ಸಲ ಹಾರೋಕೆ ಬಿಟ್ಟಾಗ ಅದೂR ಹೀಗೇ ಆಗುತ್ತೆ ಅಚ್ಚು’ ಅಂತ ಹೇಳಿದ ಮಾತಿಂದ, ನಿನ್ನ ಅವತ್ತಿನ ಸಂತೋಷಕ್ಕೆ ನಾನೇ ಕಾರಣ ಅಂತ ಖುಷಿಪಟ್ಟೆ. ಅವತ್ತು ನಾನು ಥ್ಯಾಂಕ್ಸ್ ಹೇಳ್ಬೇಕಾಗಿದ್ದುದು ಬಿಸಿಲಿಗೆ! ಆ ಝಳಕ್ಕೆ ನೀನು ನೆರಳನ್ನ ಅರಸಿ ಅರಸಿ ನನ್ ಹತ್ರಾನೇ ಬಂದು ಎದೆಗೊರಗಿದ್ದು ತುಂಬಾ ಸೆಕ್ಯೂರ್ ಫೀಲ್ ಕೊಡು¤. ಅವತ್ತು ಕೂಡ ನೀನು ಪುಟ್ಟಪಾಪು ಅಂತ ಸಾಬೀತು ಮಾಡೆª. ಮಗು ಥರಾ “ಟಂಟಟಾಣ್’ ಅಂತ ಹೇಳ್ತಾ ಬ್ಯಾಗಿಂದ ಬೈನಾಕ್ಯುಲರ್ ತೆಗೆª, ನನ್ ತಲೆ ಮೇಲೆ ಟೋಪಿ ಹಾಕೆª. ಮತ್ತೂಮ್ಮೆ ನಾನ್ ಹೇಳ್ಳೋ ಹಾಗೇ ಶುದ್ಧತರಲೆ ಅನ್ನಿಸಿಕೊಂಡೆ. ಅಷ್ಟೇ ಅಲ್ಲ, ನಾವಿಬ್ರೂ ಬಸ್ಸಿಳಿದು ದೂರಾಗ್ತಿàವಿ ಅನ್ನೋವಾಗ್ಲೆà ಚಡಪಡಿÕ ಆಚೀಚೆ ಯಾರೂ ಇಲ್ಲ ಅಂತ ಗ್ಯಾರಂಟಿ ಮಾಡ್ಕೊಂಡು ಸೀದಾ ಗಲ್ಲಕ್ಕೊತ್ತಿ ಪಪ್ಪಿ ಕೊಟ್ಟೇಬಿಟ್ಯಲ್ಲ. ಅವತ್ತೇ ನಿಂಗೆ “ಗಟ್ಟಿಗಿತ್ತಿ’ ಅಂತ ಇನ್ನೊಂದು ಹೆಸ್ರು ಇಟ್ಟೆ. ಇದೀಗ ರಜೆಗೆ ಮನೆಗೆ ಹೋಗ್ತಿದ್ದೀಯ. ಅಪ್ಪ ಅಮ್ಮನ ಜೊತೇಲೂ ನೀನು ಕಾಲ ಕಳೀಬೇಕು ಅಂತ ನಂದೂ ಆಸೆ. ಪ್ರತೀ ಶನಿವಾರ ಬಂದಾಗ ನಾವಿಬ್ರೂ ಭೇಟಿಯಾಗ್ತಿದ್ದ ಜಾಗ ನಿಂಗೆ ಕಣ್ಣೀರು ತರಿಸುತ್ತೆ, ನಾ ಮಾಡ್ತಿದ್ದ ಒಣಮ್ಯಾಗಿಯ ನೆನಪು ಜೋರಾಗಿ ನೀ ಬಿಕ್ಕಳಿಸ್ತೀಯ. ನಿಮ್ಮೂರಿನ ಗಲ್ಲಿಗಲ್ಲಿಯಲ್ಲೂ ನನ್ನ ಹೆಜ್ಜೆಗುರುತಿದೆ. ನಂಗೂ ಇಲ್ಲಿ ನಿನ್ನ ನೆನಪು ತುಂಬಾ ಕಾಡ್ತವೆ. ನಿನ್ನ ಪುಟ್ಟ ಜೀವ, ಪಟಪಟ ಮಾತು, ಮುದ್ದುಮೊಗ, ಹೂ ನಗು, ಹುಸಿಕೋಪ, ತರಲೆನುಡಿ, ಬಿಸಿಯಪ್ಪುಗೆ ಎಲ್ಲಾನೂ ತುಂಬಾ ಮಿಸ್ ಮಾಡ್ಕೊಳ್ತೀನಿ. ಹಾಗಂತ ಅಳ್ಬೇಡ ಪುಟ್ಟಾ. ರಜೆ ಕಳುª ಬೇಗ ನಮ್ಮೂರಿಗೆ ವಾಪಾಸಾಗು. ನಿನಗೋಸ್ಕರ ಇಲ್ಲೊಂದು ಜೀವ ನಿನ್ನಿಷ್ಟದ ತಿಂಡಿ ತಿನಿಸನ್ನು, ಕೋಟಿ ಮುತ್ತನ್ನು ಹಿಡಿದು ಹಗಲುರಾತ್ರಿ ಕಾಯ್ತಾ ಇರುತ್ತೆ. ಬೇಗ ಬರಿ¤àಯಾ ಅಲ್ವಾ?
Related Articles
Advertisement