Advertisement

ಹಲಸಂಗಿ ಗೆಳೆಯರ ಕೊಡುಗೆ ಅಪಾರ

05:29 PM Jan 30, 2021 | Team Udayavani |

ವಿಜಯಪುರ: ಕನ್ನಡ ನಾಡಿನ ಸಾಹಿತ್ಯ ಕ್ಷೇತ್ರಕ್ಕೆ ನಮ್ಮ ಭಾಗದ ಹಲಸಂಗಿ ಗೆಳೆಯರ ಹಾಗೂ ಪ್ರತಿಷ್ಠಾನದ ಕೊಡುಗೆ ಅಪಾರ. ಹಲಸಂಗಿ ಗೆಳೆಯರ ಬಳಗದ ಹೆಸರಿನಲ್ಲಿ ಸ್ಥಾಪಿಸಿರುವ ಪ್ರತಿಷ್ಠಾನದಿಂದ ಇನ್ನು ಅನೇಕ ಉತ್ತಮ ಕೆಲಸಗಳು ಆಗಬೇಕಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು. ಶುಕ್ರವಾರ ನಗರದ ಜಿಪಂ ಸಭಾಭವನದಲ್ಲಿ ಹಲಸಂಗಿ ಗೆಳೆಯರ ಪ್ರತಿಷ್ಠಾನದ ವತಿಯಿಂದ 2019-20ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಿ ಅವರು ಮಾತನಾಡಿದರು.

Advertisement

ಪ್ರತಿಷ್ಠಾನದಿಂದ ಜಿಲ್ಲೆಯ ಚಡಚಣ ಭಾಗದ ಅದ್ವಿತೀಯ ಸಾಹಿತ್ಯ ಸಾಧಕರನ್ನು ಪರಿಚಯಿಸುವ ಹಾಗೂ ಯುವಜನರಿಗೂ ಅವುಗಳನ್ನು ತಲುಪಿಸುವ ಮಹತ್ವದ
ಕಾರ್ಯವಾಗಬೇಕಿದೆ. ಪ್ರತಿಷ್ಠಾನ ಇನ್ನಷ್ಟು ಬೆಳೆಯಲಿ, ಅದಕ್ಕೆ ಎಲ್ಲರೂ ಪ್ರೋತ್ಸಾಹಿಸಬೇಕು ಎಂದರು. 2019ನೇ ಸಾಲಿಗಾಗಿ ಬೆಳಗಾವಿಯ ಡಾ| ಜಿನದತ್ತ ದೇಸಾಯಿ, ಮೈಸೂರಿನ ವೈ.ಸಿ. ಭಾನುಮತಿ, ಮಂಡ್ಯದ ಡಾ| ರಾಮೇಗೌಡ, ಕದ್ರಾದ ಅಕ್ಷತಾ ಕೃಷ್ಣಮೂರ್ತಿ, 2020ನೇ ಸಾಲಿಗಾಗಿ ಕಾಂತಾವರದ ಡಾ.ನಾ. ಮೊಗಸಾಲೆ, ಧಾರವಾಡದ ಡಾ| ಗುರುಲಿಂಗ ಕಾಪ್ಸೆ, ಬಾಗಲಕೋಟೆ ಜಿಲ್ಲೆಯ ಬೀಳಗಿಯ ಶ್ರೀರಾಮ ಇಟ್ಟಣ್ಣವರ, ಧಾರವಾಡದ ಟಿ.ಎಸ್‌. ಗೊರವರ ಅವರಿಗೆ ಪ್ರತಿಷ್ಠಾನದ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿಜೇತ ಹಿರಿಯ ಸಾಹಿತಿಗಳಿಗೆ 51 ಸಾವಿರ ರೂ. ನಗದು ಹಾಗೂ ಕಿರಿಯ ಸಾಹಿತಿಗಳಿಗೆ 25 ಸಾವಿರ ರೂ. ನಗದು ಸಹಿತ ಪ್ರಶಸ್ತಿ ಫಲಕ ವಿತರಿಸಲಾಯಿತು.

ವಿಶ್ರಾಂತ ಪೊಲೀಸ್‌ ಮಹಾ ನಿರ್ದೇಶಕ ಶಂಕರ ಬಿದರಿ, ಬೆಂಗಳೂರು, ವಿಶ್ರಾಂತ ಕುಲಪತಿ ಮಲ್ಲೇಪುರಂ ವೆಂಕಟೇಶ, ವಚನ ಪಿತಾಮಹ ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ| ಎಂ.ಎಸ್‌. ಮದಭಾವಿ, ಹಿರಿಯ ಸಾಹಿತಿ ಚನ್ನಪ್ಪ ಕಟ್ಟಿ, ಹಲಸಂಗಿ ಗೆಳೆಯರ ಬಳಗದ ಪ್ರತಿಷ್ಠಾನದ ಅಧ್ಯಕ್ಷರಾದ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಇತರರು ವೇದಿಕೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next