Advertisement

ಜನರಿಕ್‌ಔಷಧ ಮಳಿಗೆ ಬಾಗಿಲೇ ತೆಗೆದಿಲ್ಲ

03:53 PM May 19, 2019 | Suhan S |

ರಾಮನಗರ: ನಗರದ ಜಿಲ್ಲಾಸ್ಪತ್ರೆ ಆವರಣದ ಲ್ಲಿರುವ ಜೆನರಿಕ್‌ ಔಷಧ ಮಳಿಗೆ ಬಾಗಿಲು ಬಹು ತೇಕ ಬಾಗಿಲು ಯಾವಾಗಲೂ ಮುಚ್ಚೇ ಇರುತ್ತದೆ. ಇದರಿಂದಾಗಿ ಅಗತ್ಯವಿರುವ‌ ಔಷಧಗಳು ತಮಗೆ ದೊರೆಯುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

Advertisement

ಸಾರ್ವಜನಿಕರ ಆರೋಪ: ಔಷಧ ಅಗತ್ಯವಿರುವ ಸಂದರ್ಭದಲ್ಲೆಲ್ಲ ಜಿಲ್ಲಾ ಸ್ಪತ್ರೆಯ ಆವರಣದಲ್ಲಿರುವ ಜನರಿಕ್‌ ಔಷಧಿ ಮಳಿಗೆಯ ಬಾಗಿಲು ಮುಚ್ಚಿಯೇ ಇರುತ್ತದೆ. ಇದರಿಂದಾಗಿ ದುಬಾರಿ ಬೆಲೆ ಕೊಟ್ಟು ಖಾಸಗಿ ಔಷಧ ಮಳಿಗೆಗಳಲ್ಲಿ ಖರೀಧಿಸಬೇಕಾಗಿದೆ. ಖಾಸಗಿ ಔಷಧ ಮಳಿಗೆಗಳಲ್ಲಿ 30 ರೂಪಾಯಿಗೆ ಸಿಗುವ ಔಷಧ ಜೆನರಿಕ್‌ ಔಷಧ ಮಳಿಗೆಯಲ್ಲಿ 15 ರಿಂದ 20 ರೂಪಾಯಿಗೆ ಸಿಗುತ್ತದೆ. ಜನರಿಕ್‌ ಔಷಧ ಮಳಿಗೆಯ ಗೋಡೆಯ ಮೇಲೆ ಕೊಟ್ಟಿರುವ ಮಾಹಿತಿಯಂತೆ ಕನಿಷ್ಠ ಶೇ 50ರಷ್ಟು ಕಡಿಮೆಗೆ ತಮಗೆ ಬೇಕಾದ ಔಷಧ ಸಿಗುತ್ತದೆ. ಜನಸಾಮಾನ್ಯರಿಗೆ ಉಪಯೋಗ ವಾಗಲೆಂದೇ ಸರ್ಕಾರ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಜನರಿಕ್‌ ಔಷಧ ಮಳಿಗೆ ತೆರಯಲು ಅವಕಾಶ ಮಾಡಿಕೊಟ್ಟಿದೆ. ಆದರೆ ಇಲ್ಲಿರುವ ಔಷಧ ಮಳಿಗೆಯಿಂದ ತಮಗೇನು ಉಪಯೋಗವೇ ಆಗುತ್ತಿಲ್ಲ ಎಂದು ಅನೇಕ ರೋಗಿಗಳು ಆರೋಪಿಸಿದ್ದಾರೆ.

ಮೇಲಿನವರು ಕ್ರಮಕೆಗೊಂಡಲ್ಲ: ಸರ್ಕಾರಿ ಆಸ್ಪತ್ರೆಯ ಕೆಲವು ವೈದ್ಯರು ಮತ್ತು ಸಿಬ್ಬಂದಿ ಸಹ ಜನರಿಕ್‌ ಔಷಧ ಮಳಿಗೆ ಬಹುತೇಕ ಮುಚ್ಚೇ ಇರುತ್ತದೆ. ಹತ್ತಾರು ರೋಗಿಗಳು ಈ ಬಗ್ಗೆ ದೂರಿದ್ದಾರೆ. ಆದರೂ ಮೇಲಧಿ ಕಾರಿಗಳು ಕ್ರಮಕೈಗೊಂಡಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಪ್ರಧಾನಮಂತ್ರಿ ಭಾರತೀಯ ಜನೌಷಧ ಕೇಂದ್ರಕ್ಕೆ ಸ್ಥಳವಿಲ್ಲ: ಕೇಂದ್ರ ಸರ್ಕಾರ ಕೆಲ ವರ್ಷಗಳ ಹಿಂದೆ ಪ್ರಧಾನ ಮಂತ್ರಿ ಭಾರತೀಯ ಜನೌಷಧ ಕೇಂದ್ರಗಳನ್ನು ಪರಿಚಯಿಸಿದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಮಾಣಿಕರಿಸಿದ ತಯಾರಿಕಾ ಸಂಸ್ಥೆಗಳಿಂದ ಪಡೆದುಕೊಂಡ ಮತ್ತು ಎನ್‌ಎಬಿಎಲ್ (ನ್ಯಾಷನಲ್ ಅಕ್ರೆಡಿಷನ್‌ ಬೋರ್ಡ್‌ ಫಾರ್‌ ಟೆಸ್ಟಿಂಗ್‌ ಅಂಡ್‌ ಕ್ಯಾಲಿಬಿರೇಷನ್‌) ಮೂಲ ಕ ಪುನಃ ಪರೀಕ್ಷೆಗೆ ಒಳಪಡಿಸಿ, ಈ ಸಂಸ್ಥೆ ಯಿಂದ ಒಪ್ಪಿಗೆಯ ಪತ್ರ ಪಡೆದುಕೊಂಡ ನಂತರವಷ್ಟೇ ಔಷಧಗಳನ್ನು ಜನೌಷಧ ಕೇಂದ್ರಗಳಲ್ಲಿ ಮಾರಾಟಕ್ಕೆ ಲಭ್ಯವಾಗುತ್ತಿದೆ. ಸಾಮಾನ್ಯ ಖಾಸಗಿ ಬ್ರಾಂಡ್‌ಗಳಿಗಿಂತ ಸರಿ ಸುಮಾರು ಶೇ.70 ರಿಂದ 80ರಷ್ಟು ಕಡಿಮೆ ಬೆಲೆಗೆ ಸಿಗುವ ಔಷಧ ಗುಣಮಟ್ಟ ಪ್ರಮಾ ಣೀಕರಿಸಿಕೊಂಡಿದೆ. ಇಂತಹ ಮಳಿಗೆಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ಥಾಪಿಸಲು ಅವಕಾಶ ಮಾಡಿಕೊಡುವಂತೆ ಸರ್ಕಾರ ಆದೇಶಿಸಿದೆ. ಆದರೆ ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಜನ ರಿಕ್‌ ಔಷಧ ಮಳಿಗೆಗೆ ಅವಕಾಶ ಮಾಡಿ ಕೊಟ್ಟಿರುವುದರಿಂದ ಜನೌಷಧ ಕೇಂದ್ರಕ್ಕೆ ಸ್ಥಳಾವಕಾಶ ಇಲ್ಲದಂತಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ರಾಮನಗರದ ಐಜೂರಿನಲ್ಲಿದೆ ಜನೌಷಧ ಕೇಂದ್ರ: ರಾಮನಗರದ ಐಜೂರಿನಲ್ಲಿ ಜನೌಷಧ ಕೇಂದ್ರವಿದೆ. ನೂರಾರು ರೋಗಿ ಗಳು ಜನೌಷಧ ಮಳಿಗೆಯ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. ವಿಶೇಷವಾಗಿ ಮಧುಮೇಹ, ರಕ್ತದೊತ್ತಡದವರು ಹೀಗೆ ದೀರ್ಘ‌ಕಾಲದ ಔಷಧೋಪಚಾರ ಬೇಕಾಗಿರುವ ರೋಗಿ ಗಳು ಜನೌಷಧ ಕೇಂದ್ರದ ಮೊರೆಹೋಗಿ ದ್ದಾರೆ. ಚನ್ನಪಟ್ಟಣ ಮತ್ತು ಮಾಗಡಿ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಜನೌಷಧ ಕೇಂದ್ರಗಳಿವೆ.

Advertisement

● ಬಿ.ವಿ.ಸೂರ್ಯ ಪ್ರಕಾಶ್‌

Advertisement

Udayavani is now on Telegram. Click here to join our channel and stay updated with the latest news.

Next