Advertisement

ಗ್ಯಾಜೆಟಿಯರ್; ನಿಮ್ಮಲ್ಲಿ ಇರಲೇಬೇಕಾದ ಗ್ಯಾಜೆಟ್‌ಗಳು

09:00 PM Nov 11, 2019 | Sriram |

ನಾವು ಬೆಳಗ್ಗೆ ಎದ್ದಾಕ್ಷಣ ಗಡಿಯಾರ ನೋಡುವುದಿಲ್ಲ. ಹಾಸಿಗೆಯ ಪಕ್ಕದಲ್ಲೇ ಅಲ್ಲೆಲ್ಲೋ ಬಿದ್ದಿರುವ ಮೊಬೈಲನ್ನು ಎತ್ತಿಕೊಂಡು ಅರೆಗಣ್ಣಿನಲ್ಲೇ ಗಂಟೆ ಎಷ್ಟಾಯ್ತು ಅಂತ ನೋಡುತ್ತೇವೆ.ಹಾಗೇ, ಮೊಬೈಲ್‌ ಅನ್‌ಲಾಕ್‌ ಮಾಡಿ ಫೇಸ್‌ಬುಕ್ಕನ್ನೋ, ಟ್ವಿಟರನ್ನೋ ನೋಡಲು ಶುರು ಹಚ್ಚಿಕೊಳ್ಳುತ್ತೇವೆ. ಬೆಳಗ್ಗೆ ಎದ್ದಾಗಿನಿಂದ ಶುರುವಾಗುವ ಈ ಗ್ಯಾಜೆಟ್‌ಗಳ ಸಹವಾಸ ರಾತ್ರಿ ಮಲಗುವಾಗ ಸ್ಮಾರ್ಟ್‌ ಫೋನಲ್ಲೇ ಅಲಾರಂ ಸೆಟ್‌ ಮಾಡುವವರೆಗೂ ಸಾಗುತ್ತದೆ. ಯುವಕರ ಫೋನ್‌ಗಳಲ್ಲಿ ಇರಲೇಬೇಕಾದ ಗ್ಯಾಜೆಟ್‌ಗಳು ಹೀಗಿವೆ..

Advertisement

ದಿನ ಬೆಳಗೆದ್ದರೆ ನಾವು ಮೊದಲು ದೇವರನ್ನು ನೋಡುತ್ತೇವೋ ಬಿಡುತ್ತೇವೋ; ಆದರೆ ಗಡಿಯಾರವನ್ನಂತೂ ನೋಡುತ್ತಿದ್ದೆವು. ಅದು ನಮ್ಮ ಅಸ್ತಿತ್ವವನ್ನು ಸಾಬೀತುಪಡಿಸುವ ಒಂದು ಸಾಧನವೂ ಆಗಿತ್ತು. ಬೆಳಗ್ಗೆ ಆರಕ್ಕೆ ಏಳಬೇಕೆಂದರೆ ಗಡಿಯಾರದಲ್ಲಿ ಆರು ಗಂಟೆ ಹೊಡೆಯುತ್ತಿದ್ದ ಹಾಗೆ ನಮ್ಮ ಸುಪ್ತಮನಸ್ಸಿನಲ್ಲೂ ಆರುಗಂಟೆ ಹೊಡೆದು ನಮ್ಮನ್ನು ಎಬ್ಬಿಸುತ್ತಿತ್ತು. ಆದರೆ, ಈಗ ಕಾಲ ಬದಲಾಗಿದೆ. ನಾವು ಬೆಳಗ್ಗೆ ಎದ್ದಾಕ್ಷಣ ಗಡಿಯಾರ ನೋಡುವುದಿಲ್ಲ. ಹಾಸಿಗೆಯ ಪಕ್ಕದಲ್ಲೇ ಅಲ್ಲೆಲ್ಲೋ ಬಿದ್ದಿರುವ ಮೊಬೈಲನ್ನು ಎತ್ತಿಕೊಂಡು, ಅರೆಗಣ್ಣಿನಲ್ಲೇ ಗಂಟೆ ಎಷ್ಟಾಯೆ¤ಂದು ನೋಡುತ್ತೇವೆ. ಆರಾಗಿದ್ದರೆ, ಇನ್ನೊಂದರ್ಧ ಗಂಟೆ ಮಲಗಿದಲ್ಲಿಂದಲೇ ಮೊಬೈಲ್‌ ಅನ್‌ಲಾಕ್‌ ಮಾಡಿ ಫೇಸ್‌ಬುಕ್ಕನ್ನೋ, ಟ್ವಿಟರನ್ನೋ ಅಥವಾ ಮತ್ಯಾವುದೋ ಸೋಷಿಯಲ್‌ ಮೀಡಿಯಾವನ್ನೋ ನೋಡಲು ಶುರು ಹಚ್ಚಿಕೊಳ್ಳುತ್ತೇವೆ.

ಬೆಳಗ್ಗೆ ಎದ್ದಾಗಿನಿಂದ ಶುರುವಾಗುವ ಈ ಗ್ಯಾಜೆಟ್‌ಗಳ ಸಹವಾಸ ರಾತ್ರಿ ಮಲಗುವಾಗ ಸ್ಮಾರ್ಟ್‌ ಫೋನ್‌ನಲ್ಲೇ ಅಲಾರಂ ಸೆಟ್‌ ಮಾಡುವವರೆಗೂ ಸಾಗುತ್ತದೆ. ಇದು ಬಹುತೇಕ ಎಲ್ಲಾ ಯುವ ಜನಾಂಗದ ಕಥೆ.ಈ ಹಿಂದೆ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ನೂರರ ಲೆಕ್ಕದಲ್ಲಿದ್ದ ಆಪ್‌ಗ್ಳ ಸಂಖ್ಯೆ ಈಗ ಲಕ್ಷಗಳಲ್ಲಿದೆ. ಸದ್ಯ ಗೂಗಲ್‌ ಪ್ಲೇ ಒಂದರಲ್ಲೇ 28 ಲಕ್ಷ ಆ್ಯಪ್‌ಗ್ಳಿವೆಯಂತೆ!

ನಾವು ಪ್ರತಿ ಹೆಜ್ಜೆಯಲ್ಲೂ ಸ್ಮಾರ್ಟ್‌ ಆಗಿದ್ದೇವೆ. ಆದರೆ, ಎಲ್ಲರೂ ಎಲ್ಲವನ್ನೂ ಬಳಸಲಾಗದು. ದಿನ ಬೆಳಗಾದರೆ ಕಚೇರಿಗೆ ಹೋಗುವವನಿಗೆ ಬೇಕಾಗುವ ಯಾವುದೋ ಒಂದು ಗ್ಯಾಜೆಟ್‌ ಮನೆಯಲ್ಲೇ ಕುಳಿತಿರುವ ಗೃಹಿಣಿಗೋ, ಕಾಲೇಜಿಗೆ ಹೋಗುವ ಯುವಕ ಯುವತಿಯರಿಗೋ ಉಪಯೋಗವಿಲ್ಲ. ಗಾಯಕನಿಗೆ ಬೇಕಿರುವ ವಾಯ್ಸ… ರೆಕಾರ್ಡರ್‌ ಆ್ಯಪ್‌, ಸಾಹಿತಿಗೆ ಬೇಕಿಲ್ಲ. ಹಾಗೆಯೇ ಸಾಹಿತಿಗೆ ಬೇಕಾಗುವ ಸ್ಮಾರ್ಟ್‌ ನೋಟ್‌ಬುಕ್‌, ಗಾಯಕನಿಗೆ ಉಪಯೋಗಕ್ಕೆ ಬರುವುದಿಲ್ಲ.

ವಿದ್ಯಾರ್ಥಿಗಳು ಕಿಂಡಲ್‌ ಮಾಡ್ತಾರೆ!
ಕಾಲೇಜಿಗೆ ಹೋಗುವಾಗ ಒಬ್ಬರನ್ನೊಬ್ಬರು ಕಿಂಡಲ್‌ ಮಾಡದೇ ಇರುತ್ತಾರೆಯೇ! ಅದೂ ಈಗಿನ ಜಮಾನದ ಕಾಲೇಜು ಹೈಕಳಂತೂ ಕಿಂಡಲ್‌ ಮಾಡುವುದಕ್ಕೆಂದೇ ಹೆಸರಾದವರು. ಅವರ ಬಾಯಲ್ಲೇನೋ ಕಿಂಡಲ್‌ ಇರುತ್ತೆ. ಆದರೆ, ಕೈಯಲ್ಲೂ ಒಂದು ಕಿಂಡಲ್‌ ಇದ್ದರೆ ಒಳ್ಳೆಯದು. ಅಮೇಜಾನ್‌ನ ಕಿಂಡಲ್‌, ಓದುವುದಕ್ಕೆಂದೇ ರೂಪಿಸಿದ ಸಾಧನ. ಅದು ಪುಸ್ತಕ ಓದುವುದನ್ನು ಇನ್ನಷ್ಟು ಸುಲಭವಾಗಿಸಿದ್ದಷ್ಟೇ ಅಲ್ಲ, ಎಲ್ಲಿ ಬೇಕಾದರೂ ಕೈಯಲ್ಲಿ ಹಿಡಿದುಕೊಂಡು ಓದುವ ಅನುಕೂಲವನ್ನೂ ಕಲ್ಪಿಸಿದೆ. ಅಮೇಜಾನ್‌ ಕಿಂಡಲ್‌ನ ಖರ್ಚು ಹೆಚ್ಚೆಂದರೆ ಆಂಡ್ರಾಯx… ಫೋನ್‌ ನಲ್ಲೇ ಹಲವು ರೀತಿಯ ರೀಡಿಂಗ್‌ ಆ್ಯಪ್‌ಗ್ಳಿವೆ. ಇನ್ನು ಎಂಜಿನಿಯರಿಂಗ್‌ ಹಾಗೂ ಇತರ ಕೋರ್ಸ್‌ ವ್ಯಾಸಂಗ ಮಾಡುತ್ತಿರುವವರಿಗೆ ತಮ್ಮ ಪ್ರಾಜೆಕ್ಟ್ಗಳನ್ನು ಉಳಿಸಿಕೊಳ್ಳಲು ಒಂದು ಹಾರ್ಡ್‌ ಡಿಸ್ಕ್ ಬೇಕೇ ಬೇಕು. ಅದು ಇಲ್ಲದಿದ್ದರೆ ಲ್ಯಾಪ್‌ಟಾಪ್‌ ಕೈಕೊಟ್ಟಾಗ ಡೇಟಾ ಉಳಿಸಿಕೊಳ್ಳುವುದು ಕಷ್ಟವಾಗುತ್ತದೆ. ವಿದ್ಯಾರ್ಥಿಗಳು ತಮ್ಮ ತಲೆಗಿಂತಲೂ ಹೆಚ್ಚು ಜೋಪಾನವಾಗಿ ಈ ಹಾರ್ಡ್‌ ಡಿಸ್ಕ್ ಗಳನ್ನು ಕಾಪಾಡಿಕೊಳ್ಳಬೇಕಾಗುತ್ತದೆ.

Advertisement

ಸಂಗೀತ ಕೇಳ್ಳೋದು ಯಾರಿಗೆ ಇಷ್ಟವಿಲ್ಲ? ಹಾಗಂತ ಎಲ್ಲರಿಗೂ ಇದಕ್ಕೆ ಸಮಯ ಸಿಗಬೇಕಲ್ಲ; ಆದರೆ, ವಿದ್ಯಾರ್ಥಿಗಳಿಗೆ ಸಮಯವಂತೂ ಇರುತ್ತದೆ. ಸಂಗೀತದ ಬಗ್ಗೆ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಮನರಂಜನೆಗಾಗಿ ಒಂದು ಇಯರ್‌ ಫೋನ್‌ ಅಥವಾ ಹೆಡ್‌ಫೋನ್‌ ಇಟ್ಟುಕೊಂಡರೆ ಒಳ್ಳೆಯದು. ಹಿಂದಿನ ಸಾಲಿನ ವಿದ್ಯಾರ್ಥಿಗಳು ಕೈಯಲ್ಲಿ ಪುಸ್ತಕ ಹಿಡಿದು ಕಾಲೇಜಿಗೆ ಹೋಗುತ್ತಿರಲಿಲ್ಲ. ಆದರೆ ಈಗ, ಮುಂದಿನ ಸಾಲಿನ ವಿದ್ಯಾರ್ಥಿಗಳೂ ಕಾಲೇಜಿಗೆ ಹೆಚ್ಚಾಗಿ ಪುಸ್ತಕ ಹಿಡಿದು ಹೋಗುವುದಿಲ್ಲ. ಏಕೆಂದರೆ ಸ್ಮಾರ್ಟ್‌ ಫೋನ್‌ನಲ್ಲೇ ನೋಟ್‌ಬುಕ್‌ ಇದೆ.

ಪ್ಲೇ ಸ್ಟೋರ್‌ಗೆ ಹೋದರೆ ಥರಹೇವಾರಿದ್ದು ಸಿಗುತ್ತವೆ. ಆಡಿಯೋ ಕ್ಲಿಪ್ಪಿಂಗ್‌ ಅನ್ನು ಸಂಗ್ರಹಿಸುವ ನೋಟ್‌ಬುಕ್ಕಿಂದ ಹಿಡಿದು, ಸಣ್ಣ ಪುಟ್ಟ ಟಿಪ್ಪಣಿಗಳನ್ನು ಮಾಡಿಕೊಳ್ಳುವ ವೈವಿಧ್ಯಮಯ ನೋಟ್‌ಬುಕ್‌ಗಳು ಸಿಗುತ್ತವೆ.

ಕೆಲಸಕ್ಕೆ ಹೋಗೋರಿಗೆ
ಹಾಗಾದರೆ ದಿನಬೆಳಗೆದ್ದರೆ ಮನೆಯಿಂದ ತಿಂಡಿ ಡಬ್ಬ ಹಿಡಿದು ಕೆಲಸಕ್ಕೆ ಹೋಗುವ ವೃತ್ತಿಪರರಿಗೆ..? ಅವರಿಗೂ ಇದೆ. ಸಾಮಾನ್ಯವಾಗಿ ಕಚೇರಿಯಲ್ಲಿ ಕುಳಿತು ಕೆಲಸ ಮಾಡುವವರಿಗೆ ಸ್ಟಿಕ್ಕಿ ನೋಟ್‌ಗಳು ತುಂಬ ಅಗತ್ಯವಿದ್ದು. ಚೂರು ಕಾಗದದ ತುಂಡಿನಲ್ಲಿ, ಯಾವತ್ತೂ ಮರೆತೇ ಹೋಗುವ ಯಾವುದೋ ಅಪ್ಲಿಕೇಶನ್‌ ಪಾಸ್ವರ್ಡ್‌ ಅನ್ನು ಬರೆದಿಟ್ಟುಕೊಳ್ಳುವುದೋ ಅಥವಾ ಮತ್ತೇನೋ ನಾಲ್ಕು ಸಂಖ್ಯೆಗಳನ್ನು ಬರೆದಿಟ್ಟುಕೊಳ್ಳಲು ಈ ಸ್ಟಿಕ್ಕಿ ನೋಟ್‌ ಹುಡುಕುತ್ತೇವೆ.

ಇತ್ತೀಚಿಗೆ ಒಂದು ಸಣ್ಣ ಸ್ಟಿಕ್ಕಿ ನೋಟ್‌ ಪ್ರಿಂಟರ್‌ ಕೂಡ ಬಂದಿವೆ. ಸ್ಮಾರ್ಟ್‌ ಫೋನ್‌ ನ್ನಲ್ಲಿ ಬರೆದು, ಓಕೆ ಕೊಟ್ಟರೆ ಪುಟ್ಟ ಪ್ರಿಂಟರ್‌ನಲ್ಲಿ ಅದು ಪ್ರಿಂಟಾಗಿ ಬರುತ್ತದೆ. ಅದನ್ನು ಕಂಪ್ಯೂಟರಿನ ಅಂಚಿಗೋ, ಡೆಸ್ಕ್ನ ಗೋಡೆಗೋ ಅಂಟಿಸಿ ಕೂರಬಹುದು. ಇನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಪ್ರಸೆಂಟೇಶನ್‌ ಕೊಡುವ ಅಗತ್ಯ ಇರುವವರಿಗೆ ಪೋರ್ಟಬಲ್‌ ಪ್ರೊಜೆಕ್ಟರ್‌ ಕೂಡ ಸಿಗುತ್ತೆ. ಇದು ಸ್ಮಾರ್ಟ್‌ ಬ್ಯಾಂಡ್‌ ಥರಾ ಕೆಲಸ ಮಾಡುತ್ತದೆ. ಸುಮ್ಮನೆ ಕೈಗೆ ಕಟ್ಟಿಕೊಂಡು ಹೋದರೆ ಸಾಕು. ಮೀಟಿಂಗ್‌ ಹಾಲ್‌ನಲ್ಲಿ ಇಟ್ಟುಬಿಟ್ಟರೆ ಪರದೆಯ ಮೇಲೆ ನಮಗೆ ಬೇಕಾದ್ದನ್ನು ಪ್ರಾಜೆಕ್ಟ್ ಮಾಡಬಲ್ಲದು.
ಇಷ್ಟೆಲ್ಲ ಆದಮೇಲೆ ಇಡೀ ದಿನ ಕೂತು ಕೆಲಸ ಮಾಡುವ ಜಡಭರತರಿಗೆ ಬೆಳಗ್ಗೆ ಎದ್ದು ವಾಕಿಂಗ್‌ ಮಾಡುವುದಕ್ಕೋ, ಒಂದು ಮೈಲು ಓಡುವುದಕ್ಕೋ ಒಂದು ರಿಸ್ಟ್‌ ಬ್ಯಾಂಡ್‌ ಇಲ್ಲದಿದ್ದರೆ ಹೇಗೆ? ಥರಹೇವಾರಿ ಸ್ಮಾರ್ಟ್‌ ಬ್ಯಾಂಡ್‌ ಮಾರುಕಟ್ಟೆಯಲ್ಲಿವೆ. ಇವೆಲ್ಲವೂ ಬೆಳಗ್ಗೆ ಎದ್ದು ವಾಕಿಂಗ್‌ ಹಾಗೂ ವ್ಯಾಯಾಮ ಮಾಡಲು ಪ್ರೇರೇಪಿಸುವುದಂತೂ ಸುಳ್ಳಲ್ಲ.

ಅಡುಗೆ ಮನೆಯಲ್ಲೂ
ಮನೆಯಲ್ಲಿ ಗೃಹಿಣಿಯರು ಕುಂಡಗಳಲ್ಲಿ ಗಿಡಗಳನ್ನು ಬೆಳೆಸುವುದು ಸಾಮಾನ್ಯ. ಅದಕ್ಕೆ ಕೆಲವೊಮ್ಮೆ ಅಗತ್ಯಕ್ಕಿಂತ ಹೆಚ್ಚು ನೀರು ಹಾಕುವುದು ಅಥವಾ ಕೆಲವು ದಿನಗಳವರೆಗೆ ನೀರನ್ನೇ ಹಾಕದೇ ಒಣಗಿಸುವುದೆಲ್ಲ ನಡೆಯುತ್ತಲೇ ಇರುತ್ತದೆ. ಇಂಥ ಸಮಸ್ಯೆಯನ್ನು ತಪ್ಪಿಸಲೆಂದೇ ಸ್ಮಾರ್ಟ್‌ ಪಾಟYಳು ಸಿಗುತ್ತವೆ. ಇವುಗಳಿಗೆ ಒಂದು ಬಾಟಲಲ್ಲಿ ನೀರು ಹಾಕಿಟ್ಟರೆ ಸಾಕು, ಅಗತ್ಯವಿದ್ದಾಗ ಈ ಬಾಟಲಿಯಿಂದ ಸ್ವಯಂಚಾಲಿತವಾಗಿ ಗಿಡಗಳಿಗೆ ನೀರುಣಿಸುತ್ತವೆ.ಇದರ ಹೊರತಾಗಿ ನಮ್ಮ ಹವ್ಯಾಸಗಳಿಗಂತೂ ಥರಹೇವಾರಿ ಆ್ಯಪ್‌ಗ್ಳಿವೆ. ಹಾಡುವ ಹವ್ಯಾಸಿಗಳಿಗೆ ಹಲವು ರೀತಿಯ ವಾಯ್ಸ… ರೆಕಾಡರ್‌ಗಳಿವೆ. ಇವುಗಳನ್ನು ಒಂದು ಒಳ್ಳೆ ಗುಣಮಟ್ಟ ಮೈಕ್‌ ಇರುವ ಸ್ಮಾರ್ಟ್‌ ಫೋನ್‌ನ°ಲ್ಲಿ
ಇನ್ಸಾ$rಲ್‌ ಮಾಡಿಕೊಂಡರೆ ಯಾವ ಪೊ›ಫೆಷನಲ್‌ ಮೈಕ್‌ ಅನ್ನೂ ನಾಚಿಸುತ್ತದೆ. ಕೈಯಲ್ಲೇ ಪ್ರಿಸ್ಕ್ರಿಪ್ಷನ್‌ ಬರೆಯುವ ಹವ್ಯಾಸವಿರುವ ವೈದ್ಯರಿಗೆ ಅದನ್ನು ಕಂಪ್ಯೂಟರಿಗೆ ಅಳವಡಿಸಲು ಸುಲಭವಾಗುವುದಕ್ಕೆ ಸ್ಕ್ಯಾನ್‌ ಮಾರ್ಕರ್‌ಗಳು ಲಭ್ಯವಿವೆ. ಇದರ ಮೂಲಕ ಅಕ್ಷರವನ್ನು ಸ್ಕ್ಯಾನ್‌ ಮಾಡಿದರೆ ಅದು ಕಂಪ್ಯೂಟರಿನಲ್ಲಿ ಮೂಡುತ್ತದೆ.

ಟ್ರಾವಲ್‌ ಮಾಡೋರಿಗೆ
ಪದೇ ಪದೆ ಟ್ರಾವೆಲ್‌ ಮಾಡುವವರಿಗೆ ಒಂದು ಸೋಲಾರ್‌ ಚಾರ್ಜರ್‌ ಹಾಗೂ ಹೆಚ್ಚು ಕೆಪಾಸಿಟಿಯ ಪವರ್‌ ಬ್ಯಾಂಕ್‌ ಇಲ್ಲದಿದ್ದರೆ ಜೀವನ ದುರ್ಭರವಾದೀತು. ಈಗಂತೂ 10 ಸಾವಿರ ಎಂಎಎಚ್‌ ಸಾಮರ್ಥ್ಯದ ಪವರ್‌ ಬ್ಯಾಂಕ್‌ಗಳು ಕಡಿಮೆ ದರದಲ್ಲಿ ಸಿಗುತ್ತವೆ. ಫೋಟೊಗ್ರಫಿ ಹುಚ್ಚಿರುವವರಿಗೆ ಸೆರೆಹಿಡಿದ ಫೋಟೋಗಳನ್ನು ಸ್ನೇಹಿತರಿಗೆ ಶೇರ್‌ ಮಾಡುವುದೇ ಒಂದು ದೊಡ್ಡ ಚಿಂತೆ. ಇದಕ್ಕಾಗಿಯೇ ವೈಫೈ ಇರುವ ಮೆಮೊರಿ ಕಾರ್ಡ್‌ಗಳು ಲಭ್ಯವಿವೆ. ಮೆಮೊರಿ ಕಾರ್ಡಗಳು ಫೋಟೋಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುವುದರ ಜೊತೆಗೆ, ವೈಫೈ ಸಿಗ್ನಲ್‌ಗ‌ಳನ್ನೂ ಹೊರಸೂಸುತ್ತವೆ. ಇವು ಮೆಮೊರಿ ಕಾರ್ಡ್‌ಗಳಳನ್ನು ಸ್ಮಾರ್ಟ್‌ ಫೋನ್‌ಗೆ ವೈಫೈ ಮೂಲಕ ಕನೆಕ್ಟ್ ಮಾಡುತ್ತವೆ. ಆಗ ಮೆಮೊರಿ ಕಾರ್ಡ್‌ನಲ್ಲಿರುವ ಫೋಟೋಗಳನ್ನು ಸ್ಮಾರ್ಟ್‌ಫೋನ್‌ನಲ್ಲಿ ನೋಡಬಹುದು, ಶೇರ್‌ ಮಾಡಬಹುದು, ಎಡಿಟ್‌ ಮಾಡಬಹುದು. ಅಷ್ಟೇ ಯಾಕೆ, ಅಲ್ಲಿಂದಲೇ ಫೇಸ್‌ಬುಕ್‌, ಇನ್‌ಸ್ಟ್ರಾಗ್ರಾಮ್‌ಗೂ ಹಾಕಿ ಸಂತಸ ಪಡಬಹುದು.

-ಶ್ವೇತಾಂಬಿಕಾ

Advertisement

Udayavani is now on Telegram. Click here to join our channel and stay updated with the latest news.

Next